AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನ ದಿನ ಭವಿಷ್ಯ: ಗುರುಬಲ ಯಾರಿಗಿದೆ?; 12 ರಾಶಿಗಳ ಇಂದಿನ ಫಲಾಫಲ

ಇಂದಿನ ದಿನ ಭವಿಷ್ಯ: ಗುರುಬಲ ಯಾರಿಗಿದೆ?; 12 ರಾಶಿಗಳ ಇಂದಿನ ಫಲಾಫಲ

ಅಕ್ಷಯ್​ ಪಲ್ಲಮಜಲು​​
|

Updated on:Sep 24, 2026 | 6:36 AM

Share

ಟಿವಿ9 ಡಿಜಿಟಲ್ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 24-09-2026 ಗುರುವಾರ ದಿನದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನದ ಗ್ರಹಗತಿ, ರಾಹುಕಾಲ, ಶುಭಕಾಲ, ಪ್ರಮುಖ ಘಟನೆಗಳು ಹಾಗೂ ಪ್ರತಿ ರಾಶಿಯವರ ಆರ್ಥಿಕ, ವೃತ್ತಿ, ಆರೋಗ್ಯ ಮತ್ತು ಸಂಬಂಧಗಳ ಮೇಲಿನ ಪ್ರಭಾವಗಳ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಸೆ.24: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 24-09-2026, ಗುರುವಾರ ದಿನದ ದ್ವಾದಶ ರಾಶಿಗಳ ಫಲಾಫಲಗಳ ಕುರಿತು ಮಾಹಿತಿ ನೀಡಿದ್ದಾರೆ. ಈ ದಿನವು ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷಋತು, ಶುಕ್ಲಪಕ್ಷ ತ್ರಯೋದಶಿ, ಧನಿಷ್ಠ ನಕ್ಷತ್ರ, ದೃತಿ ಯೋಗ ಮತ್ತು ಕೌಲವಕರಣವನ್ನು ಒಳಗೊಂಡಿದೆ. ಮಧ್ಯಾಹ್ನ 1:43 ರಿಂದ 3:13 ರವರೆಗೆ ರಾಹುಕಾಲವಿರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲವು ಮಧ್ಯಾಹ್ನ 12:11 ರಿಂದ 1:42 ರವರೆಗೆ ಇರುತ್ತದೆ. ಗುರುವಾರವಾಗಿರುವುದರಿಂದ ಗುರುಗಳ ಲಹರಿಗಳು ಇರತಕ್ಕಂತ ವಿಶೇಷ ದಿನವಾಗಿದೆ. ದಕ್ಷಿಣಾಮೂರ್ತಿ, ಗುರು ರಾಘವೇಂದ್ರ ಸ್ವಾಮಿಗಳು, ಶಿರಡಿ ಸಾಯಿಬಾಬಾ, ಶ್ರೀಧರ ಸ್ವಾಮಿಗಳು ಅಥವಾ ಭೌತಿಕ ಗುರುಗಳಾದ ತಂದೆ-ತಾಯಿಗಳ ಆಶೀರ್ವಾದಕ್ಕೆ ಪಾತ್ರರಾಗಲು ಇದು ಪರ್ವ ದಿನವಾಗಿದೆ. ಇಂದು ಪ್ರದೋಷ ದಿನ ಮತ್ತು ನಾರಾಯಣ ಗುರುಗಳ ಪುಣ್ಯತಿಥಿ ಆಚರಣೆಯೂ ಇದೆ. ಹುಲಿಕಲ್‌ನಲ್ಲಿ ಉತ್ಸವಗಳು ಮತ್ತು ಸವದತ್ತಿಯಲ್ಲಿ ಪುಣ್ಯ ಕಾರ್ಯಕ್ರಮಗಳು ನಡೆಯಲಿದ್ದು, ಹಾನಗಲ್ಲು ಕುಮಾರಸ್ವಾಮಿಗಳ ಜಯಂತ್ಯುತ್ಸವವನ್ನೂ ಆಚರಿಸಲಾಗುತ್ತದೆ. ಇಂದು ರವಿ ಕನ್ಯಾ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯ ಧನಿಷ್ಠ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ. ಮೇಷ ರಾಶಿಯವರಿಗೆ ಆರ್ಥಿಕವಾಗಿ ಚೆನ್ನಾಗಿರುತ್ತದೆ, ವೃತ್ತಿಯಲ್ಲಿ ಕೀರ್ತಿ ಸಿಗುತ್ತದೆ. ವೃಷಭ ರಾಶಿಯವರಿಗೆ ಪ್ರಯತ್ನಗಳಿಗೆ ತಕ್ಕ ಫಲ, ಹಣಯೋಗವಿರುತ್ತದೆ. ಮಿಥುನ ರಾಶಿಯವರು ಆತುರದ ನಿರ್ಧಾರಗಳಿಂದ ದೂರವಿರಿ. ಕಟಕ ರಾಶಿಯವರು ಅನುಮಾನಗಳಿಗೆ ಹೆಚ್ಚು ಅವಕಾಶ ನೀಡದಿರಿ. ಸಿಂಹ ರಾಶಿಯವರಿಗೆ ವ್ಯವಹಾರದಲ್ಲಿ ಲಾಭ, ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಕನ್ಯಾ ರಾಶಿಯವರಿಗೆ ಮಾತಿನಲ್ಲಿ ಮೃದುತ್ವ ಮತ್ತು ಆಕಸ್ಮಿಕ ಧನಯೋಗವಿರುತ್ತದೆ. ತುಲಾ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರಾದರೂ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ವೃಶ್ಚಿಕ ರಾಶಿಯವರಿಗೆ ಆದಾಯದಲ್ಲಿ ಏರಿಕೆ, ಋಣಮುಕ್ತರಾಗುವ ಯೋಗವಿದೆ. ಧನುಸ್ಸು ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಮತ್ತು ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಮಕರ ರಾಶಿಯವರಿಗೆ ಮಾಡಿದ ಕೆಲಸಗಳ ಫಲ, ಅಪವಾದಗಳಿಂದ ಮುಕ್ತಿ. ಕುಂಭ ರಾಶಿಯವರಿಗೆ ಅನುಮಾನಗಳಿಂದ ಮುಕ್ತಿ, ಕಳೆದುಕೊಂಡಿದ್ದನ್ನು ಪಡೆಯುವ ಯೋಗವಿದೆ. ಮೀನ ರಾಶಿಯವರಿಗೆ ಭೂ ವಿವಾದ ಇತ್ಯರ್ಥ, ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 24, 2026 06:36 AM

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More