AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಹಬ್ಬದಂದು ದೆಹಲಿಯ ಗಾಳಿ ಗುಣಮಟ್ಟದಲ್ಲಿ ವ್ಯತ್ಯಯ; ಇಲ್ಲಿದೆ ವಾಸ್ತವ ದತ್ತಾಂಶ

Delhi's air quality index during Deepavali season: ದೀಪಾವಳಿ ಹಬ್ಬದಂದು ಹೊಡೆಯುವ ಪಟಾಕಿಗಳಿಂದ ವಾಯು ಮಾಲಿನ್ಯ ಉಂಟಾಗುತ್ತದೆ ಎಂಬುದು ನಿಜವಾ? ದೆಹಲಿಯಲ್ಲಿ ದೀಪಾವಳಿ ಹಬ್ಬ ಹಾಗೂ ಆಸುಪಾಸಿನ ದಿನಗಳಂದು ವಾಯು ಗುಣಮಟ್ಟ ಹೇಗಿತ್ತು ಎಂಬುದರ ವಾಸ್ತವಿಕ ದತ್ತಾಂಶ ಇದೆ. ಏರ್ ಕ್ವಾಲಿಟಿ ಇಂಡೆಕ್ಸ್​ನಲ್ಲಿ ದಾಖಲಾದ ವಾಯು ಗುಣಮಟ್ಟ ದೀಪಾವಳಿ ಹಬ್ಬದಂದು ಎಷ್ಟು ಬದಲಾಗಿತ್ತು ಎಂಬುದನ್ನು ತಿಳಿಯಬಹುದು.

ದೀಪಾವಳಿ ಹಬ್ಬದಂದು ದೆಹಲಿಯ ಗಾಳಿ ಗುಣಮಟ್ಟದಲ್ಲಿ ವ್ಯತ್ಯಯ; ಇಲ್ಲಿದೆ ವಾಸ್ತವ ದತ್ತಾಂಶ
ದೆಹಲಿ ವಾಯು ಮಾಲಿನ್ಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 07, 2025 | 1:03 PM

Share

ದೀಪಾವಳಿ ಹಬ್ಬ (Deepavali 2025) ಎಂದರೆ ದೇಶದ ಬಹುತೇಕ ಕಡೆ ಸಂಭ್ರಮ, ಸಡಗರ. ದೀಪಾವಳಿ ಪಟಾಕಿಯ ಹಬ್ಬವೂ ಹೌದು, ದೀಪದ ಹಬ್ಬವೂ ಹೌದು. ಪಟಾಕಿಯಿಂದ ವಾಯು ನೈರ್ಮಲ್ಯ ಹಾಳಾಗುತ್ತದೆ ಎಂದು ಆರೋಗ್ಯ ತಜ್ಞರು, ಪರಿಸರವಾದಿಗಳು ಎಚ್ಚರಿಸುತ್ತಲೇ ಬರುತ್ತಿದ್ದಾರೆ. ಅದರಲ್ಲೂ ದೆಹಲಿಯಲ್ಲಿ ಮೊದಲೇ ವಿಪರೀತ ವಾಯು ಮಾಲಿನ್ಯ (Pollution) ಇರುತ್ತದೆ. ದೀಪಾವಳಿ ಹಬ್ಬದಂದು ಗಾಳಿಯ ಗುಣಮಟ್ಟ ತೀವ್ರ ಅಪಾಯಕಾರಿ ಮಟ್ಟಕ್ಕೆ ಹೋಗುತ್ತದೆ.

ದೆಹಲಿಯ ಗಾಳಿಗೆ ಪಿಎಂ10, ಪಿಎಂ 2.5 ಇತ್ಯಾದಿ ಅಪಾಯಕಾರಿ ವಸ್ತುಗಳು ಬೆರೆದು ಜನರ ಸ್ವಾಸ್ಥ್ಯತೆಗೆ ಧಕ್ಕೆಯಾಗುತ್ತಿದೆ. ಕಣ್ಣಿಗೆ ಉರಿ, ಗಂಟಲು ಕಿರಿಕಿರಿ, ಶ್ವಾಸಕೋಶ ತೊಂದರೆ ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ದೀಪಾವಳಿ ಹಬ್ಬದ ವೇಳೆ ಸಿಡಿಯುವ ಪಟಾಕಿಗಳಿಂದ ಗಾಳಿ ಇನ್ನಷ್ಟು ಮಲಿನಗೊಳ್ಳುತ್ತದೆ ಎನ್ನುವ ವಾದವನ್ನು ಕೆಲವರು ಒಪ್ಪುವುದಿಲ್ಲ. ಆದರೆ, ಏರ್ ಕ್ವಾಲಿಟಿ ಇಂಡೆಕ್ಸ್ ಅಥವಾ ಎಕ್ಯುಐನ ದತ್ತಾಂಶದಿಂದ ವಾಸ್ತವ ತಿಳಿಯಬಹುದು.

ದೀಪಾವಳಿ ಸೀಸನ್​ನಲ್ಲಿ ಹಬ್ಬಕ್ಕೆ ಮುನ್ನ, ಹಬ್ಬದ ದಿನ ಹಾಗೂ ಹಬ್ಬದ ನಂತರದ ದಿನಗಳಲ್ಲಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಹೇಗಿತ್ತು ಎಂಬುದನ್ನು ಅವಲೋಕಿಸಿದಾಗ ಅಚ್ಚರಿಯ ಫಲಿತಾಂಶ ಕಂಡುಬಂದಿದೆ.

ದೆಹಲಿಯಲ್ಲಿ ದೀಪಾವಳಿ ಹಾಗೂ ಆಸುಪಾಸು ದಿನಗಳು ದಾಖಲಾದ ವಾಯು ಗುಣಮಟ್ಟ

ಸ್ಟೇಷನ್ ಅ. 17-19 ಅ. 20 ಅ. 21-23
ವಜೀರ್​ಪುರ್ 345 423 366
ಅಶೋಕ್ ವಿಹಾರ್ 336 427 364
ಆನಂದ್ ವಿಹಾರ್ 321 410 385
ಪೂಸಾ 293 418 353
ವಸಂತ್ ಕುಂಜ್ 259 374 324
ಗುರುಗ್ರಾಮ್ 251 433 320
ಫರೀದಾಬಾದ್ 237 406 318

ಇಲ್ಲಿ 2025ರ ಅಕ್ಟೋಬರ್ 20ರಂದು ದೀಪಾವಳಿ ಹಬ್ಬ ಇತ್ತು. ಅದಕ್ಕೆ ಮುಂಚಿನ ಮೂರು ದಿನಗಳು ಹಾಗೂ ನಂತರದ ಮೂರು ದಿನಗಳು ಸೇರಿ ಒಟ್ಟು 7 ದಿನಗಳು ದೆಹಲಿಯ ಗಾಳಿಯ ಗುಣಮಟ್ಟ ಹೇಗಿತ್ತು ಎಂಬುದನ್ನು ಮೇಲಿನ ಟೇಬಲ್​ನಲ್ಲಿ ನೋಡಬಹುದು. ದೀಪಾವಳಿ ಹಬ್ಬದಂದು ಪಟಾಕಿಗಳ ಬಳಕೆ ತಾರಕಕ್ಕೇರಿದ ಪರಿಣಾಮ ಕಾಕತಾಳೀಯವೆನಿಸುವುದಿಲ್ಲ.

How was air quality in Delhi during Deepavali season, here is the data

ಉತ್ತರ ದೆಹಲಿಯಲ್ಲಿ ದೀಪಾವಳಿ ಆಸುಪಾಸಿನ ದಿನಗಳಲ್ಲಿ ದಾಖಲಾದ ವಾಯು ಗುಣಮಟ್ಟ

ಇದನ್ನೂ ಓದಿ: ಪಿಎಂ ಕೌಶಲ್ ವಿಕಾಸ್ ಯೋಜನೆಯ ದುರುಪಯೋಗ; 178 ಟ್ರೈನಿಂಗ್ ಪಾರ್ಟ್ನರ್​ಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಸರ್ಕಾರ

ದೆಹಲಿಯಲ್ಲಿ ಈ ಸೀಸನ್​ನಲ್ಲಿ ಸಾಮಾನ್ಯವಾಗಿ ಮಂಜು ಕವಿದಿರುತ್ತದೆ. ಅದರ ಜೊತೆಗೆ ಕೈಗಾರಿಕೆಗಳು, ವಾಹನಗಳಿಂದ ಮಲಿನಗೊಂಡ ಗಾಳಿ ಬೇಗ ಚದುರುವುದಿಲ್ಲ. ಇದರಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ಮೇಲ್ಮಟ್ಟದಲ್ಲೇ ಇರುತ್ತದೆ. ಅದರ ಜೊತೆಗೆ ದೀಪಾವಳಿಯ ಪಟಾಕಿ ಅಬ್ಬರವೂ ಮಾಲಿನ್ಯ ಹೆಚ್ಚಿಸುತ್ತದೆ ಎಂಬುದು ಈ ಮೇಲಿನ ದತ್ತಾಂಶದಿಂದ ಸ್ಪಷ್ಟವಾಗುತ್ತದೆ.

ವಾಯು ಗುಣಮಟ್ಟ, ಎಕ್ಯುಐ ಶ್ರೇಣಿ

  • 0-50: ಉತ್ತಮ ವಾಯು ಗುಣಮಟ್ಟ
  • 51-100: ಸಮಾಧಾನಕರ
  • 101-200: ಮಧ್ಯಮ ಮಟ್ಟ
  • 201-300: ಕಳಪೆ
  • 301-400: ಬಹಳ ಕಳಪೆ
  • 401-500: ಅತಿರೇಕ ಮಾಲಿನ್ಯ

(ಮಾಹಿತಿ ಮೂಲ: www.aqi.in/)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Fri, 7 November 25

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ