
Deepavali
ದೀಪಗಳ ಹಬ್ಬ ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ದೀಪಾವಳಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಈ ಬೆಳಕಿನ ಹಬ್ಬವು ಕತ್ತಲೆಯ ಮೇಲೆ ಬೆಳಕು, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯದ ಸಂಕೇತವಾಗಿದೆ. ಈ ಹಬ್ಬದ ಮಹತ್ವ ಮತ್ತು ಈ ದಿನದಂದು ಆಚರಣೆ ಮಾಡುವ ವಿಶೇಷ ಲೇಖನಗಳು ಇಲ್ಲಿದೆ. ನಮ್ಮ ಜೀವನದಲ್ಲಿ ಹೊಸ ಆರಂಭ ಮತ್ತು ಸಕಾರಾತ್ಮಕತೆಯ ವಿಜಯವನ್ನು ಸೂಚಿಸುವ ಹಬ್ಬಕ್ಕೆ ತಯಾರಿಯೂ ಜೋರಾಗಿ ನಡೆಯುತ್ತಿದೆ. ದೇಶದಾದಂತ್ಯ ಸಡಗರ ಸಂಭ್ರಮದಿಂದ ಆಚರಿಸಲಾಗುವ ದೀಪಾವಳಿ ಹಬ್ಬಕ್ಕೆ ಸಂಬಂಧಪಟ್ಟ ವಿಶೇಷಗಳನ್ನು ಇಲ್ಲಿದೆ.
ತುಳಸಿ ವಿವಾಹ ಯಾಕೆ ಅಷ್ಟೊಂದು ವಿಶೇಷ? ತುಳಸಿಗೂ ವಿಷ್ಣುವಿಗೂ ಸಂಬಂಧ ಹೇಗೆ?
ಕಾರ್ತಿಕ ಮಾಸದ ಪ್ರಮುಖ ಹಬ್ಬವಾದ ತುಳಸಿ ವಿವಾಹದ ಇತಿಹಾಸ, ಆಚರಣೆ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಈ ಲೇಖನ ವಿವರಿಸುತ್ತದೆ. ತುಳಸಿ ಮತ್ತು ವಿಷ್ಣುವಿನ ಸಂಬಂಧ, ಚಾತುರ್ಮಾಸ್ಯದ ಅಂತ್ಯ, ಮತ್ತು ನೆಲ್ಲಿಕಾಯಿ ಭಕ್ಷಣದ ಪದ್ಧತಿಯ ಬಗ್ಗೆ ತಿಳಿಯಿರಿ. ಈ ಹಬ್ಬದಲ್ಲಿ ನಡೆಯುವ ವಿವಿಧ ಪೂಜೆಗಳು ಮತ್ತು ವಿಧಿವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
- Lohitha Hebbar
- Updated on: Nov 12, 2024
- 7:05 pm
Tulsi Puja 2024: ತುಳಸಿ ಪೂಜೆಯ ಶುಭ ಮುಹೂರ್ತ ಮತ್ತು ಪೂಜೆ ವಿಧಾನದ ಬಗ್ಗೆ ತಿಳಿಯಿರಿ
ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ತುಳಸಿ ಪೂಜೆ ಕೂಡಾ ಒಂದು. ಪ್ರತಿವರ್ಷ ಕಾರ್ತಿಕ ಮಾಸದ ದ್ವಾದಶಿ ತಿಥಿಯಂದು ತುಳಸಿ ಪೂಜೆ ಅಥವಾ ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಈ ಬಾರಿ ತುಳಸಿ ಪೂಜೆ ಯಾವಾಗ? ಈ ಪೂಜೆಯ ಶುಭ ಮುಹೂರ್ತ ಮತ್ತು ಆಚರಣೆಗಳ ಬಗ್ಗೆ ತಿಳಿಯೋಣ.
- Malashree anchan
- Updated on: Nov 12, 2024
- 3:15 pm
ಡ್ರಮ್ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು; ಶಾಕಿಂಗ್ ವಿಡಿಯೋ ವೈರಲ್
ಐಐಟಿ ಧನ್‌ಬಾದ್ ವಿದ್ಯಾರ್ಥಿಗಳು ದೀಪಾವಳಿ ಹಬ್ಬವನ್ನು ಆಚರಿಸುವಾಗ ಪ್ಲಾಸ್ಟಿಕ್ ಡ್ರಮ್ನೊಳಗೆ ರಾಕೆಟ್ ಇಟ್ಟು, ಅದಕ್ಕೆ ಬೆಂಕಿಯಿಟ್ಟು ಉಡಾಯಿಸಿದ್ದಾರೆ. ಪಟಾಕಿ ಸಿಡಿದಾಗ ಡ್ರಮ್ ಕೂಡ ಮೇಲಕ್ಕೆ ಹಾರಿ ಜೋರಾಗಿ ಸೌಂಡ್ ಮಾಡಿದೆ.
- Sushma Chakre
- Updated on: Nov 4, 2024
- 10:03 pm
ಬೆಂಗಳೂರಿನಲ್ಲಿ ಈ ಬಾರಿ ದೀಪಾವಳಿ ಪಟಾಕಿ ಸಂಭ್ರಮಕ್ಕೆ ಮನುಷ್ಯ ಮಾತ್ರವಲ್ಲ ಹದ್ದುಗಳು ವಿಲವಿಲ..!
ಬೆಳಕಿನ ಹಬ್ಬ ದೀಪಾವಳಿ ಮುಗಿದಿದೆ. ಹಲವರು ಈ ಬಾರಿ ದೀಪಾವಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಇನ್ನೂ ಕೆಲವರು ಪಟಾಕಿ ಸಿಡಿಸಲು ಹೋಗಿ ಗಾಯಮಾಡಿಕೊಂಡು ನರಳಾಡುತ್ತಿದ್ದಾರೆ. ಅದರಲ್ಲೂ ಕೆಲವರು ಕಣ್ಣಿನ ದೃಷ್ಟಿಗಳನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಇನ್ನು ಪಟಾಕಿ ಏಟಿಗೆ ಬೆಂಗಳೂರಿನಲ್ಲಿ ಹದ್ದುಗಳು ಸಹ ವಿಲವಿಲ ಎಂದಿವೆ.
- Vinay Kashappanavar
- Updated on: Nov 4, 2024
- 7:55 pm
ದೀಪಾವಳಿಗೆ ಪಟಾಕಿ ನಿಷೇಧವೇಕೆ ಜಾರಿಯಾಗಲಿಲ್ಲ?; ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ದೆಹಲಿಯಲ್ಲಿ ಅತಿಯಾದ ವಾಯುಮಾಲಿನ್ಯ ಉಂಟಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧ ಏಕೆ ಜಾರಿಯಾಗಲಿಲ್ಲ? ಎಂದು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿ, ನೋಟಿಸ್ ಜಾರಿ ಮಾಡಿದೆ. 1 ವಾರದೊಳಗೆ ಸಂಪೂರ್ಣ ಪಟಾಕಿ ನಿಷೇಧವನ್ನು ಜಾರಿ ಮಾಡಲು ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
- Sushma Chakre
- Updated on: Nov 4, 2024
- 4:40 pm
ಪಟಾಕಿ ಸಿಡಿಸುವುದರಲ್ಲಿ ಹುಡುಗಾಟ: ದೀಪಾವಳಿ ದಿನವೇ ಹಾರಿ ಹೋಯ್ತು ಯುವಕನ ಪ್ರಾಣಪಕ್ಷಿ
ಕೆಲವರು ತಮ್ಮ ಅರಿವಿಗಿಲ್ಲದೇ ಒಂದಲ್ಲ ಒಂದು ರೀತಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇನ್ನೊಬ್ಬರ ಜೀವದ ಜೊತೆ ಚೆಲ್ಲಾಟ ಆಡಿದ್ದಾರೆ. ಇಂತಹುದೆ ಒಂದು ಘಟನೆ ಬೆಂಗಳೂರಿನ ನಡೆದಿದ್ದು, ಪಟಾಕಿ ವಿಚಾರದಲ್ಲಿ ಹುಡುಗಾಟವಾಡಿ ಯುವಕನ ಪ್ರಾಣ ತೆಗೆದಿದ್ದಾರೆ.
- Shivaprasad
- Updated on: Nov 4, 2024
- 3:24 pm
ನೂರಾರು ಹೆಚ್ಚುವರಿ ಬಸ್ ಬಿಟ್ಟರೂ ಸಾಲುತ್ತಿಲ್ಲ! ಬೆಂಗಳೂರಿಗೆ ಬರಲು ಜನರ ಪರದಾಟ
ದೀಪಾವಳಿ, ಕನ್ನಡ ರಾಜ್ಯೋತ್ಸವ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧೆಡೆ ತಮ್ಮ ಊರುಗಳಿಗೆ ತೆರಳಿದ್ದ ಲಕ್ಷಾಂತರ ಜನ ಬೆಂಗಳೂರಿಗೆ ವಾಪಸಾಗಲು ಪರದಾಡಿದರು. ಕೆಎಸ್ಆರ್ಟಿಸಿ ಹೆಚ್ಚುವರಿಯಾಗಿ ನೂರಾರು ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದ್ದರೂ ಬಸ್ ನಿಲ್ದಾಣಗಳಲ್ಲಿ, ಬಸ್ಗಳಲ್ಲಿ ವಿಪರೀತ ಜನಜಂಗುಳಿ, ನೂಕುನುಗ್ಗಲು ಕಾಣಿಸಿತು.
- Ganapathi Sharma
- Updated on: Nov 4, 2024
- 8:08 am
ಹೀಗೂ ಒಂದು ಹಬ್ಬವಿದೆ ನೋಡಿ: ಇಲ್ಲಿ ಸೆಗಣಿಯಲ್ಲಿ ಹೊರಳಾಡಿ, ಅದರಿಂದಲೇ ಹೊಡೆದಾಡಿಕೊಳ್ಳುತ್ತಾರೆ ಜನ!
ಚಾಮರಾಜನಗರ ಜಿಲ್ಲೆಯ ಗುಮಟಾಪುರ ಗ್ರಾಮದಲ್ಲಿ ಪ್ರತಿ ವರ್ಷ ಆಚರಿಸುವ ಗೊರೆ ಹಬ್ಬವು ಅನನ್ಯ ಸಂಪ್ರದಾಯವಾಗಿದೆ. ಸಗಣಿಯಲ್ಲಿ ಹೊರಳಾಡುವುದು ಮತ್ತು ಒಬ್ಬರಿಗೊಬ್ಬರು ಹೊಡೆದಾಡುವುದು ಈ ಹಬ್ಬದ ಮುಖ್ಯ ಆಕರ್ಷಣೆ. ಈ ಹಬ್ಬವು ಸಮಾನತೆ ಮತ್ತು ಏಕತೆಯನ್ನು ಸಂಕೇತಿಸುತ್ತದೆ. ಸಗಣಿಯಾಟದ ಹಿಂದೆ ಧಾರ್ಮಿಕ ನಂಬಿಕೆಗಳೂ ಇವೆ. ಈ ಹಬ್ಬವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
- Suraj Prasad SN
- Updated on: Nov 4, 2024
- 12:19 pm
ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿಯಿಂದ ಈವರೆಗೆ 115 ಜನರಿಗೆ ಗಾಯ
ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿತದಿಂದ 115 ಜನರು ಗಾಯಗೊಂಡಿದ್ದಾರೆ. ಮಿಂಟೋ ಮತ್ತು ನಾರಾಯಣ ನೇತ್ರಾಲಯಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ಗಾಯಾಳುಗಳು ಮಕ್ಕಳಾಗಿದ್ದು, ಕಣ್ಣುಗಳಿಗೆ ಗಾಯಗಳಾಗಿವೆ.
- Kiran Surya
- Updated on: Nov 3, 2024
- 12:55 pm
Ayodhya Deepotsav: ಅಯೋಧ್ಯೆಯಲ್ಲಿ ಬೆಳಗಿದ 25 ಲಕ್ಷ ಹಣತೆ, ಮತ್ತೊಂದು ಗಿನ್ನೆಸ್ ದಾಖಲೆ ಬರೆದ ದೀಪೋತ್ಸವ
ಅಯೋಧ್ಯೆಯಲ್ಲಿ ನಡೆದ ದೀಪಾವಳಿ ದೀಪೋತ್ಸವವು 25 ಲಕ್ಷಕ್ಕೂ ಹೆಚ್ಚು ಹಣತೆಗಳನ್ನು ಬೆಳಗಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ. ಕಳೆದ ವರ್ಷದ ದಾಖಲೆಯನ್ನು ಮೀರಿಸಿರುವ ಈ ದೀಪೋತ್ಸವದಲ್ಲಿ ರಾಮಾಯಣ ಆಧಾರಿತ ಲೇಸರ್ ಶೋ, ಡ್ರೋನ್ ಪ್ರದರ್ಶನ ಮತ್ತು ಅಂತರರಾಷ್ಟ್ರೀಯ ಕಲಾವಿದರ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು.
- Ganapathi Sharma
- Updated on: Nov 2, 2024
- 10:04 am