ಬಿಗ್ ಬಾಸ್ ಮನೆಯಲ್ಲಿ ಕಳ್ಳರ ಕೈಚಳಕ; ಸೆಕ್ಯುರಿಟಿ ಕಣ್ಣು ತಪ್ಪಿಸಿ ಕಳ್ಳತನ
ಬಿಗ್ ಬಾಸ್ ಮನೆಯಲ್ಲಿ ಭದ್ರತೆ ಒದಗಿಸಬೇಕಾದ ರಕ್ಷಕರು ಪರಸ್ಪರ ಜಗಳವಾಡಿಕೊಳ್ಳುತ್ತಿರುವ ದೃಶ್ಯಗಳು ಪ್ರೋಮೋದಲ್ಲಿ ಕಾಣಿಸಿಕೊಂಡಿವೆ. ಕಾವಲುಗಾರರ ನಡುವಿನ ಈ ಬಾಗವಾದ ಮತ್ತು ಮಾತಿನ ಚಕಮಕಿಯಿಂದಾಗಿ ಮನೆಯಲ್ಲಿ ದೊಡ್ಡ ಮಟ್ಟದ ಕಳ್ಳತನ ಹಾಗೂ ಲೂಟಿಗೆ ದಾರಿ ಮಾಡಿಕೊಟ್ಟಂತಾಗಿದೆ. ರಕ್ಷಕರ ಈ ಬೇಜವಾಬ್ದಾರಿಯಿಂದ ಆಟದ ದಿಕ್ಕು ಬದಲಾಗಲಿದೆ.
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಆಟದ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಪರ್ಧಿಗಳ ನಡುವಿನ ಜಟಾಪಟಿ ತೀವ್ರಗೊಂಡಿದೆ. ಕಾವಲು ಕಾಯಬೇಕಾದ ರಕ್ಷಕರೇ ಪರಸ್ಪರ ಜಗಳವಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಗಾರ್ಡ್‌ಗಳಾದ ಕಿರಣ್ ಹಾಗೂ ಗಾನವಿ ನಡುವೆ ಕಿತ್ತಾಟ ನಡೆದಿದೆ. ಇದರ ಲಾಭ ಲೂಟಿ ಮಾಡುವವರಿಗೆ ಸುಲಭವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ರಕ್ಷಕರ ಈ ನಿರ್ಲಕ್ಷ್ಯ ಹಾಗೂ ಜಗಳದಿಂದ ಮನೆಯಲ್ಲಿ ಮುಂದೇನು ಅನಾಹುತ ನಡೆಯಲಿದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

