AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರದ ನಡುವೆ ರೈತರಿಗೆ ವಂಚನೆಯ ಬರಸಿಡಿಲು: ಯಾರದ್ದೋ ಒಣದ್ರಾಕ್ಷಿ ಇನ್ಯಾರಿಗೂ ಮಾರಿ ಮೋಸ

ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಲಕ್ಷಾಂತರ ರೂ ವಂಚನೆ ಎಸಗಿರುವ ಘಟನೆ ನಡೆದಿದೆ. ಕಷ್ಟಪಟ್ಟು ಬೆಳೆದ ಒಣದ್ರಾಕ್ಷಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿದ್ದ ರೈತರಿಗೆ ಓರ್ವ ವ್ಯಕ್ತಿ ಮೋಸ ಮಾಡಿದ್ದಾನೆ. ರೈತರಿಗೆ ತಿಳಿಯದೆ ಒಣದ್ರಾಕ್ಷಿಯನ್ನು ಮಾರಾಟ ಮಾಡಿ, ಲಕ್ಷಾಂತರ ರೂ ಹಣವನ್ನು ಲಪಟಾಯಿಸಿ ನಾಪತ್ತೆಯಾಗಿದ್ದಾನೆ.

ಬರದ ನಡುವೆ ರೈತರಿಗೆ ವಂಚನೆಯ ಬರಸಿಡಿಲು: ಯಾರದ್ದೋ ಒಣದ್ರಾಕ್ಷಿ ಇನ್ಯಾರಿಗೂ ಮಾರಿ ಮೋಸ
ಕೋಲ್ಡ್ ಸ್ಟೋರೇಜ್Image Credit source: tv9 kannada
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on:Oct 07, 2026 | 6:59 PM

Share

ಮುಖ್ಯಾಂಶಗಳು

  • ವಿಜಯಪುರ ದ್ರಾಕ್ಷಿ ಬೆಳೆಗಾರರಿಗೆ ಬರದ ನಡುವೆ ವಂಚನೆ ಶಾಕ್​
  • ಕೋಲ್ಡ್ ಸ್ಟೋರೇಜ್​ ಮಾಲೀಕನಿಂದ ಲಕ್ಷಾಂತರ ರೂ ವಂಚನೆ
  • ಮೊಬೈಲ್ ಸ್ವಿಚ್ ಆಫ್​​ ಮಾಡಿ ಮಾಲೀಕ ಪರಾರಿ

ವಿಜಯಪುರ, ಅಕ್ಟೋಬರ್​​ 07: ಒಂದೆಡೆ ಬರ ತಾಂಡವ ಆಡುತ್ತಿದೆ. ಇನ್ನೊಂದೆಡೆ ಕಷ್ಟಪಟ್ಟು ಬೆಳೆದ ಬೆಳೆಗೆ ನಿರೀಕ್ಷಿಸಿ ಬೆಲೆ ಸಿಗುತ್ತಿಲ್ಲ. ಹೀಗಿರುವಾಗ ಇದೀಗ ರೈತರಿಗೆ ವಂಚನೆ ಆಘಾತ ಎದುರಾಗಿದೆ. ಕೋಲ್ಡ್ ಸ್ಟೋರೇಜ್​ನಲ್ಲಿ ಕಡಿಮೆ ಬಾಡಿಗೆ ಹಾಗೂ ಹೆಚ್ಚಿನ ಬೆಲೆಯ ಆಮಿಷವೊಡ್ಡಿ ಲಕ್ಷಾಂತರ ರೂ ಮೌಲ್ಯದ ಒಣದ್ರಾಕ್ಷಿ ಪಡೆದುಕೊಂಡ ಖದೀಮ, ಇನ್ನೊಬ್ಬರಿಗೆ ಮಾರಾಟ ಮಾಡಿ ಪರಾರಿ ಆಗಿರುವ ಆರೋಪ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಅತ್ತ ಹಣವೂ ಇಲ್ಲ, ಒಣದ್ರಾಕ್ಷಿಯೂ ಇಲ್ಲದೆ ರೈತ ಕಂಗಾಲಾಗಿದ್ದಾರೆ.

ನಡೆದಿದ್ದೇನು?

ವಿಜಯಪುರ ಜಿಲ್ಲೆಯಲ್ಲಿ ಬರದ ಛಾಯೆ ನಡುವೆ ಕಷ್ಟಪಟ್ಟು ದ್ರಾಕ್ಷಿ ಬೆಳೆದ ರೈತರಿಗೆ ಇದೀಗ ವಂಚಿಸಿರುವ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಉತ್ತಮ ಬೆಲೆ ಸಿಗಲಿ ಎಂಬ ಉದ್ದೇಶದಿಂದ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಒಣದ್ರಾಕ್ಷಿಯನ್ನು ರೈತರಿಗೆ ತಿಳಿಯದಂತೆ ಮಾರಾಟ ಮಾಡಿ, ಹಣ ನೀಡದೆ ವಂಚಿಸಿರುವ ಆರೋಪ ಕೇಳಿಬಂದಿದೆ. ಕೊಲ್ಹಾರ ತಾಲೂಕಿನ ಮುಳವಾಡದಲ್ಲಿರುವ ಭೂಮಿಕಾ ಕೋಲ್ಡ್ ಸ್ಟೋರೇಜ್ ಮಾಲೀಕ ನಾತು ರಾಠೋಡ್ ಎಂಬುವವರು ನಮಗೆ ಮೋಸ ಮಾಡಿದ್ದಾರೆಂದು ಮನಗೂಳಿ ಭಾಗದ ರೈತರಾದ ಸುರೇಶ್ ಗೆಜ್ಜಿ, ಅಶೋಕ್ ರಾಠೋಡ್ ಹಾಗೂ ವಿಠ್ಠಲ್ ರಾಠೋಡ್​ ಆರೋಪಿಸಿದ್ದಾರೆ.

29 ಲಕ್ಷ ರೂಪಾಯಿಗೆ ಒಣದ್ರಾಕ್ಷಿ ಮಾರಾಟ

ರೈತರು ಲಕ್ಷಾಂತರ ರೂ ಸಾಲ ಮಾಡಿಕೊಂಡು, ಕೆಲವರು ಮನೆ ಅಡವಿಟ್ಟು ಪಾಲುದಾರಿಕೆಯಲ್ಲಿ ದ್ರಾಕ್ಷಿ ಬೆಳೆದಿದ್ದರು. ಬಳಿಕ ಒಣದ್ರಾಕ್ಷಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಹಿನ್ನೆಲೆ ಸುರಕ್ಷಿತವಾಗಿ ಸಂಗ್ರಹಿಸಲು ಕೋಲ್ಡ್ ಸ್ಟೋರೇಜ್ ಹುಡುಕುತ್ತಿದ್ದರು. ಈ ವೇಳೆ ರೈತರನ್ನು ಸಂಪರ್ಕಿಸಿದ್ದ ನಾತು ರಾಠೋಡ್, ತಮ್ಮ ಕೋಲ್ಡ್ ಸ್ಟೋರೇಜ್‌ನಲ್ಲಿ ಕಡಿಮೆ ಬಾಡಿಗೆಗೆ ಒಣದ್ರಾಕ್ಷಿ ಸಂಗ್ರಹಿಸಬಹುದು ಹಾಗೂ ಉತ್ತಮ ಬೆಲೆ ಕೊಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಇದನ್ನು ನಂಬಿದ ರೈತರು ಒಟ್ಟು 970 ಬಾಕ್ಸ್ ಒಣದ್ರಾಕ್ಷಿಯನ್ನು ಭೂಮಿಕಾ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿದ್ದರು. ಆದರೆ ರೈತರಿಗೆ ಯಾವುದೇ ಮಾಹಿತಿ ನೀಡದೆ, ಪ್ರತಿ ಕೆಜಿಗೆ 530 ರೂ ಅಂತೆ ಒಣದ್ರಾಕ್ಷಿಯನ್ನು 29 ಲಕ್ಷ ರೂ. ಗಳಿಗೆ ಬೇರೆಯವರಿಗೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಈರುಳ್ಳಿ ‘ಖಾರ’ಕ್ಕೆ ಜನಸಾಮಾನ್ಯರು ಕಂಗಾಲು: ಹಬ್ಬಗಳ ಹೊತ್ತಲ್ಲೇ ಕೆಜಿಗೆ 70 ರೂ. ಗಡಿ ದಾಟಿದ ದರ

ಯಾವಾಗ ನಾತು ರಾಠೋಡ್, ರೈತರಾದ ಸುರೇಶ್ ಗೆಜ್ಜಿ, ಅಶೋಕ್ ರಾಠೋಡ್ ಹಾಗೂ ವಿಠ್ಠಲ್ ರಾಠೋಡ್ ಅವರಿಗೆ ಸೇರಿದ ಒಣದ್ರಾಕ್ಷಿ ಬೇರೆ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದ 29 ಲಕ್ಷ ರೂ ಹಣ ನೀಡದಿರುವ ಕಾರಣ ರೈತರಿಗೆ ಸಮಸ್ಯೆಯಾಗಿತ್ತು. ಹೀಗಾಗಿ ರೈತರು ಮನಗೂಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗ ಕೋಲ್ಡ್ ಸ್ಟೋರೇಜ್​ನಲ್ಲಿ ಒಣದ್ರಾಕ್ಷಿ ಇಟ್ಟಿರುವುದಕ್ಕೆ ಬಾಡಿಗೆ ಹಣ ಸೇರಿದಂತೆ 18 ಲಕ್ಷ ರೂ ಮಾತ್ರ ನೀಡಿದ್ದಾರಂತೆ. ಉಳಿದ 11 ಲಕ್ಷ ರೂ ನೀಡಿಲ್ಲವಂತೆ. ಸದ್ಯ ನಾತು ರಾಠೋಡ್ ನಾಪತ್ತೆಯಾಗಿದ್ದು, ಇತ್ತ ಹಣ ಕಳೆದುಕೊಂಡ ರೈತರು ಪರಿತಪಿಸುವಂತಾಗಿದೆ.

LIVE TV

ನಾತು ರಾಠೋಡ್​ ವಿರುದ್ಧ ಕ್ರಮಕ್ಕೆ ಒತ್ತಾಯ

‘ಕಳೆದ ವರ್ಷದ ದ್ರಾಕ್ಷಿಯನ್ನೆಲ್ಲಾ ಒಣದ್ರಾಕ್ಷಿ ಮಾಡಿ ನಾತು ರಾಠೋಡ್​ಗೆ ಸೇರಿದ ಕೋಲ್ಡ್ ಸ್ಟೋರೇಜ್​​ನಲ್ಲಿಟ್ಟು ಮೋಸ ಹೋಗಿದ್ದೇವೆ. ಬರದಿಂದ ಬಳಲಿದ್ದೇವೆ, ಸದ್ಯ ದ್ರಾಕ್ಷಿ ಬೆಳೆಯುವುದಕ್ಕೆ ಸಾಲ ಮಾಡಿದ್ದೇವೆ. ಒಣದ್ರಾಕ್ಷಿ ಮಾರಾಟ ಮಾಡಿದ ಹಣವನ್ನು ನಾತು ರಾಠೋಡ್ ನೀಡಬೇಕು. ಪೊಲೀಸರು ಸಹ ಆತನ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು’ ಒತ್ತಾಯಿಸಿದ್ಧಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:59 pm, Wed, 7 October 26

Follow Us
ಅಶೋಕ ಯಡಳ್ಳಿ, ವಿಜಯಪುರ
ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ