AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಪರ-ವಿರೋಧ ಚರ್ಚೆಗೆ ಕಾರಣವಾದ ಸಚಿವ ಯು.ಟಿ. ಖಾದರ್ ಹೇಳಿಕೆ

ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಪರ-ವಿರೋಧ ಚರ್ಚೆಗೆ ಕಾರಣವಾದ ಸಚಿವ ಯು.ಟಿ. ಖಾದರ್ ಹೇಳಿಕೆ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Jul 06, 2026 | 4:23 PM

Share

ಮುಖ್ಯಾಂಶಗಳು

  • 'ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹೊಡೆಯಿರಿ'
  • ಮಂಗಳೂರು ಪೊಲೀಸ್ ಆಯುಕ್ತರಿಗೆ ಸಚಿವ ಖಾದರ್​​ ಸೂಚನೆ
  • ಆರೋಗ್ಯ ಸಚಿವರ ಹೇಳಿಕೆ ಬಗ್ಗೆ ಶುರುವಾದ ಪರ-ವಿರೋಧ ಚರ್ಚೆ

ಮಂಗಳೂರು ನಗರದಲ್ಲಿ ಅಪರಾಧ ಚಟುವಟಿಕೆಗಳು ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ಸಚಿವ ಯು.ಟಿ. ಖಾದರ್ ಅವರು ಮಹತ್ವದ ಸೂಚನೆ ನೀಡಿದ್ದಾರೆ. ಮಂಗಳೂರು ಪೋಲಿಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಸೂಚನೆ ನೀಡಿದ ಖಾದರ್, ಪುನರಾವರ್ತಿತ ಅಪರಾಧ ಕೃತ್ಯಗಳಲ್ಲಿ ತೊಡಗುವ ಸಮಾಜಘಾತಕ ಶಕ್ತಿಗಳ ಕೈ ಅಥವಾ ಕಾಲಿಗೆ ಗುಂಡು ಹಾರಿಸಲು ನಿರ್ದೇಶಿಸಿದ್ದಾರೆ.

ಮಂಗಳೂರು, ಜುಲೈ 06: ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹೊಡೆಯಿರಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಗೆ ಆರೋಗ್ಯ ಸಚಿವ ಯು.ಟಿ. ಖಾದರ್​​​ ಸೂಚನೆ ನೀಡಿದ್ದಾರೆ. ಹಿಂದಿನ ಆಯುಕ್ತ ಸಂದೀಪ್ ಪಾಟೀಲ್ ಸುಮಾರು ಗುಂಡು ಹೊಡೆದಿದ್ದರು. ಹೀಗಾಗಿ ಆಗ ಕ್ರಿಮಿನಲ್ಸ್, ರೌಡಿಶೀಟರ್​ಗಳು ಕ್ರೈಂ ಮಾಡಲು ಹೆದರುತ್ತಿದ್ದರು. ಹಾಗೆ ಮಾಡಲು ಕಾನೂನು ಅಡ್ಡಿ ಬರುತ್ತೆ, ಆದ್ರೆ ಕ್ರೈಂ ಕಂಟ್ರೋಲ್ ಆಗುತ್ತೆ ಎಂದು ಮಂಗಳೂರಿನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಸಚಿವ ಖಾದರ್ ಸೂಚಿಸಿದ್ದರು. ಸಚಿವರ ಈ ಹೇಳಿಕೆಯೀಗ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Published on: Jul 06, 2026 04:19 PM

Follow Us