ಹಬ್ಬ ಮುಗಿಸಿ ಬೆಂಗಳೂರಿನತ್ತ ಜನ: ಫುಲ್ ಟ್ರಾಫಿಕ್ ಜಾಮ್
ದಸರಾ ರಜಾ ದಿನಗಳನ್ನು ಮುಗಿಸಿ ಜನರು ಬೆಂಗಳೂರಿನತ್ತ ಹೊರಟ್ಟಿದ್ದಾರೆ. ಹೀಗಾಗಿ ಬೆಂಗಳೂರು ನಗರದ ಪ್ರವೇಶ ಮಾರ್ಗಗಳಲ್ಲಿ ಭಾರಿ ವಾಹನ ಸಂಚಾರ ದಟ್ಟಣೆ ಉಂಟಾಗಿದೆ. ಮುಖ್ಯವಾಗಿ ಬೆಂಗಳೂರು ಹೊರಹೊಲಯದ ನೆಲಮಂಗಲ ಬೈಪಾಸ್ ಮತ್ತು ಎನ್‌ಎಚ್ 75 ನಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.
ಬೆಂಗಳೂರು, (ಅಕ್ಟೋಬರ್ 21): ದಸರಾ ರಜಾ ದಿನಗಳನ್ನು ಮುಗಿಸಿ ಜನರು ಬೆಂಗಳೂರಿನತ್ತ ಹೊರಟ್ಟಿದ್ದಾರೆ. ಹೀಗಾಗಿ ಬೆಂಗಳೂರು ನಗರದ ಪ್ರವೇಶ ಮಾರ್ಗಗಳಲ್ಲಿ ಭಾರಿ ವಾಹನ ಸಂಚಾರ ದಟ್ಟಣೆ ಉಂಟಾಗಿದೆ. ಮುಖ್ಯವಾಗಿ ಬೆಂಗಳೂರು ಹೊರಹೊಲಯದ ನೆಲಮಂಗಲ ಬೈಪಾಸ್ ಮತ್ತು ಎನ್‌ಎಚ್ 75 ನಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಬೆಂಗಳೂರು ಆಸುಪಾಸಿನಲ್ಲಿ ಅಂದರೆ ಮೈಸೂರು, ಮಂಡ್ಯ ಭಾಗದಲ್ಲಿದ್ದವರು ಮಾತ್ರ ಬೆಂಗಳೂರಿಗೆ ವಾಪಸ್ ಆಗುತ್ತಿರುವುದಕ್ಕೆ ಈ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇನ್ನು ನಾಳೆ(ಅ.22) ನಸುಕಿನಿಂದಲೇ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಬಸ್ಗಳು ಬರಲಿದೆ. ಹೀಗಾಗಿ ಟ್ರಾಫಿನ್ ಜಾಮ್ ಮತ್ತಷ್ಟು ಉಂಟಾಗುವುದು ಗ್ಯಾರಂಟಿ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 21, 2026 09:06 PM
Follow Us

