AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರದ ಸಿದ್ದಸಿರಿ ಸೌಹಾರ್ದ ಬ್ಯಾಂಕ್‌ನಲ್ಲಿ ಅಕ್ರಮ ನೇಮಕಾತಿ: ಕೋಟ್ಯಂತರ ರೂ ಗುಳುಂ

ವಿಜಯಪುರದ ಸಿದ್ಧಸಿರಿ ಸಹಕಾರಿ ಸಂಘದಲ್ಲಿ ಸಿಬ್ಬಂದಿ ನೇಮಕಾತಿಯಲ್ಲಿ ಭಾರಿ ಹಣಕಾಸು ಅಕ್ರಮ ಬೆಳಕಿಗೆ ಬಂದಿದೆ. ಮಾಜಿ ಜಂಟಿ ವ್ಯವಸ್ಥಾಪಕ ನಿರ್ದೇಶಕ 1.41 ಕೋಟಿ ರೂ ಭದ್ರತಾ ಠೇವಣಿಯನ್ನು ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದಿದೆ. ಇನ್ನು ಈ ಕುರಿತಾಗಿ ಮಾಜಿ ಜಂಟಿ ವ್ಯವಸ್ಥಾಪಕರದು ಎನ್ನಲಾದ ಆಡಿಯೋ ಕೂಡ ವೈರಲ್ ಆಗಿದೆ.

ವಿಜಯಪುರದ ಸಿದ್ದಸಿರಿ ಸೌಹಾರ್ದ ಬ್ಯಾಂಕ್‌ನಲ್ಲಿ ಅಕ್ರಮ ನೇಮಕಾತಿ: ಕೋಟ್ಯಂತರ ರೂ ಗುಳುಂ
ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ, ರಾಘವೇಂದ್ರ ಅಣ್ಣಿಗೇರಿImage Credit source: tv9 kannada
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Sep 30, 2026 | 5:19 PM

Share

ವಿಜಯಪುರ, ಸೆಪ್ಟೆಂಬರ್​​ 30: ಶಾಸಕ ಬಸನಗೌಡ ಪಾಟೀಲ್​ ನೇತೃತ್ವದಲ್ಲಿ 2006ರಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸ್ಥಾಪನೆಯಾಗಿತ್ತು. 5 ಲಕ್ಷ ರೂ ಬಂಡವಾಳದೊಂದಿಗೆ ಆರಂಭವಾಗಿದ್ದ, ಸಂಘ ಇದೀಗ 6 ಸಾವಿಕ್ಕೂ ಅಧಿಕ ಕೋಟಿ ರೂ ವಹಿವಾಟು ನಡೆಸುತ್ತಿದೆ. ಇಂತಹ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ.

ನಡೆದಿದ್ದೇನು?

ವಿಜಯಪುರ ಜಿಲ್ಲೆಯಲ್ಲೇ ದೊಡ್ಡ ಸೌಹಾರ್ದ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದಲ್ಲಿ ಸಿಬ್ಬಂದಿ ನೇಮಕಾತಿಯಲ್ಲಿ ಹಣಕಾಸು ದುರುಪಯೋಗದ ಆರೋಪ ಕೇಳಿಬಂದಿದೆ. ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 2006 ರಲ್ಲಿ 500 ಷೇರು ಸದಸ್ಯರ 5 ಲಕ್ಷ ರೂ ಬಂಡವಾಳದಿಂದ ಶ್ರೀ ಸಿದ್ದಿಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸ್ಥಾಪನೆ ಮಾಡಿದ್ದರು. ಸದ್ಯ 6140 ಕೋಟಿ ರೂ ವಹಿವಾಟು ನಡೆಸುವಷ್ಟು ಈ ಸಂಘ ಬೆಳೆದಿದೆ. ಆದರೆ ಇಲ್ಲಿ ನೇಮಕವಾಗುವ ಸಿಬ್ಬಂದಿ ಭದ್ರತಾ ಠೇವಣಿ ಹಣದಲ್ಲಿ ಗೋಲ್ಮಾಲ್ ಆಗಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನೇಮಕಾತಿ: 60 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾಗಿದ್ರೆ ಸಾಕು!

ಶ್ರೀ ಸಿದ್ದಿಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದಿಂದ ಇದೀಗ ಸಿದ್ದಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್​ ಆಗಿ ಮಾರ್ಪಾಡಾಗಿದೆ. ಶಾಸಕ ಯತ್ನಾಳ್​ ಪುತ್ರ ರಾಮನಗೌಡ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಅಣ್ಣಿಗೇರಿ ಹಣಕಾಸಿನ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಸೊಸೈಟಿಯ ಸಿಇಓ ಜೋತಿಬಾ ಖಂಡಾಗಳೆ, ರಾಘವೇಂದ್ರ ಅಣ್ಣಿಗೇರಿ ಮೇಲೆ ಹಣಕಾಸಿನ ದುರುಪಯೋಗ ಮಾಡಿಕೊಂಡಿದ್ದಾರೆಂದು ದೂರು ನೀಡಿದ್ದಾರೆ.

28 ಅಭ್ಯರ್ಥಿಗಳಿಂದ 1.41 ಕೋಟಿ ರೂ ಹಣ ಪಡೆದ ಆರೋಪ

ಅಷ್ಟಕ್ಕೂ ಈ ಹಿಂದೆ ಜಂಟಿ ವ್ಯವಸ್ಥಾಪನ ನಿರ್ದೇಶಕ ಹಾಗೂ ಯತ್ನಾಳ್​ ಬಲಗೈ ಬಂಟನಾಗಿದ್ದ ರಾಘವೇಂದ್ರ ಅಣ್ಣಿಗೇರಿ ಮೇಲೆ ದೂರು ದಾಖಲಾಗಿದ್ದು ಏಕೆ ಎಂದು ನೋಡುವುದಾದರೆ ರಾಘವೇಂದ್ರ ಅಣ್ಣಿಗೇರಿ ಕಳೆದ 2019 ರಿಂದ 2025 ರವರೆಗೆ ಸೊಸೈಟಿಯ ವಿವಿಧ ಹುದ್ದೆಗಳ ನೇಮಕಾತಿಗಾಗಿ ತೆಗೆದುಕೊಳ್ಳುವ ಭದ್ರತಾ ಠೇವಣಿ ಹಣವನ್ನು ಸೊಸೈಟಿಗೆ ಭರಿಸದೇ ತಾನೇ ಬಳಕೆ ಮಾಡಿಕೊಂಡು ವಂಚನೆ ಮಾಡಿದ್ಧಾರೆಂದು ದೂರು ದಾಖಲಾಗಿದೆ. ಒಟ್ಟು 28 ಅಭ್ಯರ್ಥಿಗಳಿಂದ 1 ಕೋಟಿ 41 ಲಕ್ಷ 50 ಸಾವಿರ ರೂ ಪಡೆದುಕೊಂಡು ಸೊಸೈಟಿಗೆ ಕಟ್ಟದೇ ಬಳಕೆ ಮಾಡಿದ್ದಾರೆ.

LIVE TV

ವಿವಿಧ ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳು ಅತ್ಯಂತ ಕೌಶಲ್ಯ ಹೊಂದಿದ್ದಾರೆ, ಬಡವರಿ​ದ್ದಾರೆ, ಅವರಿಗೆ ಭದ್ರತಾ ಠೇವಣಿ ಹಣ ಭರಸುವುದಕ್ಕೆ ಆಗಲ್ಲ ಎಂದು ಆಡಳಿತ ಮಂಡಳಿಯವರಿಗೆ ಸುಳ್ಳು ಮಾಹಿತಿ ನೀಡಿದ್ದಾರೆಂದು ಬ್ಯಾಂಕ್ ದೂರಿನಲ್ಲಿ ಉಲ್ಲೇಖವಾಗಿದೆ. 1.41 ಕೋಟಿ ರೂ ಹಣ ದುರುಪಯೋಗ ಹಾಗೂ ಆ ಹಣದಿಂದ ಬರಬೇಕಾದ ಲಾಭಾಂಶ 90 ಲಕ್ಷ ರೂ ಹಾನಿ ಮಾಡಿದ್ದಾನೆಂದು ದೂರು ನೀಡಿದ್ದಾರೆ. ಇದರ ಜೊತೆಗೆ ಇತರೆ ಕೆಲ ಸಿಬ್ಬಂದಿಗಳಿಂದ ಪಡೆದ ಹಣವನ್ನು ವಾಪಸ್ ನೀಡಿದ್ದು, ಇನ್ನು ಸ್ವಲ್ಪ ಹಣವನ್ನು ರಾಘವೇಂದ್ರ ಅಣ್ಣಿಗೇರಿ ನೀಡಬೇಕಿದೆಯಂತೆ.

ರಾಘವೇಂದ್ರ ಅಣ್ಣಿಗೇರಿದು ಎನ್ನಲಾದ ಆಡಿಯೋ ವೈರಲ್

ಈ ವಿಚಾರ ಆಡಳಿತ ಮಂಡಳಿ ಗಮನಕ್ಕೆ ಬರುತ್ತಿದ್ದಂತೆ ರಾಘವೇಂದ್ರ ಅಣ್ಣಿಗೇರಿ ತ್ಮಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರಂತೆ. ಯಾವಾಗ ಸಿಬ್ಬಂದಿಗಳ ಠೇವಣಿ ಹಣ ಪಡೆದುಕೊಂಡ ವಿಚಾರ ಬಹಿರಂಗವಾಯಿತ್ತೋ ಆಗ ಹಣ ನೀಡಿದ ಅಭ್ಯರ್ಥಿಗಳಿಗೆ ಕರೆ ಮಾಡಿರುವ ರಾಘವೇಂದ್ರ ಅಣ್ಣಿಗೇರಿ, ‘ಯಾವುದೇ ವಿಷಯ, ಯಾರ ಮುಂದೆ ಹೇಳಬೇಡಿ. ನಿಮ್ಮ ಹಣ ನಿಮಗೆ ವಾಪಸ್ ನೀಡುತ್ತೇನೆ’ ಎಂದು ಅವರದ್ದು ಎನ್ನಲಾದ ಆಡಿಯೋ ಸಹ ವೈರಲ್ ಆಗಿದೆ.

ರಾಘವೇಂದ್ರ ಅಣ್ಣಿಗೇರಿಗೆ ಹೇಳಿದ್ದಿಷ್ಟು 

ಈ ಆರೋಪ ಹಾಗೂ ದೂರಿನ ಕುರಿತು ಟಿವಿ9 ತಂಡ ರಾಘವೇಂದ್ರ ಅಣ್ಣಿಗೇರಿಗೆ ಕರೆ ಮಾಡಿದ್ದು,  ‘ಸ್ಥಳಿಯವಾಗಿ ಲಭ್ಯವಿಲ್ಲ’ ಎಂದಿದ್ದಾರೆ. ಜೊತೆಗೆ ದೂರಿನ ವಿಚಾರ ಕುರಿತು ‘ನಾನು ನನ್ನ ಕಾನೂನು ಸಲಹೆಗಾರರ ಜೊತೆಗೆ ಚರ್ಚೆ ಮಾಡಿ ನಂತರ ಪ್ರತಿಕ್ರಿಯೆ ನೀಡುವುದಾಗಿ’ ಹೇಳಿದ್ದಾರೆ. ಸದ್ಯ ಈ ಆರೋಪದ ತನಿಖೆಯ ಬಳಿಕವಷ್ಟೇ ನಿಜಾಂಶ ಬಯಲಿಗೆ ಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅಶೋಕ ಯಡಳ್ಳಿ, ವಿಜಯಪುರ
ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!