ದೆಹಲಿಯಲ್ಲಿ ದುರ್ಗಾ ಪೂಜೆ ವೇಳೆ ಧುನುಚಿ ನಾಚ್ ಪ್ರದರ್ಶಿಸಿದ ಬಿಜೆಪಿ ನಾಯಕಿ ಸ್ಮೃತಿ ಇರಾನಿ
ದುರ್ಗಾ ಪೂಜೆ ಆಚರಣೆಯ ಅಂತಿಮ ದಿನವಾದ ಇಂದು, ನಟಿ-ಬಿಜೆಪಿ ನಾಯಕಿ ಸ್ಮೃತಿ ಇರಾನಿ ಗುರುವಾರ ದೆಹಲಿಯ ಪಂಡಾರ ರಸ್ತೆಯಲ್ಲಿರುವ ಮಂಟಪದಲ್ಲಿ ಸಾಂಪ್ರದಾಯಿಕ 'ಧುನುಚಿ ನಾಚ್' ನಲ್ಲಿ ಭಾಗವಹಿಸಿದರು. ಸದಾಚಾರವಿರುವಲ್ಲಿ ವಿಜಯವಿದೆ! ಸದಾಚಾರ ಮತ್ತು ಸತ್ಯದ ವಿಜಯವನ್ನು ಸಂಕೇತಿಸುವ ವಿಜಯದಶಮಿ ಹಬ್ಬದಂದು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದರು.
ನವದೆಹಲಿ, ಅಕ್ಟೋಬರ್ 2: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ (Smriti Irani) ಸಾಂಪ್ರದಾಯಿಕ ಬಂಗಾಳಿ ಸೀರೆಯುಟ್ಟು ದುರ್ಗಾ ಪೂಜಾ (Durga Puja) ಮಂಟಪದಲ್ಲಿ ‘ಧುನುಚಿ ನೃತ್ಯ’ ಪ್ರದರ್ಶಿಸಿದರು. ದುರ್ಗಾ ಪೂಜೆ ಆಚರಣೆಯ ಅಂತಿಮ ದಿನವಾದ ಇಂದು ಸ್ಮೃತಿ ಇರಾನಿ ಹಲವಾರು ಮಹಿಳೆಯರೊಂದಿಗೆ ಸಾಂಪ್ರದಾಯಿಕ ಬಂಗಾಳಿ ಸೀರೆಯುಚ್ಚಿ ನಾಚ್ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ವಿಜಯದಶಮಿ ಹಿನ್ನೆಲೆಯಲ್ಲಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕಿ ಸ್ಮೃತಿ ಇರಾನಿ “ಸದಾಚಾರವಿರುವಲ್ಲಿ ವಿಜಯವಿದೆ! ಸದಾಚಾರ ಮತ್ತು ಸತ್ಯದ ವಿಜಯವನ್ನು ಸಂಕೇತಿಸುವ ವಿಜಯದಶಮಿ ಹಬ್ಬದಂದು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಈ ಹಬ್ಬವು ನಮ್ಮ ಜೀವನದಲ್ಲಿ ತಾಳ್ಮೆ, ತ್ಯಾಗ ಮತ್ತು ಶೌರ್ಯದ ಜೊತೆಗೆ ಔಚಿತ್ಯದ ಪ್ರತಿರೂಪವಾದ ಭಗವಾನ್ ಶ್ರೀರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ನೀಡುತ್ತದೆ. ಜೈ ಶ್ರೀ ರಾಮ್!” ಎಂದು ಪೋಸ್ಟ್ ಮಾಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

