AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ರಿಲೀಸ್ ಮಾಡ್ತಿನಿ: ಕಾಂಗ್ರೆಸ್​​ ಮುಖಂಡನಿಗೆ ಸ್ಥಳೀಯ ರಾಜಕಾರಣಿಯಿಂದ ಬ್ಲ್ಯಾಕ್​ಮೇಲ್, ಎಫ್​ಐಆರ್ ದಾಖಲು​

ವಿಡಿಯೋ, ಸ್ಕ್ರೀನ್ ಶಾಟ್​​ ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್​​​ ಮುಖಂಡನಿಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಸ್ಥಳೀಯ ರಾಜಕಾರಣಿ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್​​​ ಮುಖಂಡನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನ ತಂಟೆಗೆ ಬಾರದಂತೆ ಅವಾಜ್ ಕೂಡ ಹಾಕಲಾಗಿದೆ.

ವಿಡಿಯೋ ರಿಲೀಸ್ ಮಾಡ್ತಿನಿ: ಕಾಂಗ್ರೆಸ್​​ ಮುಖಂಡನಿಗೆ ಸ್ಥಳೀಯ ರಾಜಕಾರಣಿಯಿಂದ ಬ್ಲ್ಯಾಕ್​ಮೇಲ್, ಎಫ್​ಐಆರ್ ದಾಖಲು​
ಕಾಂಗ್ರೆಸ್ ಮುಖಂಡ ಸಿದ್ದೇಗೌಡ
Shivaprasad B
| Edited By: |

Updated on:Oct 02, 2025 | 11:07 AM

Share

ಬೆಂಗಳೂರು, ಅಕ್ಟೋಬರ್​ 02: ಕಾಂಗ್ರೆಸ್ ಮುಖಂಡ (Congress Leader) ಸಿದ್ದೇಗೌಡಗೆ ಬ್ಲ್ಯಾಕ್​ಮೇಲ್ (Blackmail)​​ ಮಾಡಿದ ಸ್ಥಳೀಯ ರಾಜಕಾರಣಿ ಧನಂಜಯ್​​ ಎಂಬುವವರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್​​ ದಾಖಲಾಗಿದೆ. ನನ್ನ ತಂಟೆಗೆ ಬಂದರೆ ಚುನಾವಣೆ ಸಂದರ್ಭದಲ್ಲಿ ನಿನ್ನ ಮಕ್ಕಳ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದರು. ಧನಂಜಯ್​​​ ಬೆದರಿಕೆಗೆ ಸಿದ್ದೇಗೌಡ ಪತ್ನಿ ಯಶೋಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅವರ ದೂರಿನನ್ವಯ ಇದೀಗ ಎಫ್​​ಐಆರ್​​ ದಾಖಲಾಗಿದೆ.

ನನ್ನ ತಂಟೆಗೆ ಬಂದರೆ ವಿಡಿಯೋ ರಿಲೀಸ್​

ಧನಂಜಯ್​​ ಆಗಾಗ ಯಶೋಧ ಅವರ ಮನೆಗೆ ಬರುತ್ತಿದ್ದ. ನಿನ್ನ ಗಂಡ ಬಿಬಿಎಂಪಿ ಚುನಾವಣೆಗೆ ನಿಂತರೆ ಸ್ಕ್ರೀನ್ ಶಾಟ್ ರಿಲೀಸ್ ಮಾಡುತ್ತೇನೆ. ನಿಮ್ಮ ಮಕ್ಕಳ ಕೆಲ ವಿಡಿಯೋಗಳು ನನ್ನ ಬಳಿ ಇದೆ. ನಿನ್ನ ಗಂಡ ಮಹಿಳೆಯರಿಗೆ ಮಾಡಿದ ಮೆಸೇಜ್ ಸ್ಕ್ರೀನ್ ಶಾಟ್ ಇದೆ. ಸಿದ್ದೇಗೌಡ ಮಾಡಿದ್ದಾರೆನ್ನಲಾದ ಮೆಸೇಜ್ ಸ್ಕ್ರೀನ್ ಶಾಟ್ ಅನ್ನು ಯಶೋಧ ಅವರಿಗೆ ಕಳುಹಿಸಿ ಬಳಿಕ ಡಿಲೀಟ್ ಮಾಡಿದ್ದ.

ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಪರಿಚಯವಾದ ಮಹಿಳೆ ಜತೆ ಸಲುಗೆ, ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್​ಮೇಲ್: ಲಕ್ಷಾಂತರ ರೂ. ವಂಚನೆ

ಧನಂಜಯ್​​ ಬ್ಲ್ಯಾಕ್​ಮೇಲ್​​ ಮಾಡಿದ್ದಲ್ಲದೇ ಸಿದ್ದೇಗೌಡನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ತನ್ನ ತಂಟೆಗೆ ಬಾರದಂತೆ ಅವಾಜ್ ಹಾಕಿದ್ದ. ತನ್ನ ಸಹವಾಸಕ್ಕೆ ಬಂದರೆ ನಿನ್ನ ಮಕ್ಕಳನ್ನ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದ. ಈ ಹಿನ್ನಲೆ ಯಶೋಧ ಪೊಲೀಸರಿಗೆ ದೂರು ನೀಡಿದ್ದರು.

ಬ್ಲ್ಯಾಕ್​ಮೇಲ್​​ಗೆ ನಲುಗಿ ಪ್ರಾಣಬಿಟ್ಟ ನರ್ಸಿಂಗ್ ವಿದ್ಯಾರ್ಥಿನಿ

ಸ್ನೇಹದ ಹೆಸರಲ್ಲಿ ಯುವಕ ಮಾಡಿದ ಬ್ಲ್ಯಾಕ್​ಮೇಲ್​ನಿಂದ ನರ್ಸಿಂಗ್ ಓದುತ್ತಿದ್ದ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡ ಘಟನೆ ಇತ್ತೀಚೆಗೆ ನೆಲಮಂಗಲದಲ್ಲಿ ನಡೆದಿತ್ತು. ಮೈಸೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದ ಯುವತಿಗೆ ತಂದೆ ನವೀನ್​ ಎಂಬಾತನಿಗೆ ಮಗಳ ನಂಬರ್​ ನೀಡಿ ಹಣ ಹಾಕಿಸಿದ್ದರು.

ಇದನ್ನೂ ಓದಿ: ವಿದೇಶಿ ಸಿಮ್ ಬಳಸಿ ತರಕಾರಿ ವ್ಯಾಪಾರಿಗೆ ಕರೆ ಮಾಡಿ ಮಗಳ ಅಶ್ಲೀಲ ಫೋಟೋ ಹರಿಬಿಡುವುದಾಗಿ ಬೆದರಿಕೆ

ಗೂಗಲ್ ಪೇ​, ಫೋನ್​ ಪೇ ಮೂಲಕ ಹಣ ಹಾಕ್ತಿದ್ದ ಈ ನವೀನ್​ ನಿಧಾನಕ್ಕೆ ಅದೇ ನಂಬರ್​ ಮೂಲಕ ಆಕೆ ಜತೆ ಸ್ನೇಹ ಬೆಳಸಿದ್ದ. ಬಳಿಕ ನರ್ಸಿಂಗ್ ಮುಗಿಸಿ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲೇ ಕೆಲಸ ಮಾಡ್ತಿದ್ದಾಗ ಭಾವನಾಳನ್ನ, ನವೀನ್​ ಧರ್ಮಸ್ಥಳಕ್ಕೆ ಕರೆದೊಯ್ದು ಅಸಭ್ಯವಾಗಿ ನಡೆದುಕೊಂಡಿದ್ನಂತೆ. ಅಲ್ದೇ ನನ್ನನ್ನೇ ಮದುವೆ ಆಗುಬೇಕೆಂದು ಕಿರುಕುಳ ನೀಡ್ತಿದ್ನಂತೆ ಇದ್ರಿಂದ ಬೇಸತ್ತ ಭಾವನಾ ನೇಣಿಗೆ ಶರಣಾಗಿದ್ದಳು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:06 am, Thu, 2 October 25

ಏರ್ಪೋಟ್ ರಸ್ತೆಯಲ್ಲಿ ಬಲಿಗಾಗಿ ಕಾಯುತ್ತಿದೆ ಟೋಲ್ ಬೂತ್
ಏರ್ಪೋಟ್ ರಸ್ತೆಯಲ್ಲಿ ಬಲಿಗಾಗಿ ಕಾಯುತ್ತಿದೆ ಟೋಲ್ ಬೂತ್
ಮೈಸೂರು ಮಹಾಬಲೇಶ್ವರ ದೇವಸ್ಥಾನದಲ್ಲಿ ಕಳ್ಳತನ
ಮೈಸೂರು ಮಹಾಬಲೇಶ್ವರ ದೇವಸ್ಥಾನದಲ್ಲಿ ಕಳ್ಳತನ
ಡಿಕೆಶಿ ಬಳಿ ದೆಹಲಿಗೆ ಬನ್ನಿ ಎಂದಿದ್ದರೂ ರಾಹುಲ್ ಗಾಂಧಿ ಸಿಗೋದು ಅನುಮಾನ!
ಡಿಕೆಶಿ ಬಳಿ ದೆಹಲಿಗೆ ಬನ್ನಿ ಎಂದಿದ್ದರೂ ರಾಹುಲ್ ಗಾಂಧಿ ಸಿಗೋದು ಅನುಮಾನ!
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ