AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ ದಸರಾ: ಆನೆ ಸೋಮಣ್ಣನ ರಂಪಾಟಕ್ಕೆ ಮುರಿದು ಬಿದ್ದ ದೇವಿಯ ಕೈ

ಶಿವಮೊಗ್ಗ ದಸರಾ: ಆನೆ ಸೋಮಣ್ಣನ ರಂಪಾಟಕ್ಕೆ ಮುರಿದು ಬಿದ್ದ ದೇವಿಯ ಕೈ

Basavaraj Yaraganavi
| Edited By: |

Updated on: Oct 22, 2026 | 9:58 AM

Share

ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ 650 ಕೆಜಿ ಬೆಳ್ಳಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಗಲಿಬಿಲಿಗೊಂಡು ರಂಪಾಟ ಮಾಡಿದೆ. ಮರ, ಕಾರು, ಬೈಕ್‌ಗಳಿಗೆ ಅಪ್ಪಳಿಸಿ ದೇವಿಯ ಉತ್ಸವ ಮೂರ್ತಿಗೂ ಹಾನಿಯಾಗಿದೆ. ಅಂಬಾರಿ ಹೊತ್ತಿದ್ದ ಆನೆ ಇದೇ ಮೊದಲ ಬಾರಿ ಎಂಬುದು ಗಮನಾರ್ಹ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊನೆಯ ಕ್ಷಣದಲ್ಲಿ ಆನೆ ಬದಲಿಸಿದ್ದು ಈ ಅವಘಡಕ್ಕೆ ಕಾರಣ ಎಂಬ ಆಕ್ರೋಶ ವ್ಯಕ್ತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಶಿವಮೊಗ್ಗ, ಅ.22: ದಸರಾ ಜಂಬೂಸವಾರಿಯ ವೇಳೆ 650 ಕೆ.ಜಿ. ತೂಕದ ಬೆಳ್ಳಿ ಅಂಬಾರಿಯನ್ನು ಹೊತ್ತಿದ್ದ ಸೋಮಣ್ಣ ಹೆಸರಿನ ಆನೆ ದಿಢೀರ್ ಗಲಿಬಿಲಿಗೊಂಡು ರಂಪಾಟ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ. ಮೆರವಣಿಗೆಯ ನಡುವೆಯೇ ಆನೆ ಏಕಾಏಕಿ ದಿಕ್ಕಾಪಾಲಾಗಿ ಓಡಿದೆ. ಈ ಅವಘಡದಲ್ಲಿ ಆನೆ ಮರಗಳು, ಕಾರುಗಳು ಮತ್ತು ಬೈಕ್‌ಗಳಿಗೆ ಅಪ್ಪಳಿಸಿದೆ. ಬೆಳ್ಳಿ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೂ ಹಾನಿಯಾಗಿದೆ. ಅಂಬಾರಿಯನ್ನು ಸೋಮಣ್ಣ ಆನೆ ಮೊದಲ ಬಾರಿಗೆ ಹೊತ್ತಿದ್ದರಿಂದ ಟೆನ್ಷನ್ ಅಥವಾ ಆತಂಕಕ್ಕೆ ಒಳಗಾಗಿ ಈ ರೀತಿ ವರ್ತಿಸಿರಬಹುದು ಎಂದು ಅಂದಾಜಿಸಲಾಗಿದೆ. ಮಾವುತರು ಆನೆಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಸಾರ್ವಜನಿಕರಿಗೆ ಪ್ರಾಣಾಪಾಯ ಸಂಭವಿಸಿಲ್ಲ. ಕೊನೆಯ ಕ್ಷಣದಲ್ಲಿ ಸಾಗರ ಆನೆಯ ಬದಲಿಗೆ ಸೋಮಣ್ಣ ಆನೆಯನ್ನು ಅಂಬಾರಿ ಹೊರುವುದಕ್ಕೆ ಆಯ್ಕೆ ಮಾಡಿದ್ದ ಅಧಿಕಾರಿಗಳ ನಿರ್ಧಾರದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಂಬೂಸವಾರಿಯ ಆನೆಗೆ ಕನಿಷ್ಠ ಒಂದು ತಿಂಗಳ ತಾಲೀಮು ಕಡ್ಡಾಯವಾಗಿ ಬೇಕಾಗುತ್ತದೆ ಎಂಬ ನಿಯಮವನ್ನು ಅಧಿಕಾರಿಗಳು ಪಾಲಿಸದಿರುವುದು ಸ್ಪಷ್ಟವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Yaraganavi
Basavaraj Yaraganavi