ನನಗೆ ಆಶ್ರಯ ನೀಡಿದ ಭಾರತೀಯರಿಗೆ ಬಹಳ ಧನ್ಯವಾದ; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ
ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತದೊಂದಿಗಿನ ಸಂಬಂಧವನ್ನು ಹದಗೆಡಿಸುವ ಹಿಂಸಾತ್ಮಕ ನೀತಿಗಳನ್ನು ಉತ್ತೇಜಿಸುತ್ತಿದೆ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ. ಆಗಸ್ಟ್ 2024ರಿಂದ ಅವರು ಗಡಿಪಾರಾಗಿ ಭಾರತದಲ್ಲಿ ವಾಸಿಸುತ್ತಿರುವ ಶೇಖ್ ಹಸೀನಾ ಮುಹಮ್ಮದ್ ಯೂನಸ್ ಅವರ ಸರ್ಕಾರ ವಿರುದ್ಧ ಆಗಾಗ ಸಂದರ್ಶನಗಳನ್ನು ನೀಡುತ್ತಿರುತ್ತಾರೆ.

ಢಾಕಾ, ನವೆಂಬರ್ 7: ಬಾಂಗ್ಲಾದೇಶದಿಂದ ಉಚ್ಛಾಟನೆ ಆಗಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ. “ಕಳೆದ ವರ್ಷ ನಮ್ಮ ಸರ್ಕಾರ ಪತನವಾದ ನಂತರ ನನಗೆ ಸುರಕ್ಷಿತ ಆಶ್ರಯವನ್ನು ಒದಗಿಸಿದ್ದಕ್ಕಾಗಿ ಭಾರತೀಯರಿಗೆ ತುಂಬಾ ಕೃತಜ್ಞನಾಗಿದ್ದೇನೆ” ಎಂದು ಶೇಖ್ ಹಸೀನಾ ಹೇಳಿದ್ದಾರೆ. ಬಾಂಗ್ಲಾದೇಶದಾದ್ಯಂತ ವಾರಗಳ ಕಾಲ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಆಗಸ್ಟ್ 2024ರಲ್ಲಿ ಶೇಖ್ ಹಸೀನಾ ಅವರ ಸರ್ಕಾರ ಪತನವಾಯಿತು. ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ವಿರೋಧ ಪಕ್ಷಗಳ ದಮನದ ಆರೋಪಗಳ ನಂತರ ಅಶಾಂತಿ ಪ್ರಾರಂಭವಾಯಿತು.
ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಸರ್ಕಾರದ ನೀತಿಗಳು ಭಾರತದೊಂದಿಗಿನ ಘರ್ಷಣೆಗೆ ಕಾರಣವಾಗಿವೆ ಮತ್ತು ದೇಶದ ಸಂವಿಧಾನವನ್ನು ಉಲ್ಲಂಘಿಸುವ ಪಕ್ಷದ ಮೇಲಿನ ನಿಷೇಧದಿಂದಾಗಿ ಅವಾಮಿ ಲೀಗ್ ಬೆಂಬಲಿಗರು ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ಗೆ ಕಳುಹಿಸಿದ ಲಿಖಿತ ಸಂದರ್ಶನದಲ್ಲಿ ಶೇಖ್ ಹಸೀನಾ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಉಡುಗೊರೆ ವಿವಾದ; ಪಾಕಿಸ್ತಾನಕ್ಕೆ ಭಾರತೀಯ ಪ್ರದೇಶಗಳಿರುವ ಬಾಂಗ್ಲಾ ನಕ್ಷೆಯನ್ನು ನೀಡಿದ ಯೂನಸ್
ಶೇಖ್ ಹಸೀನಾ ಅವರ ಸರ್ಕಾರದ ಪತನದ ನಂತರ ಅವರಿಗೆ ಸುರಕ್ಷತೆಯಿಲ್ಲ ಎಂಬ ಕಾರಣಕ್ಕೆ ಭಾರತಕ್ಕೆ ಪಲಾಯನ ಮಾಡಿದರು. ಆಗ ಭಾರತವು ಅವರಿಗೆ ತಾತ್ಕಾಲಿಕ ಆಶ್ರಯ ನೀಡಿತು. ಇದು ಅವರ ದಶಕಗಳ ರಾಜಕೀಯ ಜೀವನದಲ್ಲಿ ಹೊಸ ಮಜಲನ್ನು ಸೂಚಿಸುತ್ತದೆ. ಶೇಖ್ ಹಸೀನಾ ಅವರಿಗೆ ಭಾರತ ಆಶ್ರಯ ನೀಡಿದೆ ಎಂಬ ಕಾರಣಕ್ಕೆ ಬಾಂಗ್ಲಾದೇಶ ಮತ್ತು ಭಾರತದ ಸಂಬಂಧ ಮತ್ತಷ್ಟು ಹಳಸಿತು.
ಇದನ್ನೂ ಓದಿ: ದೆಹಲಿಯಲ್ಲಿ ಸ್ವತಂತ್ರವಾಗಿ ವಾಸಿಸುತ್ತಿದ್ದೇನೆ, ಭಾರತ ತೊರೆಯುವ ಯೋಚನೆಯಿಲ್ಲ; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ
ಮುಹಮ್ಮದ್ ಯೂನಸ್ ನಾಯಕತ್ವವು ಬಾಂಗ್ಲಾದೇಶದ ರಾಜಕೀಯ ಭೂದೃಶ್ಯವನ್ನು ಅಸ್ಥಿರಗೊಳಿಸಬಹುದು ಮತ್ತು ಪ್ರಮುಖ ಪ್ರಾದೇಶಿಕ ಪಾಲುದಾರರೊಂದಿಗೆ ದೇಶದ ಸಂಬಂಧಗಳನ್ನು ಹಾನಿಗೊಳಿಸಬಹುದು ಎಂದು ಶೇಖ್ ಹಸೀನಾ ಅಭಿಪ್ರಾಯಪಟ್ಟಿದ್ದಾರೆ. “ಯೂನಸ್ ಅವರ ಸರ್ಕಾರದಲ್ಲಿ ಉಗ್ರಗಾಮಿಗಳಿಗೆ ಪ್ರಾಯೋಜಕತ್ವ ನೀಡುವುದರಿಂದ ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಮೂಲಭೂತ ಸಂಬಂಧ ಹಾಳಾಗುವ ಸಾಧ್ಯತೆಯಿದೆ” ಎಂದು ಅವರು ಹೇಳಿದ್ದಾರೆ.
ಭಾರತವು ಯಾವಾಗಲೂ ಬಾಂಗ್ಲಾದೇಶದ ಪ್ರಮುಖ ಮಿತ್ರ ರಾಷ್ಟ್ರವಾಗಿದೆ. ಬಾಂಗ್ಲಾದೇಶದ ಭದ್ರತೆ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಬೇಕಾದರೆ ಹಾಗೆಯೇ ಇರಬೇಕು ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




