ಮಂಡ್ಯ ಮಿಮ್ಸ್ ಫಲಕದಲ್ಲಿ ಪ್ರಧಾನಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ: ತೀವ್ರ ಆಕ್ರೋಶ
ಮಂಡ್ಯ ಮಿಮ್ಸ್ ಆವರಣದಲ್ಲಿನ ಕಾಮಗಾರಿ ಫಲಕದಲ್ಲಿದ್ದ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಫೋಟೋಗಳಿಗೆ ಟೇಪ್ ಅಂಟಿಸಿ ಮರೆಮಾಚಿದ ಘಟನೆ ನಡೆದಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಬೆನ್ನಲ್ಲೇ ಅಂಟಿಸಲಾಗಿದ್ದ ಟೇಪ್ನ ಇದೀಗ ಮಿಮ್ಸ್ ಆಡಳಿತ ಮಂಡಳಿ ತೆರವುಗೊಳಿಸಿದೆ.
ಮಂಡ್ಯ, ನವೆಂಬರ್ 27: ಮಿಮ್ಸ್ ಆವರಣದಲ್ಲಿದ್ದ ಕಾಮಗಾರಿ ಫಲಕದಲ್ಲಿದ್ದ ಮೋದಿ, ಹೆಚ್‌ಡಿಕೆ ಚಿತ್ರಕ್ಕೆ ಟೇಪ್ ಅಂಟಿಸಿ ಮರೆಮಾಚಲಾಗಿದ್ದು, ಕುಮಾರಸ್ವಾಮಿ ಅವರ 3 ಕೋಟಿ ಸಿಎಸ್‌ಆರ್ ಅನುದಾನದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ಬೋರ್ಡ್ ಇದಾಗಿತ್ತು ಎನ್ನಲಾಗಿದೆ. ಕಾಂಗ್ರೆಸ್ ಮುಖಂಡರ ಆಕ್ಷೇಪದ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಬೆನ್ನಲ್ಲೇ ಅಂಟಿಸಲಾಗಿದ್ದ ಟೇಪ್ನ ಇದೀಗ ಮಿಮ್ಸ್ ಆಡಳಿತ ಮಂಡಳಿ ತೆರವುಗೊಳಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

