AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಲಾರ್ ಕಂಪನಿಗೆ ಜಮೀನು ನೀಡದ್ದಕ್ಕೆ ರೈತರ ಮೇಲೆ FIR?: ಪೊಲೀಸರ ವಿರುದ್ಧವೇ ಗಂಭೀರ ಆರೋಪ

ಕೊಪ್ಪಳದ ಕುಕನೂರು ತಾಲೂಕಿನಲ್ಲಿ ಖಾಸಗಿ ಸೋಲಾರ್ ಕಂಪನಿಗೆ ಜಮೀನು ನೀಡದ 8 ರೈತರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿ ದಬ್ಬಾಳಿಕೆ ನಡೆಸಿರುವ ಆರೋಪ ಕೇಳಿಬಂದಿದೆ. ಸೋಲಾರ್ ಕಂಪನಿಗೆ ಜಮೀನು ನೀಡುವ ಸಂಬಂಧ ಭೂಸ್ವಾಧೀನ ಮಾಡಿಕೊಳ್ಳಬೇಕಾದ್ರೆ ಜಿಲ್ಲಾಧಿಕಾರಿಗಳು ನೋಟಿಸ್ ಕೊಡಬೇಕು. ಆದರೆ ಇಲ್ಲಿ ಪಿಎಸ್​ಐ ಅವರೇ ಬೆದರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಲಾರ್ ಕಂಪನಿಗೆ ಜಮೀನು ನೀಡದ್ದಕ್ಕೆ ರೈತರ ಮೇಲೆ FIR?: ಪೊಲೀಸರ ವಿರುದ್ಧವೇ ಗಂಭೀರ ಆರೋಪ
ಸೋಲಾರ್ ಕಂಪನಿಗೆ ಜಮೀನು ನೀಡದ್ದಕ್ಕೆ ರೈತರ ಮೇಲೆ FIR?
ಶಿವಕುಮಾರ್ ಪತ್ತಾರ್
| Edited By: |

Updated on: Nov 27, 2026 | 10:20 AM

Share

ಕೊಪ್ಪಳ, ನವೆಂಬರ್​​ 26: ಸೋಲಾರ್ ಕಂಪನಿಗೆ ಜಮೀನು ಬಿಟ್ಟು ಕೊಡದ ಹಿನ್ನೆಲೆ ರೈತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿರುವ ಆರೋಪ ಕೊಪ್ಪಳ ಜಿಲ್ಲೆಯಲ್ಲಿ ಕೇಳಿಬಂದಿದೆ. ಕೆಲಸಕ್ಕೆ ಅಡ್ಡಿ ಸೇರಿದಂತೆ ಅವಾಚ್ಯ ಶಬ್ದಗಳಿಂದ ನಿಂದನೆ‌ ಮಾಡಿದ್ದಾರೆಂದು ರೈತರ ಮೇಲೆ ಎಫ್​​ಐಆರ್​​ ದಾಖಲಿಸಿರುವ ಘಟನೆ ಕುಕನೂರು ತಾಲೂಕಿನಲ್ಲಿ ನಡೆದಿದೆ. ಬೇವೂರು ಠಾಣೆಯಲ್ಲಿ ರೈತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಖಾಸಗಿ ಸೋಲಾರ್ ಕಂಪನಿ ಪರ ಪೊಲೀಸರೇ ಮಧ್ಯಸ್ಥಿಕೆ ವಹಿಸಿದ್ರಾ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಸೋಲಾರ್ ಕಂಪನಿಗೆ ಜಮೀನು ನೀಡುವ ಸಂಬಂಧ ಭೂಸ್ವಾಧೀನ ಮಾಡಿಕೊಳ್ಳಬೇಕಾದ್ರೆ ಜಿಲ್ಲಾಧಿಕಾರಿಗಳು ನೋಟಿಸ್ ಕೊಡಬೇಕು. ಆದರೆ ಇಲ್ಲಿ ಪಿಎಸ್​ಐ ಅವರೇ ಬೆದರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಟು ಮಂದಿ ರೈತರ ಮೇಲೆ ಎಫ್​​ಐಆರ್​​

ಕುಕನೂರಿನ ಮಂಗಳೂರು ಗ್ರಾಮದಲ್ಲಿ ರೈತರ ಒಪ್ಪಿಗೆ ಪಡೆಯದೇ ಟೊರೆಂಟ್‌ ಸೋಲಾರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕಂಬಗಳನ್ನು ಹಾಕಲು ಮುಂದಾಗಿತ್ತು. ಹೀಗಾಗಿ ಕಂಪನಿ ವಿರುದ್ದ ಆಕ್ರೋಶ ಹೊರಹಾಕಿದ್ದ ರೈತರು, ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ನಾವು ಜಮೀನು ಕೊಡೋದಿಲ್ಲ, ಜಿಲ್ಲಾಧಿಕಾರಿಗಳೇ‌ ನೋಟಿಸ್ ನೀಡಲಿ ಎಂದು ಆಗ್ರಹಿಸಿದ್ದರು. ಆದರೆ ಇದೀಗ ಪೊಲೀಸರ ಕುಮ್ಮಕ್ಕಿನಿಂದ ಎಂಟು ಜನ ರೈತರ ಮೇಲೆ ಎಫ್​​ಐಆರ್​ ಅಸ್ತ್ರ ಪ್ರಯೋಗಸಿ ಹೆದರಿಸಲಾಗ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಇದನ್ನೂ ಓದಿ: ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ!

ಅಧಿಕಾರಿಗಳ ನಡೆಗೆ ಸಚಿವ ಶಿವರಾಜ ತಂಗಡಗಿ ಗರಂ

ಈ ವಿಚಾರವಾಗಿ ಸಚಿವ ಶಿವರಾಜ ತಂಗಡಗಿ ಗರಂ ಆಗಿದ್ದು, ಪೊಲೀಸರು ಮತ್ತು ನಮ್ಮ ಅಧಿಕಾರಿಗಳ ತಪ್ಪು ಕಂಡುಬಂದಿದೆ. ಕಂಪನಿಯವರು ದಬ್ಬಾಳಿಕೆ ಮಾಡ್ತಾ ಇರೋದು ನನ್ನ ಗಮನಕ್ಕೆ ಇದೆ ಎಂದಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಶಿವಕುಮಾರ್ ಪತ್ತಾರ್
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More