AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಡ್-ವೀಕ್ ಎಲಿಮಿನೇಷನ್’ನಲ್ಲಿ ದೊಡ್ಡ ಟ್ವಿಸ್ಟ್; ವೋಟ್ ಕಸಿದುಕೊಳ್ಳೋ ಅವಕಾಶ

‘ಬಿಗ್ ಬಾಸ್’ ಕನ್ನಡ ಮನೆಯಲ್ಲಿ ಮಿಡ್-ವೀಕ್ ಎಲಿಮಿನೇಷನ್ ಕಾವು ಜೋರಾಗಿದ್ದು, 50% ವೋಟ್ ಕಸಿಯುವ ಹೊಸ ಟ್ವಿಸ್ಟ್ ನೀಡಲಾಗಿದೆ. ಇದರಿಂದ ಅಡ್ವಾಂಟೇಜ್ ಪಡೆದವರು ಬಚಾವ್ ಆಗಿ, ಅನರೀಕ್ಷಿತ ಸ್ಪರ್ಧಿ ಮನೆ ಹೊರಬೀಳುವ ಭೀತಿಯಲ್ಲಿದ್ದಾರೆ. ಈ ರೋಚಕ ಪ್ರಕ್ರಿಯೆ ದೊಡ್ಮನೆಯ ಆಟವನ್ನೇ ಬದಲಾಯಿಸಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

ಮಿಡ್-ವೀಕ್ ಎಲಿಮಿನೇಷನ್’ನಲ್ಲಿ ದೊಡ್ಡ ಟ್ವಿಸ್ಟ್; ವೋಟ್ ಕಸಿದುಕೊಳ್ಳೋ ಅವಕಾಶ
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Sep 24, 2026 | 1:34 PM

Share

‘ಬಿಗ್ ಬಾಸ್’ ಕನ್ನಡ ಮನೆಯಲ್ಲಿ ಈ ವಾರ ಮಿಡ್​ ವೀಕ್ ಎಲಿಮಿನೇಷನ್ ಕಾವು ಜೋರಾಗಿದೆ. ಈ ಶೋ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮನೆಮಂದಿಗೆ ಬಿಗ್ ಬಾಸ್ ನೀಡಿದ ಬಿಗ್ ಶಾಕ್ ಸ್ಪರ್ಧಿಗಳ ನಿದ್ದೆಗೆಡಿಸಿದೆ. ಅಂದುಕೊಳ್ಳದೆ ಇದ್ದವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಶೇ. 50ರಷ್ಟು ವೋಟ್ ಕಸಿಯುವ ವಿಶೇಷ ಅಧಿಕಾರ

ಈ ಬಾರಿಯ ಮಿಡ್-ವೀಕ್ ಎಲಿಮಿನೇಷನ್ ಪ್ರಕ್ರಿಯೆಗೆ ಬಿಗ್ ಬಾಸ್ ಸಂಪೂರ್ಣ ಹೊಸ ಹಾಗೂ ಅಪರೂಪದ ಟ್ವಿಸ್ಟ್ ನೀಡಿದೆ. ಅಡ್ವಾಂಟೇಜ್ ಪಡೆದಿರುವ ನಾಲ್ವರು ಸ್ಪರ್ಧಿಗಳು, ತಮ್ಮಿಚ್ಛೆಯ ಯಾವುದೇ ಒಬ್ಬ ಸದಸ್ಯರ ಒಟ್ಟು ವೋಟ್‌ಗಳಲ್ಲಿ ಶೇಕಡಾ 50% ರಷ್ಟು ವೋಟ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಎಲಿಮಿನೇಷನ್ ಭೀತಿಯಲ್ಲಿ ಸ್ಪರ್ಧಿಗಳು

ಈ ಟ್ವಿಸ್ಟ್‌ನಿಂದಾಗಿ ತಮ್ಮ ವೋಟ್‌ಗಳನ್ನು ಹೆಚ್ಚಿಸಿಕೊಂಡು ಎಲಿಮಿನೇಷನ್‌ನಿಂದ ಬಚಾವ್ ಆಗುವ ಅವಕಾಶ ಕೆಲವರಿಗೆ ಸಿಕ್ಕರೆ, ಮತ್ತೆ ಕೆಲವರು ವೋಟ್‌ಗಳನ್ನು ಕಳೆದುಕೊಂಡು ನೇರವಾಗಿ ಮನೆಯಿಂದ ಹೊರಹೋಗುವ ಅಪಾಯದಲ್ಲಿದ್ದಾರೆ. ವೋಟ್ ಕಸಿಯುವ ಈ ಪ್ರಕ್ರಿಯೆಯು ಬಿಗ್ ಬಾಸ್ ಮನೆಯ ಒಳಗಿನ ಸಮೀಕರಣವನ್ನೇ ಬದಲಾಯಿಸಿದೆ.

ಈ ಅಪರೂಪದ ಅವಕಾಶವನ್ನು ಸ್ಪರ್ಧಿಗಳು ಹೇಗೆ ಬಳಸಿಕೊಳ್ಳಲಿದ್ದಾರೆ ಮತ್ತು ಮಿಡ್-ವೀಕ್ ಎಲಿಮಿನೇಷನ್‌ನಿಂದ ಯಾರು ಮನೆಗೆ ತೆರಳಲಿದ್ದಾರೆ ಎಂಬುದು ಇಂದಿನ ರಾತ್ರಿ 9.30ರ ಸಂಚಿಕೆಯಲ್ಲಿ ಸ್ಪಷ್ಟವಾಗಲಿದೆ.

ಇದನ್ನೂ ಓದಿ: ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು ಯಾರು? ಕಣ್ಣೀರು ಹಾಕಿದ ಜಗದೀಶ್

ಈ ಬೆಳವಣಿಗೆಯಿಂದ ಅಂದುಕೊಳ್ಳದೇ ಇದ್ದವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಾಧ್ಯತ ಇದೆ. ದೊಡ್ಮನೆಯಿಂದ ಯಾರು ಹೊರ ಹೋಗುತ್ತಾರೆ ಎನ್ನುವ ಪ್ರಶ್ನೆ ವೀಕ್ಷಕರನ್ನು ಬಲವಾಗಿ ಕಾಡುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More