AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಜಪಡೆ ದಾಂಧಲೆಗೆ ಕಾಫಿ ತೋಟ ಸರ್ವನಾಶ: 39 ಕಾಡಾನೆಗಳ ಸಂಚಾರಕ್ಕೆ ಬೆಚ್ಚಿಬಿದ್ದ ಮೂಡಿಗೆರೆ-ಬೇಲೂರು ಗಡಿ ಭಾಗದ ಜನ

ಮೂಡಿಗೆರೆ-ಬೇಲೂರು ಗಡಿ ಭಾಗದ ಮಾಕೋನಹಳ್ಳಿ ಸುತ್ತಮುತ್ತ 39 ಕಾಡಾನೆಗಳ ಹಿಂಡು ದಾಂಧಲೆ ನಡೆಸಿ ಕಾಫಿ ತೋಟಗಳನ್ನು ನಾಶಪಡಿಸಿದೆ. ಆತಂಕಗೊಂಡ ಗ್ರಾಮಸ್ಥರು ಪ್ರತಿಭಟನೆಗೆ ಕರೆ ನೀಡಿದ್ದು, ಇತ್ತ ಚಿಕ್ಕಮಗಳೂರು ತಾಲೂಕಿನ ಮತ್ತಾವರದಲ್ಲಿ ಅರಣ್ಯ ಇಲಾಖೆ 6 ಕುಮ್ಕಿ ಆನೆಗಳೊಂದಿಗೆ ಸೆರೆ ಕಾರ್ಯಾಚರಣೆ ಆರಂಭಿಸಿದೆ.

ಗಜಪಡೆ ದಾಂಧಲೆಗೆ ಕಾಫಿ ತೋಟ ಸರ್ವನಾಶ: 39 ಕಾಡಾನೆಗಳ ಸಂಚಾರಕ್ಕೆ ಬೆಚ್ಚಿಬಿದ್ದ ಮೂಡಿಗೆರೆ-ಬೇಲೂರು ಗಡಿ ಭಾಗದ ಜನ
ಗಜಪಡೆ ದಾಂಧಲೆಗೆ ಕಾಫಿ ತೋಟ ಸರ್ವನಾಶ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Nov 27, 2026 | 8:57 AM

Share

ಚಿಕ್ಕಮಗಳೂರು, ನವೆಂಬರ್​​ 27: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಆತಂಕ ಮುಂದುವರಿದಿದ್ದು, ಮೂಡಿಗೆರೆ-ಬೇಲೂರು ಗಡಿ ಭಾಗದಲ್ಲಿ 39 ಕಾಡಾನೆಗಳ ಹಾವಳಿ ತೀವ್ರಗೊಂಡಿದೆ. ನಿನ್ನೆ 4 ಗುಂಪುಗಳಾಗಿ ವಿಭಜನೆಯಾಗಿದ್ದ ಕಾಡಾನೆಗಳು ಮತ್ತೆ ಒಂದೆಡೆ ಸೇರಿದ್ದು, ಮಾಕೋನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚಾರ ನಡೆಸುತ್ತಿವೆ. ಗಜಪಡೆ ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿದ್ದು, ಈ ಬಗ್ಗೆ ಕಲ್ಲೋಳ, ನಾಗಲಾಪುರ ಹಾಗೂ ಬಾರದಹಳ್ಳಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಮಾಕೋನಹಳ್ಳಿ, ಹೊರಟ್ಟಿ, ಚಂದ್ರಪುರ, ಘಟ್ಟದಹಳ್ಳಿ ಭಾಗದಲ್ಲೂ ಆತಂಕದ ವಾತಾವರಣವಿದೆ. ಹೀಗಾಗಿ ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸದಂತೆ ಅರಣ್ಯಾಧಿಕಾರಿಗಳು ಆಗ್ರಹಿಸಿದ್ದಾರೆ. ವಾಹನ ಸವಾರರು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

ನಾಳೆ ಬೃಹತ್​​ ಪ್ರತಿಭಟನೆಗೆ ಕರೆ

ಕಾಡಾನೆಗಳ ದಾಂಧಲೆಗೆ ಮಾಕೋನಹಳ್ಳಿ ಬಳಿ ಕಾಫಿ ತೋಟ ಸಂಪೂರ್ಣ ಸರ್ವನಾಶವಾಗಿದೆ. ಹೀಗಾಗಿ ಗ್ರಾಮಸ್ಥರು ಮತ್ತಷ್ಟು ಭಯಭೀತರಾಗಿದ್ದು, ಕಾಡಾನೆಗಳ ಓಡಿಸುವಂತೆ ಆಗ್ರಹಿಸಿ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಾಳೆ ಬೃಹತ್​​ ಪ್ರತಿಭಟನೆಗೂ ಕರೆ ನೀಡಲಾಗಿದೆ.

ಇದನ್ನೂ ಓದಿ: ಮಕ್ಕಳಂತೆ ಬೆಳೆಸಿದ ತೋಟ ಹೋಯ್ತು, ನನ್ನನ್ನೂ ಆನೆಗಳು ತುಳಿದು ಸಾಯಿಸಲಿ: ತೋಟದಲ್ಲೇ ಕುಳಿತು ರೈತ ಕಣ್ಣೀರು

ಗಜಪಡೆ ಸೆರೆಗೆ ಕಾರ್ಯಾಚರಣೆ ಆರಂಭ

ಮತ್ತೊಂದೆಡೆ ಚಿಕ್ಕಮಗಳೂರು ತಾಲೂಕಿನ ಮತ್ತಾವರದಲ್ಲಿ 6 ಕುಮ್ಕಿ ಆನೆಗಳಿಗೆ ಪೂಜೆ ಮಾಡುವ ಮೂಲಕ ಗಜಪಡೆ ಸೆರೆಗೆ ಕಾರ್ಯಾಚರಣೆ ಆರಂಭಗೊಂಡಿದೆ. ಚಿಕ್ಕಮಗಳೂರು ಹೊರವಲಯದಲ್ಲಿ ಸಂಚರಿಸುತ್ತಿರುವ ಸಲಗ ಸೆರೆಗೆ ಸರ್ಕಾರದಿಂದಆದೇಶದ ಬೆನ್ನಲ್ಲೇ ದುಬಾರೆ ಮತ್ತು ಸಕ್ಕರೆಬೈಲಿನಿಂದ ಕರೆಸಿಕೊಂಡಿದ್ದ ಕುಮ್ಕಿ ಆನೆಗಳು ನಿನ್ನೆಯೇ ಬಿಕ್ಕೋಡು ಆನೆ ಕ್ಯಾಂಪ್ ತಲುಪಿದ್ದವು. ದುಬಾರೆ ಶಿಬಿರದಿಂದ ಸುಗ್ರೀವ, ಅಯ್ಯಪ್ಪ ಮತ್ತು ಮಾಣಿಕ್ಯ ಆನೆಗಳು ಬಂದಿದ್ದರೆ ಸಕ್ಕರೆಬೈಲಿನಿಂದ ಸಾಗರ್, ಭೀಷ್ಮ, ಜು.ಅರ್ಜುನ ಕುಮ್ಕಿ ಆನೆಗಳು ಬಂದಿವೆ. ಈ ಪೈಕಿ ಸುಗ್ರೀವ ಹಾಗೂ ಸಾಗರ್ ನೇತೃತ್ವದಲ್ಲಿ ಕಾಡಾನೆಗಳ ಸೆರೆ ಕಾರ್ಯಚರಣೆ ನಡೆಯಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More