Weekly Horoscope: ನಿಮ್ಮ ರಾಶಿಗನುಗುಣವಾಗಿ ಈವಾರದ ಭವಿಷ್ಯ ತಿಳಿಯಿರಿ; ವಾರಭವಿಷ್ಯ ಇಲ್ಲಿದೆ
ಜುಲೈ 5 ರಿಂದ 11, 2026 ರವರೆಗಿನ ವಾರದ ರಾಶಿಫಲ ಇಲ್ಲಿದೆ. ಸೂರ್ಯ, ಬುಧ, ಚಂದ್ರ, ಮಂಗಳ, ಶುಕ್ರ, ಗುರು, ಶನಿ, ರಾಹು ಮತ್ತು ಕೇತುಗಳ ಸ್ಥಾನಗಳ ಆಧಾರದ ಮೇಲೆ, ಪ್ರತಿ ರಾಶಿಯವರಿಗೆ ಆರ್ಥಿಕ, ವೃತ್ತಿ, ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವ ಫಲಿತಾಂಶಗಳು ಸಿಗಲಿವೆ ಎಂಬುದನ್ನು ತಿಳಿಯಿರಿ. ಗ್ರಹಗಳ ಬದಲಾವಣೆಗಳಿಗೆ ಅನುಗುಣವಾಗಿ ಸೂಕ್ತ ರೀತಿಯಲ್ಲಿ ವರ್ತಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ.

ಜುಲೈ 5 ರಿಂದ ಜುಲೈ 11, 2026 ರವರೆಗೆ ಸೂರ್ಯ-ಬುಧ ಮಿಥುನದಲ್ಲಿ, ಚಂದ್ರ-ಮಂಗಳ ವೃಷಭದಲ್ಲಿ, ಶುಕ್ರ-ಕೇತು ಸಿಂಹದಲ್ಲಿ, ಗುರು ಕರ್ಕಾಟಕದಲ್ಲಿ, ಶನಿ ಮೀನದಲ್ಲಿ ಮತ್ತು ರಾಹು ಕುಂಭ ರಾಶಿಯಲ್ಲಿದ್ದಾರೆ. ಕಾಲಕಾಲಕ್ಕೆ ಬದಲಾಣೆ ಬೇಕಿದ್ದು, ಸೂಕ್ತ ರೀತಿಯಲ್ಲಿ ವರ್ತಿಸಿದರೆ ಶುಭವಾಗಲಿದೆ.
ಮೇಷ ರಾಶಿ:
ನಿಮ್ಮ ರಾಶ್ಯಾಧಿಪತಿ ಮಂಗಳ ಚಂದ್ರನೊಂದಿಗೆ ದ್ವಿತೀಯದಲ್ಲಿದ್ದಾನೆ. ಆರ್ಥಿಕವಾಗಿ ಧನಲಾಭದ ಯೋಗವಿದೆ. ಆದರೆ ಮಾತಿನ ಮೇಲೆ ನಿಯಂತ್ರಣವಿರಲಿ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ.
ವೃಷಭ ರಾಶಿ:
ನಿಮ್ಮದೇ ರಾಶಿಯಲ್ಲಿ ಚಂದ್ರ ಮತ್ತು ಮಂಗಳನ ಯುತಿಯ ಕಾರಣ ಲಕ್ಷ್ಮಿ ಯೋಗ ಇರುವುದರಿಂದ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಹೊಸ ಕಾರ್ಯಗಳಿಗೆ ಕೈಹಾಕಲು ಸೂಕ್ತ ಸಮಯ. ಆದರೆ ಕೋಪ ಮತ್ತು ಆತುರದ ನಿರ್ಧಾರಗಳಿಂದ ದೂರವಿರಿ. ಆರೋಗ್ಯದ ಕಡೆ ಗಮನಹರಿಸಿ.
ಮಿಥುನ ರಾಶಿ:
ಸೂರ್ಯ ಮತ್ತು ಬುಧ ನಿಮ್ಮ ರಾಶಿಯಲ್ಲೇ ಇರುವುದರಿಂದ ಬುದ್ಧಿಶಕ್ತಿ ತೀಕ್ಷ್ಣವಾಗಿರುತ್ತದೆ. ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಆದಾಗ್ಯೂ, ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬಜೆಟ್ ಕಡೆ ಗಮನ ಕೊಡುವುದು ಉತ್ತಮ.
ಕರ್ಕಾಟಕ ರಾಶಿ:
ನಿಮ್ಮ ರಾಶಿಯಲ್ಲಿ ಗುರು ಇರುವುದರಿಂದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗುತ್ತವೆ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಹಿರಿಯರ ಬೆಂಬಲ ಸಿಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ.
ಸಿಂಹ ರಾಶಿ:
ಶುಕ್ರ ಮತ್ತು ಕೇತು ನಿಮ್ಮ ರಾಶಿಯಲ್ಲಿ ಇರುವುದರಿಂದ ಕಲಾತ್ಮಕ ಮತ್ತು ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆದರೆ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಅನಗತ್ಯ ಆಲೋಚನೆಗಳಿಂದ ದೂರವಿರಿ.
ಕನ್ಯಾ ರಾಶಿ:
ನಿಮ್ಮ ರಾಶ್ಯಾಧಿಪತಿ ಬುಧ ಮಿಥುನದಲ್ಲಿ ಬಲಿಷ್ಠವಾಗಿದ್ದಾನೆ. ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆ ಅಥವಾ ಹೊಸ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ ಇದೆ. ತಂದೆಯ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವುದು ಅಗತ್ಯ.
ತುಲಾ ರಾಶಿ:
ಈ ವಾರ ಮಿಶ್ರಫಲಗಳನ್ನು ನೀಡಲಿದೆ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ದೂರದ ಪ್ರಯಾಣದ ಯೋಗವಿದೆ ಆದರೆ ಪ್ರಯಾಣದಲ್ಲಿ ಜಾಗ್ರತೆ ಅಗತ್ಯ. ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಿ.
ವೃಶ್ಚಿಕ ರಾಶಿ:
ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದರೂ, ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ಇದನ್ನೂ ಓದಿ: ಸಿಂಹ ರಾಶಿಗೆ ಶುಕ್ರ ಪ್ರವೇಶ; ಜು.4 ರಿಂದ ಈ ರಾಶಿಗಳ ಜಾತಕದಲ್ಲಿ ಅದೃಷ್ಟದ ಮಳೆ!
ಧನು ರಾಶಿ:
ನಿಮ್ಮ ಲಗ್ನ ಧನುವಿನಲ್ಲಿದೆ. ಶತ್ರುಗಳ ಮೇಲೆ ಜಯ ಸಿಗಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆಯಲಿದೆ.
ಮಕರ ರಾಶಿ:
ವಿದ್ಯಾರ್ಥಿಗಳಿಗೆ ಈ ವಾರ ಅತ್ಯುತ್ತಮವಾಗಿದೆ, ಏಕಾಗ್ರತೆ ಹೆಚ್ಚಲಿದೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ. ಆದರೆ ಆರ್ಥಿಕವಾಗಿ ಸ್ವಲ್ಪ ತೊಂದರೆ ಎದುರಾಗಬಹುದು, ಜೂಜು ಅಥವಾ ರಿಸ್ಕ್ ಇರುವ ಹೂಡಿಕೆಗಳಿಂದ ದೂರವಿರಿ.
ಕುಂಭ ರಾಶಿ:
ರಾಹು ನಿಮ್ಮ ರಾಶಿಯಲ್ಲಿದ್ದಾನೆ. ಮಾನಸಿಕ ಗೊಂದಲಗಳು ಹೆಚ್ಚಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆಸ್ತಿ ಅಥವಾ ವಾಹನ ಖರೀದಿ ಮಾಡುವ ಯೋಗವಿದೆ, ಆದರೆ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ.
ಮೀನ ರಾಶಿ:
ಶನಿ ನಿಮ್ಮ ರಾಶಿಯಲ್ಲಿದ್ದಾನೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಒಡಹುಟ್ಟಿದವರಿಂದ ಸಹಾಯ ದೊರೆಯಲಿದೆ. ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗಲಿದ್ದು, ಅಂದುಕೊಂಡ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುವಿರಿ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




