AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೇಮದ ಊರಲಿ’ ಸಕ್ಸಸ್​ ಬಳಿಕ ಹೇಗಿದೆ ಲೈಫ್? ಇಳಾ ವಿಟ್ಲಾ ಮುಕ್ತ ಮಾತು

‘ಪ್ರೇಮದ ಊರಲಿ’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನಟಿ ಇಳಾ ವಿಟ್ಲಾ ಟಿವಿ9 ಕನ್ನಡ ಡಿಜಿಟಲ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ಅಜ್ಜಿ ಪಾತ್ರದಲ್ಲಿ ನಟಿಸಿದ್ದು ತಮಗೆ ಸಿಕ್ಕ ದೊಡ್ಡ ಸವಾಲು ಹಾಗೂ ಖುಷಿಯ ವಿಚಾರ ಎಂದು ತಿಳಿಸಿದ್ದು, ಸಿನಿಮಾ ಜಯದ ಸಂಭ್ರಮದ ಬಗ್ಗೆ ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

‘ಪ್ರೇಮದ ಊರಲಿ’ ಸಕ್ಸಸ್​ ಬಳಿಕ ಹೇಗಿದೆ ಲೈಫ್? ಇಳಾ ವಿಟ್ಲಾ ಮುಕ್ತ ಮಾತು
ಪ್ರೇಮದ ಊರಲಿ
ರಾಜೇಶ್ ದುಗ್ಗುಮನೆ
|

Updated on: Nov 17, 2026 | 12:20 PM

Share

‘ಪ್ರೇಮದ ಊರಲಿ’ ಸಿನಿಮಾ ಗೆಲುವಿನ ಬಳಿಕ ಅನೇಕ ಕಲಾವಿದರ ಬದುಕು ಬದಲಾಗಿದೆ. ನಿರ್ದೇಶಕ ಮನೋಜ್ ಕುಮಾರ್ ಖ್ಯಾತಿ ಹೆಚ್ಚಿದೆ. ಕಲಾವಿದರಾದ ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ರಂಗಾಯಣ ರಘು ಅವರ ಮಾಗಿದ ನಟನೆಗೆ ಪ್ರೇಕ್ಷಕರ ವರ್ಗದಿಂದ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರದಲ್ಲಿ ಬರುವ ಅಜ್ಜಿಯ ಪಾತ್ರಕ್ಕೂ ಪ್ರೇಕ್ಷಕರು ಉಘೇ ಎಂದಿದ್ದಾರೆ. ಈ ಪಾತ್ರ ಮಾಡಿರುವ ಇಳಾ ವಿಟ್ಲಾ ಅವರು ಈ ಯಶಸ್ಸಿನ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

ಸಿನಿಮಾ 50 ದಿನ ಪೂರೈಸಿದ ಬಗ್ಗೆ ಮಾತನಾಡಿದ ಇಳಾ, ‘ಇದು ಒಂದು ರೀತಿಯ ಹಬ್ಬದ ವಾತಾವರಣ. ಎಲ್ಲರೂ ಸಂತೋಷವಾಗಿದ್ದಾರೆ. ಜನರು ಸಾಕಷ್ಟು ಪ್ರೀತಿ ತೋರಿಸುತ್ತಿದ್ದಾರೆ. 10 ಬಾರಿ, 15 ಬಾರಿ ಸಿನಿಮಾ ನೋಡಿದ್ದೇನೆ ಎನ್ನುತ್ತಾರೆ. ಈ ರೀತಿ ಸಿನಿಮಾ ಹಿಟ್ ಆದರೆ ಕಲಾವಿದರಿಗೆ ಕೆಲಸವೂ ಸಿಗುತ್ತದೆ’ ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ನಟಿಯರು ತಮ್ಮ ವಯಸ್ಸಿನ ಅಥವಾ ವಯಸ್ಸಿಗಿಂತ ಕಡಿಮೆ ಇರುವ ಪಾತ್ರವನ್ನು ಕೇಳುತ್ತಾರೆ. ಆದರೆ, ಇಳಾ ಅವರು ಅಜ್ಜಿ ಪಾತ್ರ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಅಜ್ಜಿ ಆಗೋವರೆಗೆ ನಾವು ಇರ್ತಿವೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ಅದಕ್ಕೂ ಮೊದಲೇ ಅಜ್ಜಿಯ ಪಾತ್ರ ಮಾಡಿದ್ದೇನೆ. ಅಜ್ಜಿಯ ಪಾತ್ರ ಮಾಡಿದ ಖುಷಿ ನನಗೆ ಇದೆ. ನಮ್ಮ ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ಯಾವಾಗಲೂ ಚಾಲೆಂಜಿಂಗ್ ಪಾತ್ರಗಳನ್ನು ನೀಡಿಯೇ ಅಭ್ಯಾಸ. ಈ ಪಾತ್ರ ಕೂಡ ಚಾಲೆಂಜ್ ಆಗಿತ್ತು’ ಎಂದಿದ್ದಾರೆ.

ಸೀರಿಯಲ್​​ಗಳಲ್ಲಿ ಇಳಾ ಅವರಿಗೆ ನೆಗೆಟಿವ್ ಪಾತ್ರಗಳೇ ಹುಡುಕಿ ಬರುತ್ತಿವೆ. ಈ ಬಗ್ಗೆ ಮಾತನಾಡಿರೋ ಅವರು, ‘ಧಾರಾವಾಹಿಗಳಲ್ಲಿ ಬದಲಾವಣೆ ತರಬಹುದು, ಆದರೆ ತರಲ್ಲ. ವಿಲನ್ ಆಗಿ ಗುರುತಿಸಿಕೊಂಡರೆ ನಂತರ ಅವರಿಗೆ ವಿಲನ್ ಪಾತ್ರಗಳನ್ನೇ ಆಫರ್ ಮಾಡಲಾಗುತ್ತದೆ. ಈ ಕಾರಣಕ್ಕೆ ಸೀರಿಯಲ್​​ಗೆ ಬ್ರೇಕ್ ಕೊಟ್ಟು ಸಿನಿಮಾಗೆ ಬಂದೆ. ಮನೋಜ್ ಅವರ ಅಕ್ಷಿ ಸಿನಿಮಾಗೆ ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಅಜ್ಜಿ ಪಾತ್ರ ಮಾಡಬಹುದು ಎಂದು ನಿರ್ದೇಶಕರಿಗೆ ನಂಬಿಕೆ ಇತ್ತು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಸೈಲೆಂಟ್​ ಆಗಿ ಒಟಿಟಿಗೆ ಲಗ್ಗೆ ಇಟ್ಟ ‘ಪ್ರೇಮದ ಊರಲಿ’ ಸಿನಿಮಾ; ಎಲ್ಲಿ ವೀಕ್ಷಿಸಬಹುದು?

‘ಪ್ರೇಮದ ಊರಲಿ ಸಕ್ಸಸ್ ದೊಡ್ಡ ಖುಷಿ ಕೊಟ್ಟಿದೆ ನಿಜ. ಇದಕ್ಕಿಂತ ಹೆಚ್ಚು ರಾಷ್ಟ್ರ ಪ್ರಶಸ್ತಿ ಸಿನಿಮಾದಲ್ಲಿ ನಟಿಸಿದ್ದು ಮತ್ತಷ್ಟು ಖುಷಿ ಕೊಟ್ಟಿದೆ’ ಎನ್ನುತ್ತಾರೆ ಇಳಾ ವಿಟ್ಲಾ. ‘ಪ್ರೇಮದ ಊರಲಿ’ ಬಳಿಕ ಅವರಿಗೆ ಹಲವು ಆಫರ್ ಬರುತ್ತಿದೆ. ಅಳೆದು ತೂಗಿ ಅವನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?
ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ
ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ