ದುರ್ಗಾದೇವಿ ಮೂರ್ತಿ ವಿಸರ್ಜನೆ ಕಾರ್ಯ: ಬೆಂಗಳೂರಿನ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ
Vijayadashami Traffic Advisory: ವಿಜಯದಶಮಿ ಪ್ರಯುಕ್ತ ಬೆಂಗಳೂರಿನ ಹಲಸೂರು ಕೆರೆಯಲ್ಲಿ ದುರ್ಗಾದೇವಿ ಮೂರ್ತಿಗಳ ವಿಸರ್ಜನೆ ಹಿನ್ನೆಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ಕೆಲ ಮಾರ್ಗಗಳಲ್ಲಿ ಸಂಚಾರ ಬದಲಾವಣೆ ಮಾಡಿದ್ದಾರೆ. ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಲಾಗಿದೆ. ಹಾಗಾದರೆ ಯಾವೆಲ್ಲಾ ಮಾರ್ಗಗಳು ನಿರ್ಬಂಧಿಸಲಾಗಿದೆ, ಅದಕ್ಕೆ ಪರ್ಯಾಯ ಮಾರ್ಗಗಳು ಯಾವವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 02: ನವರಾತ್ರಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಇಂದು ವಿಜಯದಶಮಿ (vijayadashami). ದಸರಾ ಹಬ್ಬದ ಕೊನೆಯ ದಿನ. ಹಲಸೂರು ಕೆರೆಯ ಕಲ್ಯಾಣಿಯಲ್ಲಿ ದುರ್ಗಾದೇವಿ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತದೆ. ಹೀಗಾಗಿ ನಗರ್ ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಮರುದಿನ ಬೆಳಗಿನ ಜಾವ 04 ಗಂಟೆವರೆಗೆ ಸಂಚಾರ ಮಾರ್ಪಾಡು (traffic advisory) ಮಾಡಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಸಂಚಾರ ನಿರ್ಬಂಧ
- ಕೆನ್ಸಿಂಗ್‌ಟನ್-ಮರ್ಫೀ ರಸ್ತೆ, ಜಂಕ್ಷನ್ ಕಡೆಯಿಂದ ಎಂ.ಇ.ಜಿ ಮೂಲಕ-ಹಲಸೂರು ಲೇಕ್ ಕಡೆಗೆ ಕೆನ್ಸಿಂಗ್‌ಟನ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಕೇವಲ ಎಂಇ.ಜಿ ಕಡೆಯಿಂದ ಕೆನ್ಸಿಂಗ್‌ನ್-ಮರ್ಫೀ ರಸ್ತೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಸಂಚಾರ ಸಲಹೆ ಟ್ವೀಟ್
#ಸಂಚಾರಸಲಹೆ#TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpwfieldtrf @acpeasttraffic @mahadevapuratrf @halairporttrfps @KRPURATRAFFIC @wftrps @bwaditrafficps @ftowntrfps @jbnagartrfps @halasoortrfps @kghallitrfps… pic.twitter.com/VRNaOLXPfg
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) October 1, 2025
- ತಿರುವಳ್ಳವರ್ ಪ್ರತಿಮೆ ಜಂಕ್ಷನ್-ಅಣ್ಣಸ್ವಾಮಿ ಮೊದಲಿಯಾರ್ ರಸ್ತೆ ಕಡೆಯಿಂದ ಆರ್.ಬಿ.ಐ ಜಂಕ್ಷನ್ ಮುಖಾಂತರ ಹಲಸೂರು ಲೇಕ್ ಕಡೆಗೆ ಅಣ್ಣಸ್ವಾಮಿ ಮೊದಲಿಯಾರ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಕೇವಲ ಹಲಸೂರು ಲೇಕ್ ಕಡೆಯಿಂದ ತಿರುವಳ್ಳವರ್ ಪ್ರತಿಮೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಪರ್ಯಾಯ ಮಾರ್ಗಗಳು ಹೀಗಿವೆ
- ಕೆನ್ಸಿಂಗ್‌ಟನ್ ರಸ್ತೆ ಕಡೆಯಿಂದ ಎಂ.ಇ.ಜಿ ಮೂಲಕ-ಹಲಸೂರು ಲೇಕ್ ಕಡೆಗೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಿ ಕೆನ್ಸಿಂಗ್ಟನ್ನಿಂದ ಗುರದ್ವಾರ ಜಂಕ್ಷನ್ ಬಲ ತಿರುವು- ಗಂಗಾಧರ ಚೆಟ್ಟಿ ರಸ್ತೆ-ಡಿಕನ್‌ಸನ್ ರಸ್ತೆ, ಬಲ ತಿರುವು ಪಡೆದು ಸೆಂಟ್ ಜಾನ್ಸ್ ರಸ್ತೆ, ಶ್ರೀ ಸರ್ಕಲ್ ಲಾವಣ್ಯ ಥಿಯೇಟರ್ ಜಂಕ್ಷನ್, ನಾಗಾ ಜಂಕ್ಷನ್ ಮುಖಾಂತರ ಪುಲಕೇಶಿನಗರ ಪ್ರಾಮಿನೇಡ್ ರಸ್ತೆ, ವೀಲರ್ಸ್ ರಸ್ತೆ ಅಥವಾ ಹಲಸೂರು ಕೆರೆ ಕಡೆಗೆ ಹೋಗಬಹುದು.
- ತಿರುವಳ್ಳವರ್ ಪ್ರತಿಮೆ ಜಂಕ್ಷನ್-ಅಣ್ಣಸ್ವಾಮಿ ಮೊದಾಲಿಯರ್ ರಸ್ತೆ ಕಡೆಯಿಂದ ಹಲಸೂರು ಲೇಕ್ ಕಡೆಗೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಿ ಗಂಗಾಧರ್ ಚೆಟ್ಟಿ ರಸ್ತೆಯ ಮುಖಾಂತರ ಆರ್.ಬಿ.ಎನ್.ಎಮ್.ಎಸ್ ಹತ್ತಿರ ಎಡತಿರುವು ಪಡೆದು ಡಿಕೆನ್ಸ್‌ನ್ ರಸ್ತೆಯ ಮುಖಾಂತರ ಸೆಂಟ್ ಜಾನ್ಸ್ ರಸ್ತೆ ತಲುಪಿ ಸೆಂಟ್ ಚಾನ್ಸ್ ರಸ್ತೆ – ಶ್ರೀ ಸರ್ಕಲ್ ಲಾವಣ್ಯ ಥಿಯೇಟರ್ ಜಂಕ್ಷನ್- ನಾಗಾ ಜಂಕ್ಷನ್ ಮುಖಾಂತರ ಪುಲಕೇಶಿನಗರ ಮಿಲ್ಲರ್ಸ್ ರಸ್ತೆ ಕಡೆಗೆ ಅಥವಾ ಹಲಸೂರು ಕೆರೆ ಕಡೆಗೆ ಸಂಚರಿಸಬಹುದು.
ತಾತ್ಕಾಲಿಕ ಪಾರ್ಕಿಂಗ್ ನಿರ್ಬಂಧ
ಹಲಸೂರು ಕರೆಯ ಮುಖ್ಯದ್ವಾರ ಮತ್ತು ಸುತ್ತಲೂ ಇರುವ ಕೆನ್ಸಿಂಗ್ಟನ್ ರಸ್ತೆ-ಅಣ್ಣಸ್ವಾಮಿ ಮೊದಲೀಯಾರ್ ರಸ್ತೆ, ಟ್ಯಾಂಕ್ ರಸ್ತೆಗಳಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




