Numerology Horoscope 10th October: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 10ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 10ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
- Vivek Biradar
- Updated on: Oct 10, 2025
- 1:05 am
ಗಣೇಶ ಮೆರವಣಿಗೆ: ಬೆಂಗಳೂರಿನ ಈ ಏರಿಯಾಗಳಿಂದ ಯಲಹಂಕಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ಬಂದ್
ಯಲಹಂಕ ನ್ಯೂಟೌನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಆಗಸ್ಟ್ 31 ರಂದು ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಇದರಿಂದಾಗಿ ಸಂಚಾರ ದಟ್ಟಣೆ ನಿರೀಕ್ಷಿಸಲಾಗಿದೆ. ಬೆಳಿಗ್ಗೆ 9 ರಿಂದ ರಾತ್ರಿ 10 ರವರೆಗೆ ಯಲಹಂಕಕ್ಕೆ ಹೋಗುವ ಹಲವು ರಸ್ತೆಗಳನ್ನು ಮುಚ್ಚಲಾಗಿದೆ. ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಜಾಲಹಳ್ಳಿ, ಪೀಣ್ಯ, ಯಶವಂತಪುರ ಮುಂತಾದ ಪ್ರದೇಶಗಳಿಂದ ಬರುವವರು ಪರ್ಯಾಯ ಮಾರ್ಗಗಳನ್ನು ಬಳಸುವುದು ಅವಶ್ಯಕ.
- Vivek Biradar
- Updated on: Aug 28, 2025
- 7:46 am
ನಿತ್ಯ ಭಕ್ತಿ: ಬೈಕ್, ಕಾರ್ನಲ್ಲಿ ಕಾಳು ಮೆಣಸಿದ್ರೆ ಅಪಘಾತದಿಂದ ಪಾರಾಗಬಹುದಾ?
ಖ್ಯಾತ ಜ್ಯೋತಿಷಿ ಡಾ. ಬಸವರಾಜ್ ಗುರುಜಿ ವಾಹನಗಳ ಸುರಕ್ಷತೆಗಾಗಿ ಏನು ಮಾಡಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ಅರಿಶಿನದ ದಾರದಲ್ಲಿ ಕಟ್ಟಿದ 11 ಕಾಳುಮೆಣಸುಗಳನ್ನು ವಾಹನಕ್ಕೆ ಕಟ್ಟುವುದರಿಂದ ಮೂರು ವರ್ಷಗಳವರೆಗೆ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗಿದೆ. ಮಂಗಳವಾರ ಅಥವಾ ಶುಕ್ರವಾರ ಈ ವಿಧಾನವನ್ನು ಅನುಸರಿಸುವುದು ಶುಭವೆಂದು ನಂಬಲಾಗಿದೆ.
- Vivek Biradar
- Updated on: Aug 28, 2025
- 7:02 am
Daily Horoscope: ಮಿಥುನ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಒಳ್ಳೆಯದಾಗುತ್ತದೆ
ಆಗಸ್ಟ್ 28 ದಿನದ ಭವಿಷ್ಯ: 12 ರಾಶಿಗಳ ಭವಿಷ್ಯವನ್ನು ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ ಮತ್ತು ಕನ್ಯಾ ರಾಶಿಗಳಿಗೆ ಈ ದಿನ ಹೇಗಿರುತ್ತದೆ ಎಂಬುದನ್ನು ತಿಳಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಅದೃಷ್ಟ ಸಂಖ್ಯೆ, ಶುಭ ದಿಕ್ಕು ಮತ್ತು ಮಂತ್ರಗಳನ್ನು ಸೂಚಿಸಲಾಗಿದೆ.
- Vivek Biradar
- Updated on: Aug 28, 2025
- 6:52 am
ನಾಡಿನಾದ್ಯಂತ ಗಣೇಶ ಹಬ್ಬ ಸಂಭ್ರಮ: ಭಕ್ತಿ-ಭಾವದಿಂದ ಗಣಪತಿ ಪ್ರತಿಷ್ಠಾಪನೆ, ಜೈ ಘೋಷಣೆ
ಕರ್ನಾಟಕದಾದ್ಯಂತ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದಾವಣಗೆರೆ, ಚಿತ್ರದುರ್ಗ, ಕೋಲಾರ, ಬಾಗಲಕೋಟೆ, ಹುಬ್ಬಳ್ಳಿ, ಗದಗ ಮುಂತಾದೆಡೆ ಸಾರ್ವಜನಿಕರು ಗಣೇಶನನ್ನು ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ವಿವಿಧ ಗಾತ್ರದ ಮಣ್ಣಿನ ಮತ್ತು ಇತರ ಗಣೇಶ ವಿಗ್ರಹಗಳಿಗೆ ಬಹುಮಟ್ಟಿಗೆ ಬೇಡಿಕೆಯಿದೆ. ಹಬ್ಬದ ಸಂಭ್ರಮದಲ್ಲಿ ಮಕ್ಕಳು ಹೊಸ ಉಡುಪುಗಳನ್ನು ಧರಿಸಿ ಸಂತೋಷಪಡುತ್ತಿದ್ದಾರೆ.
- Vivek Biradar
- Updated on: Aug 27, 2025
- 12:54 pm
Ganesh Chaturthi 2025: ರಾಜ್ಯಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ, ನೇರಪ್ರಸಾರ
ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಆಚರಿಸುವ ಗಣೇಶ ಚತುರ್ಥಿ ಹಬ್ಬವನ್ನು ಈ ವರ್ಷ ಹುಬ್ಬಳ್ಳಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪೂಜಿಸುವುದು ಈ ಹಬ್ಬದ ಪ್ರಮುಖ ಅಂಶ. ಇಂದು ಮಧ್ಯಾಹ್ನ 12 ಗಂಟೆಗೆ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಕೃಷ್ಣಾವತಾರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ನಗರದಾದ್ಯಂತ ವಿವಿಧ ಕಡೆ ಗಣೇಶ ಚತುರ್ಥಿ ಆಚರಣೆಗಳು ನಡೆಯುತ್ತಿವೆ.
- Vivek Biradar
- Updated on: Aug 27, 2025
- 9:03 am
Karnataka Rains: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್
ಹವಾಮಾನ ಇಲಾಖೆ ರಾಜ್ಯದಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 1 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಮತ್ತು ಕೆಲವು ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಗಾಳಿಯ ವೇಗವು ಗಂಟೆಗೆ 30-40 ಕಿಮೀ ತಲುಪುವ ಸಾಧ್ಯತೆ ಇದೆ.
- Vivek Biradar
- Updated on: Aug 27, 2025
- 1:06 pm
ಗಣೇಶ ಚತುರ್ಥಿ: ಮಾರುಕಟ್ಟೆಗಳಲ್ಲಿ ಮಣ್ಣಿನ ಗಣಪನಿಗೆ ಹೆಚ್ಚು ಬೇಡಿಕೆ, ಹಬ್ಬದ ಸಲುವಾಗಿ ಬಿಬಿಎಂಪಿ ಸಕಲ ತಯಾರಿ
ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ. ಬಿಬಿಎಂಪಿ ಪರಿಸರ ಸ್ನೇಹಿ ಆಚರಣೆಗೆ ಒತ್ತು ನೀಡಿ, ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪರಿಸರ ಸ್ನೇಹಿ ಮೂರ್ತಿಗಳ ಬಳಕೆಗೆ ಒತ್ತಾಯಿಸಲಾಗಿದೆ. 41 ಕೆರೆಗಳಲ್ಲಿ ವಿಸರ್ಜನಾ ಸೌಲಭ್ಯ ಒದಗಿಸಲಾಗಿದೆ. ಕಲ್ಯಾಣಿಗಳಲ್ಲಿ ಪಿಒಪಿ ಗಣೇಶನ ಮೂರ್ತಿಗಳ ವಿಸರ್ಜನೆಗೆ ನಿಷೇಧ ಹೇರಲಾಗಿದೆ.
- Vivek Biradar
- Updated on: Aug 27, 2025
- 9:06 am
ಗಣೇಶ ಚತುರ್ಥಿ: ಗಣೇಶ ಪೂಜೆ, ಪ್ರತಿಷ್ಠಾಪನೆ ಮತ್ತು ವಿಸರ್ಜನೆ ವಿಧಾನಗಳು ತಿಳಿಯಿರಿ
ಗಣೇಶ ಚತುರ್ಥಿ ಹಬ್ಬದ ಪ್ರಾಮುಖ್ಯತೆ ಮತ್ತು ಪೂಜಾ ವಿಧಾನಗಳ ಕುರಿತು ಡಾ. ಬಸವರಾಜ ಗುರುಜಿ ಅವರು ಮಾಹಿತಿ ನೀಡಿದ್ದಾರೆ. ಪ್ರತಿಷ್ಠಾಪನೆ, ಪೂಜಾ ವಿಧಿವಿಧಾನಗಳು, ಮತ್ತು ವಿಸರ್ಜನೆ ಸೇರಿದಂತೆ ವಿವಿಧ ಅಂಶಗಳನ್ನು ಈ ದಿನಚರಿಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಲಾಗಿದೆ. ಮಣ್ಣಿನ ಗಣಪತಿಯ ಪ್ರಾಮುಖ್ಯತೆ ಮತ್ತು ಚಂದ್ರ ದರ್ಶನದ ಬಗ್ಗೆಯೂ ತಿಳಿಸಲಾಗಿದೆ.
- Vivek Biradar
- Updated on: Aug 27, 2025
- 7:13 am
Daily Horoscope: ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭ ಫಲವಿದೆ
ಆಗಸ್ಟ್ 27 ದಿನದ ರಾಶಿ ಫಲಗಳನ್ನು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ ಮುಂತಾದ ಎಲ್ಲಾ ರಾಶಿಗಳಿಗೆ ಈ ದಿನ ಏನು ಫಲವಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಅದೃಷ್ಟ ಸಂಖ್ಯೆಗಳು ಮತ್ತು ಶುಭ ಬಣ್ಣಗಳ ಸೂಚನೆ ಕೂಡ ನೀಡಲಾಗಿದೆ. ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳನ್ನೂ ಅವರು ವ್ಯಕ್ತಪಡಿಸಿದ್ದಾರೆ.
- Vivek Biradar
- Updated on: Aug 27, 2025
- 6:51 am
ಬೆಂಗಳೂರು: ಕೇಸರಿ ಟವೆಲ್ ಹಾಕಿಕೊಂಡಿದ್ದಕ್ಕೆ ಯುವಕನ ಮೇಲೆ ಹಲ್ಲೆ; ಮೂವರ ಬಂಧನ
ಕೇಸರಿ ಬಣ್ಣದ ಟವೆಲ್ ಹಾಕಿಕೊಂಡಿದ್ದಕ್ಕೆ ಸ್ಲಿಂದರ್ ಕುಮಾರ್ ಎಂಬುವವರ ಮೇಲೆ ಮೂವರು ಯುವಕರು ಹಲ್ಲೆ ನಡೆಸಿದ್ದಾರೆ. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಘಟನೆ ನಡೆದಿದೆ. ಆರೋಪಿಗಳು ತಬ್ರೇಜ್, ಇಮ್ರಾನ್ ಖಾನ್ ಮತ್ತು ಅಜೀಝ್ ಖಾನ್. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ನಗರದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
- Vivek Biradar
- Updated on: Aug 26, 2025
- 1:22 pm
ಬಿಕ್ಲು ಶಿವ ಕೊಲೆ ಕೇಸ್: ಇಂಟರ್ಪೋಲ್ ನೋಟಿಸ್ಗೆ ಭಯಬಿದ್ದು ಭಾರತಕ್ಕೆ ಬಂದ ಜಗ್ಗ CID ಬಲೆಗೆ
ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ದುಬೈಗೆ ಪರಾರಿಯಾಗಿದ್ದ ಜಗ್ಗ ವಿವಿಧ ದೇಶಗಳಿಗೆ ತೆರಳಿದ್ದನು. ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ನೀಡಿ ಜಗ್ಗನನ್ನು ಹುಡುಕುತ್ತಿದ್ದ ಸಿಐಡಿ, ಆತ ಭಾರತಕ್ಕೆ ಮರಳುತ್ತಿದ್ದ ಮಾಹಿತಿ ಪಡೆದು ಬಂಧಿಸಿದೆ.
- Vivek Biradar
- Updated on: Aug 26, 2025
- 10:06 am