- TV9 Kannada Kannada News Photos CP Yogeshwar son Dhyan debuts as Hero CM DK Shivakumar claps for movies
ಹೀರೋ ಆದ ಸಿಪಿ ಯೋಗೇಶ್ವರ್ ಪುತ್ರ ಧ್ಯಾನ್; ಕ್ಲ್ಯಾಪ್ ಮಾಡಿದ ಮುಖ್ಯಮಂತ್ರಿ ಡಿಕೆಶಿ
ಸಿಪಿ ಯೋಗೇಶ್ವರ್ ಅವರ ಮಗ ಧ್ಯಾನ್ ಯೋಗೇಶ್ವರ್ ಅವರು ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರು ನಟಿಸುತ್ತಿರುವ ಎರಡು ಸಿನಿಮಾಗಳ ಮುಹೂರ್ತ ನಡೆದಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಆ ಸಂದರ್ಭದ ಫೋಟೋಗಳು ಇಲ್ಲಿವೆ ನೋಡಿ..
Updated on: Jul 05, 2026 | 12:27 PM

‘ಸೈನಿಕ 2’ ಮತ್ತು ‘ಕರ್ನಾಟಬಲಂ’ ಸಿನಿಮಾಗಳು ಲಾಂಚ್ ಆಗಿವೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಹೂರ್ತ ಸಮಾರಂಭಕ್ಕೆ ಚಾಲನೆ ನೀಡಿದ್ದಾರೆ. ಇವು ಸಿಪಿ ಯೋಗೇಶ್ವರ್ ಪುತ್ರ ಧ್ಯಾನ್ ನಾಯಕನಾಗಿ ನಟಿಸುತ್ತಿರುವ ಚಿತ್ರಗಳು.

ಈ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್, ಸೋಮಣ್ಣ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಅವರು ಶುಭ ಹಾರೈಸಿದರು. ‘ಇತಿಹಾಸ ಯಾರೂ ಮರೆಯೋಕೆ ಸಾಧ್ಯ ಇಲ್ಲ’ ಎಂದು ಅವರು ಹೇಳಿದರು.

‘ಸಿಪಿ ಯೋಗೇಶ್ವರ್ ಪುತ್ರ ಧ್ಯಾನ್ ಅವರಿಗೆ ಒಳಿತಾಗಲಿ. ಇತಿಹಾಸವನ್ನ ನೆನಪು ಮಾಡುವ ಕೆಲಸವನ್ನು ಧ್ಯಾನ್ ಮಾಡಲಿ. ತುಂಬು ಹೃದಯದಿಂದ ನಾನು ಆಶೀರ್ವಾದ ಮಾಡುತ್ತೇನೆ’ ಎಂದು ಡಿಕೆ ಶಿವಕುಮಾರ್ ಅವರು ಶುಭ ಕೋರಿದರು.

ಡಿಕೆ ಶಿವಕುಮಾರ್ ಅವರಿಗೆ ಮೊದಲಿನಿಂದಲೂ ಚಿತ್ರರಂಗದ ನಂಟು ಇದೆ. ಆ ಬಗ್ಗೆ ಅವರು ನೆನಪಿಸಿಕೊಂಡರು. ‘ನಾನೊಬ್ಬ ವಿತರಕನಾಗಿದ್ದೆ. ಈಗಲೂ ವಿತರಕನಾಗಿ ಕೆಲಸ ಮಾಡುತ್ತಾ ಇದ್ದೇನೆ’ ಎಂದು ಡಿಕೆಶಿ ಅವರು ಹೇಳಿದರು.

‘ಥಿಯೇಟರ್ ಮಾಲೀಕರು ಭೇಟಿ ಮಾಡಿ ಕಷ್ಟ ಹೇಳಿಕೊಳ್ಳುತ್ತಿದ್ದಾರೆ. ಜಯಮಾಲಾ ಕೂಡ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ. ಪ್ರೇಕ್ಷಕರು ಕೂಡ ಸಾಥ್ ನೀಡಬೇಕು. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್ ಇಂಟರ್ನೆಟ್) ಸಂಸ್ಥೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ.
Read More



