ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 8ರ ದಿನಭವಿಷ್ಯ
Daily Numerology March 07: ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 8ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಯಾವುದೇ ಎಲೆಕ್ಟ್ರಾನಿಕ್ ಉಪಕರಣ ಅಥವಾ ಮೊಬೈಲ್ ಚಾರ್ಜ್ ಮಾಡುವ ಮೊದಲು “ಓಂ ಗಂ ಗಣಪತಯೇ ನಮಃ” ಎಂದು ಸ್ಮರಿಸಿ. ಈ ದಿನ ಮನೆಯಲ್ಲಿ ದೀಪ ಹಚ್ಚುವಾಗ ಅಥವಾ ವಿದ್ಯುತ್ ಕೆಲಸ ಮಾಡುವಾಗ ಅತಿಯಾದ ಅವಸರ ಬೇಡ. ಜಾಗರೂಕತೆಯೇ ಈ ದಿನದ ದೊಡ್ಡ ಪರಿಹಾರ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ದಾಂಪತ್ಯದಲ್ಲಿ ಒಂದು ಮಾತು ಬರುತ್ತದೆ, ಒಂದು ಮಾತು ಹೋಗುತ್ತದೆ. ಈ ಕಾರಣಕ್ಕೆ ವಿರಸ ವಿಕೋಪಕ್ಕೆ ಹೋಗಿ, ದಂಪತಿ ಮಧ್ಯೆ ಮಾತನಾಡದೆ ಇರುವಂಥ ಸನ್ನಿವೇಶ ನಿಮ್ಮಲ್ಲಿ ಕೆಲವರಿಗೆ ಸೃಷ್ಟಿ ಆಗಲಿದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಿ. ಏಕಾಏಕಿ ಉದ್ಯೋಗ ಸ್ಥಳದಲ್ಲಿ ನಿಮ್ಮ ಅಗತ್ಯ ಕಂಡುಬರಲಿದ್ದು, ಅದಕ್ಕಾಗಿ ಸಮಯ ಮೀಸಲಿಡಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ವಿದೇಶಗಳಲ್ಲಿ ಇರುವಂಥವರು ವಾಪಸ್ ತಾಯ್ನಾಡಿಗೆ ಕೆಲವು ಸಮಯದ ಮಟ್ಟಿಗೆ ವಾಪಸ್ ಬರಲಿದ್ದೀರಿ. ಅದು ರಜಾ ದಿನಗಳ ಕಾರಣಕ್ಕೆ ಇರಬಹುದು. ಅಥವಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಕಾರಣಕ್ಕಾದರೂ ಇರಬಹುದು. ಇನ್ನು ಕೃಷಿ ಭೂಮಿ ಅಥವಾ ದೊಡ್ಡ ಅಳತೆಯ ಸೈಟನ್ನು ಹುಡುಕುತ್ತಾ ಇರುವವರು ಈ ದಿನ ಅಂಥ ಕೆಲವು ಆಸ್ತಿಗಳನ್ನು ಖರೀದಿಗಾಗಿ ನೋಡಲಿದ್ದೀರಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ರೆಸಾರ್ಟ್, ರೆಸ್ಟೋರೆಂಟ್ ಅಥವಾ ಮಾಲ್ ಗಳಿಗೆ ಕುಟುಂಬ ಸಮೇತ ತೆರಳುವಂಥ ಯೋಗ ಇದೆ. ಹೊಸ ರುಚಿ ಖಾದ್ಯಗಳನ್ನು ಸವಿಯಲಿದ್ದೀರಿ. ಬಹಳ ಕಾಲದಿಂದ ತೆರಳಬೇಕು ಎಂದುಕೊಂಡಿದ್ದ ಧಾರ್ಮಿಕ ಕೇಂದ್ರಗಳಿಗೆ ನಿಮ್ಮಲ್ಲಿ ಕೆಲವರು ಭೇಟಿ ನೀಡಲಿದ್ದೀರಿ. ಆರೋಗ್ಯಕರ ಜೀವನಕ್ಕೆ ಸಹಾಯ ಮಾಡುವಂಥ ಕೆಲವು ಹವ್ಯಾಸಗಳನ್ನು ಇಂದಿನಿಂದ ಆರಂಭಿಸಲಿದ್ದೀರಿ. ಸೈಕ್ಲಿಂಗ್, ಜಿಮ್, ಅಥವಾ ಯೋಗಾಭ್ಯಾಸ ಇಂಥವುಗಳಿಗೆ ಸೇರ್ಪಡೆ ಆಗುವಂಥ ಯೋಗ ಇದೆ.
ಲೇಖನ- ಸ್ವಾತಿ ಎನ್.ಕೆ.
