ಬಣ್ಣ ಬಣ್ಣ ಚಿತ್ತಾರಗಳಿಂದ ಶೃಂಗಾರಗೊಂಡಿರುವ ಮೈಸೂರು ದಸರಾ ಆನೆಗಳು

ನವರಾತ್ರಿ ಬಳಿಕ ಬರುವುದು ವಿಜಯದಶಮಿ. ಈ ದಿನ ಮೈಸೂರಿನಲ್ಲಿ ಜಂಬೂಸವಾರಿ ನಡೆಯಲಿದೆ. 750ಕೆಜಿಯ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ರಾಜಬೀದಿಗಳಲ್ಲಿ ರಾಜಗಾಂಭಿರ್ಯದಿಂದ ಸಾಗುತ್ತಾನೆ. ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳು ಬಣ್ಣ ಬಣ್ಣ ಚಿತ್ತಾರಗಳಿಂದ ಶೃಂಗಾರಗೊಂಡಿವೆ.

ವಿವೇಕ ಬಿರಾದಾರ
|

Updated on: Oct 12, 2024 | 2:07 PM

Mysore Dasara 2024: Dasara Elephants ready for Jambu Savari

ದಸರಾ ನಿಮಿತ್ತ ಮೈಸೂರಿನಲ್ಲಿ ಕೆಲವೇ ಗಂಟೆಗಳಲ್ಲಿ ಜಂಬೂಸವಾರಿ ಆರಂಭವಾಗಲಿದೆ. ಜಂಬೂಸವಾರಿಯಲ್ಲಿ ಪ್ರಮುಖ ಆಕರ್ಷಣೆ ಅಂಬಾರಿ ಮತ್ತು ಆನೆಗಳು. ಈ ವರ್ಷವೂ ಅಂಬಾರಿಯನ್ನು ಕ್ಯಾಪ್ಟನ್​ ಅಭಿಮನ್ಯು ಹೊರಲಿದ್ದಾನೆ. ಕ್ಯಾಪ್ಟನ್​ ಅಭಿಮನ್ಯು ಐದನೇ ಬಾರಿಗೆ ಅಂಬಾರಿ ಹೊರಲಿದ್ದಾನೆ.

1 / 6
Mysore Dasara 2024: Dasara Elephants ready for Jambu Savari

ಕ್ಯಾಪ್ಟನ್​ ಅಭಿಮನ್ಯುವಿಗೆ ಒಂಬತ್ತು ಆನೆಗಳು ಸಾತ್​ ನೀಡಲಿವೆ. ನಿಶಾನೆಯಾಗಿ ಧನಂಜಯ ಆಯ್ಕೆಯಾಗಿದ್ದಾನೆ. ಅಭಿಮನ್ಯು ಅಂಬಾರಿಯನ್ನು ಹೊತ್ತು ರಾಜಗಾಂಭಿರ್ಯದಿಂದ ರಾಜಬೀದಿಗಳಲ್ಲಿ ಹೋಗುತ್ತಿರುವುದನ್ನು ನೋಡುವುದೇ ಚಂದ. ಜಂಬೂಸವಾರಿ ಕಲವೇ ಗಂಟೆಗಳಲ್ಲಿ ಆರಂಭವಾಗಲಿದೆ.

2 / 6
Mysore Dasara 2024: Dasara Elephants ready for Jambu Savari

ಸಂಜೆ 4 ರಿಂದ 4:30ರ ಒಳಗಾಗಿ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಜಂಬೂಸವಾರಿಯಲ್ಲಿ ಭಾಗವಹಿಸುವ 9 ಆನೆಗಳಿಗೆ ಬಣ್ಣಗಳಿಂದ ಶೃಂಗರಿಸಲಾಗಿದೆ.

3 / 6
Mysore Dasara 2024: Dasara Elephants ready for Jambu Savari

ಮೈಸೂರು ದಸರಾಕ್ಕೆ ಆಗಮಿಸಿರುವ 14 ಆನೆಗಳ ಮೇಲೆ ಬಣ್ಣಗಳಿಂದ ಚಿತ್ರ ಬಿಡಿಸಲಾಗಿದೆ. ಆನೆಗಳ ಸೊಂಡಿಲಿಗೆ ಅರಮನೆ ಲಾಂಛನವಾದ ಗಂಡಭೇರುಂಡ ಬಿಡಸಲಾಗಿದೆ. ಕಿವಿಗಳಿಗೆ ಶಂಖಚಕ್ರ ಬಿಡಿಸಲಾಗಿದೆ. ಕಾಲು ಮತ್ತು ಬಾಲಕ್ಕೆ ಹೂವು ಮತ್ತು ಬಳ್ಳಿಗಳನ್ನು ಬಿಡಿಸಲಾಗಿದೆ.

4 / 6
Mysore Dasara 2024: Dasara Elephants ready for Jambu Savari

ಕಲಾವಿದ ನಾಗಲಿಂಗಪ್ಪ ಬಡಿಗೇರ ಅವರ ನೇತೃತ್ವದ 10 ಜನರ ಆನೆಗಳಿಗೆ ಚಿತ್ರ ಬಿಡಿಸಿದೆ. ಈಗಾಗಲೆ ಎಲ್ಲ ಆನೆಗಳಿಗೆ ಚಿತ್ರ ಬಿಡಿಸಲಾಗಿದೆ. ಜಂಬೂಸವಾರಿಗೆ ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಬಣ್ಣಗಳಿಂದ ಶೃಂಗಾರಗೊಂಡ ಆನೆಗಳನ್ನು ಕಂಡು ಜನರು ಪುಳುಕಿತರಾಗಿದ್ದಾರೆ.

5 / 6
Mysore Dasara 2024: Dasara Elephants ready for Jambu Savari

ಚಾಮುಂಡಿ ಬೆಟ್ಟದಿಂದ ಅರಮನೆಗೆ ಬಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಆನೆಗಳು ಸ್ವಾಗತಿಸಿದವು. ತಾಯಿ ಚಾಮುಂಡೇಶ್ವರಿ ಮೂರ್ತಿ ಬರುತ್ತಿದ್ದಂತೆ ಆನೆಗಳು ದೇವಿಗೆ ನಮಿಸಿದವು.

6 / 6
Follow us
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್