ನವರಾತ್ರಿ ದಸರಾ 2025
ಮಂತ್ರ
ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಅರ್ಥ: ಪಂಚಭೂತಗಳಾದ ಅಗ್ನಿ, ಪೃಥ್ವಿ, ವಾಯು, ಜಲ, ಆಕಾಶ ಇವೆಲ್ಲವೂಗಳಿಂದ ಸೃಷ್ಟಿಯಾಗಿರುವ ಎಲ್ಲ ಜೀವಗಳಲ್ಲೂ ಶಕ್ತಿ ರೂಪದಲ್ಲಿ ಇರುವಂಥ ದೇವಿಯೇ ನಿನಗೆ ನಮಸ್ಕಾರ ನಮಸ್ಕಾರ ನಮಸ್ಕಾರ ನಮೋ ನಮಃ
ತಾಜಾ ಸುದ್ದಿಗಳು
ವಿಡಿಯೋ
ಫೋಟೋಗ್ಯಾಲರಿ
ರಾಜಧಾನಿಯಲ್ಲೂ ಕಳೆಗಟ್ಟಿದ ನವರಾತ್ರಿ ಸಂಭ್ರಮ,
5 Images
ಹೂ ಮುಡಿದು, ಆರತಿ ಪಡೆದು ಟೀಕಾಕಾರರ ಬಾಯಿಮುಚ್ಚಿಸಿದ ಬಾನು ಮುಷ್ತಾಕ್
5 Images
ದಸರಾ ಆರಂಭದ ಸಂದರ್ಭದಲ್ಲೇ ಹೂವಿನ ಬೆಲೆ ಕುಸಿತ: ಹೂವಿನಂತೆ ಬಾಡಿದ ರೈತರ ಬದುಕ
6 Images
ಮೈಸೂರು ದಸರಾ ಸಂಭ್ರಮದ ಕಲವರ: ಇಲ್ಲಿವೆ ಫೋಟೋಸ್
6 Images
ಮೈಸೂರು ದಸರಾ ಸಿದ್ದತೆ: ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗೆ ರಾಯಲ್ ಆತಿಥ್ಯ
7 Images
ಮೈಸೂರು ದಸರಾ ಜಂಬೂಸವಾರಿ: ಅದ್ಭುತ ಕ್ಷಣ ಕಣ್ತುಂಬಿಕೊಂಡ ಕೋಟ್ಯಂತರ ಜನರು
9 Images
ಬಣ್ಣ ಬಣ್ಣ ಚಿತ್ತಾರಗಳಿಂದ ಶೃಂಗಾರಗೊಂಡಿರುವ ಮೈಸೂರು ದಸರಾ ಆನೆಗಳು
6 Imagesತಾಜಾ ಸುದ್ದಿಗಳು
ನವರಾತ್ರಿ ವಿಶೇಷ
ಶರದ್ ಋತುವಿನಲ್ಲಿ ಒಂಬತ್ತು ದಿನ ಜಗನ್ಮಾತೆಯ ಸ್ವರೂಪವನ್ನು ಆರಾಧಿಸುವುದೇ ಶರನ್ನವರಾತ್ರಿ
ನವರಾತ್ರಿ ಅಥವಾ ಶರನ್ನವರಾತ್ರಿ ಎಂದು ಕರೆಯುವ ಪರ್ವ ಕಾಲದಲ್ಲಿ ಆ ಜಗನ್ಮಾತೆಯ ಆರಾಧನೆಗೆ ಪ್ರಾಶಸ್ತ್ಯ. ಬಹಳ ಮಂದಿ ಈ ಸಮಯದಲ್ಲಿ ವ್ರತಾಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಉಪವಾಸವಿದ್ದು, ಆ ಜಗನ್ಮಾತೆಯ ಆರಾಧನೆ ಮಾಡುತ್ತಾರೆ. . ಆಶ್ವಯುಜ ಮಾಸದ ಶುಕ್ಲ ಪಕ್ಷದ ಪ್ರತಿಪದ (ಪಾಡ್ಯ)ದಿಂದ ಆರಂಭ ಆಗುವ ಈ ಪೂಜೆಯು ನವಮಿ ಪರ್ಯಂತ ಮಾಡಲಾಗುತ್ತದೆ. ಹೀಗೆ ಪ್ರತೀ ದಿನ ದೇವಿಯನ್ನು ಒಂದೊಂದು ವಿಶಿಷ್ಟ ಸ್ವರೂಪದಲ್ಲಿ ಆರಾಧನೆ ನಡೆಸಲಾಗುತ್ತದೆ. ಇದು ಒಂಬತ್ತು ದಿನಗಳ ಸುದೀರ್ಘ ಕೈಂಕರ್ಯ. ಶರದ್ ಋತುವಿನಲ್ಲಿ ಆರಂಭದ ಒಂಬತ್ತು ದಿನಗಳು ಈ ಆಚರಣೆ ಮಾಡುವದಿಂದಾಗಿ ‘ಶರನ್ನವರಾತ್ರಿ’ ಎಂದು ಸಹ ಹೇಳುತ್ತಾರೆ.
ಒಂಬತ್ತು ದಿನಗಳಲ್ಲಿ ಆಕೆಯ ಸ್ವರೂಪ ಹೀಗಿರುತ್ತದೆ:
ಪ್ರಥಮಮ್ ಶೈಲ ಪುತ್ರಿ
ದ್ವಿತೀಯಂ ಬ್ರಹ್ಮಚಾರಿಣಿ
ತೃತೀಯಂ ಚಂದ್ರ ಘಂಟಾ
ಚತುರ್ಥಿಕಮ್ ಕೂಶ್ಮಾಂಡಾ
ಪಂಚಮಮ್ ಸ್ಕಂದ ಮಾತಾ
ಷಷ್ಟಮ್ ಕಾತ್ಯಾಯಿನಿ
ಸಪ್ತಮಮ್ ಕಾಳ ರಾತ್ರಿ
ಅಷ್ಟಮಮ್ ಮಹಾ ಗೌರಿ
ನವಮಮ್ ಸಿದ್ಧಿಧಾತ್ರಿ
ಮೊದಲ ದಿನ ಆ ಜಗನ್ಮಾತೆಯ ಸ್ವರೂಪವನ್ನು ಶೈಲಪುತ್ರಿ ಎಂದು ಕರೆಯಲಾಗುತ್ತದೆ. ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರ ಘಂಟಾ, ನಾಲ್ಕನೇ ದಿನ ಕೂಶ್ಮಾಂಡಾ, ಐದನೇ ದಿನ ಸ್ಕಂದ ಮಾತಾ, ಆರನೇ ದಿನ ಕಾತ್ಯಾಯಿನಿ, ಏಳನೇ ದಿನ ಕಾಳ ರಾತ್ರಿ, ಎಂಟನೇ ದಿನ ಮಹಾ ಗೌರಿ ಹಾಗೂ ಒಂಬತ್ತನೆ ದಿನ ಸಿದ್ಧಿಧಾತ್ರಿ ಸ್ವರೂಪದಲ್ಲಿ ಆರಾಧನೆ ಮಾಡಲಾಗುತ್ತದೆ.
ಲೋಕಕಂಟಕರಾದ ರಾಕ್ಷಸರ ಸಂಹಾರವನ್ನು ಮಾಡಿ, ಜಗತ್ತಿನ ಉದ್ಧಾರ ಮಾಡಿದ ಜಗಜ್ಜನನಿಯ ನವವಿಧ ಸ್ವರೂಪವನ್ನು ಆರಾಧಿಸುತ್ತೇವೆ.
ಪೂಜಾ ವಿಧಾನ
ಸ್ನಾನ ಮತ್ತು ಆ ನಂತರ್ರದ ನಿತ್ಯ ಶುದ್ಧಿ ಆದ ಮೇಲೆ ಮನೆಯ ಈಶಾನ್ಯ ಭಾಗದಲ್ಲಿ ಅಥವಾ ದೇವರ ಕೋಣೆಯಲ್ಲಿ ರಂಗೋಲಿಯಲ್ಲಿ ಅಷ್ಟದಳವನ್ನು ಬರೆದು, ಅದರ ಮೇಲೆ ಕಲಶ ಸ್ಥಾಪನೆ ಮಾಡಬೇಕು. ಆ ಕಲಶದಲ್ಲಿ ಗಂಧ ಸಹಿತ ಶುದ್ಧ ನೀರನ್ನು ತುಂಬಿಸಿ, ನವರಾತ್ರಿಯ ದಿನಗಳಂದು ಆಯಾ ದೇವಿಯ ಸ್ವರೂಪವನ್ನು ಆರಾಧನೆ ಮಾಡಬೇಕು.