AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಈ ವಾರ ನಿಮ್ಮ ಪ್ರೀತಿ-ದಾಂಪತ್ಯ ಹೇಗಿರಲಿದೆ? ದ್ವಾದಶ ರಾಶಿಗಳ ಪ್ರೇಮ ಫಲ

ವಾರದ ಪ್ರೇಮ - ಪ್ರೀತಿ: ಜುಲೈ 26ರಿಂದ ಆಗಸ್ಟ್ 1ರ ವಾರದ ಪ್ರೇಮ ಭವಿಷ್ಯ ಇಲ್ಲಿದೆ. ಈ ವಾರ ಗ್ರಹಗತಿಗಳ ಪ್ರಭಾವದಿಂದ ಪ್ರೇಮಿಗಳು ಮತ್ತು ದಂಪತಿಗಳ ಸಂಬಂಧದಲ್ಲಿ ಮನಸ್ತಾಪ, ಪ್ರೀತಿಯ ಕೊರತೆ, ದೂರಪ್ರಯಾಣದ ಯೋಗ, ಅನ್ಯರ ಆಕರ್ಷಣೆ ಅಥವಾ ಸಾಮರಸ್ಯ ಹೆಚ್ಚಾಗಲಿದೆ. ಎಲ್ಲ ರಾಶಿಗಳಿಗೂ ಪ್ರೀತಿ-ದಾಂಪತ್ಯದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ.

Weekly Love Horoscope: ಈ ವಾರ ನಿಮ್ಮ ಪ್ರೀತಿ-ದಾಂಪತ್ಯ ಹೇಗಿರಲಿದೆ? ದ್ವಾದಶ ರಾಶಿಗಳ ಪ್ರೇಮ ಫಲ
ವಾರದ ಪ್ರೇಮ - ಪ್ರೀತಿ ಭವಿಷ್ಯImage Credit source: Getty images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jul 25, 2026 | 10:11 PM

Share

ಜುಲೈ 26ರಿಂದ ಆಗಷ್ಟ್ 01ರ ತನಕದ ಐದನೇ ವಾರವಾಗಿದ್ದು ಮನಸ್ತಾಪ, ಪರಸ್ಪರ ಪ್ರೀತಿಯ ಕೊರತೆ, ದೂರಪ್ರಯಾಣ, ಅನ್ಯರ ಆಕರ್ಷಣೆ, ಮೌನದಿಂದ ಸಮಸ್ಯೆ ದೂರ ಇವೆಲ್ಲ ಈ ವಾರದ ಪ್ರೇಮ ಭವಿಷ್ಯ.

ಮೇಷ ರಾಶಿ: ​ನಿಮ್ಮ ರಾಶಿಗೆ ಸಪ್ತಮಾಧಿಪತಿಯಾದ ಶುಕ್ರನು ಕನ್ಯಾರಾಶಿಯಲ್ಲಿ ನೀಚಸ್ಥಿತಿಯಲ್ಲಿದ್ದಾನೆ. ಇದರಿಂದಾಗಿ ಪ್ರೇಮಿಗಳಲ್ಲಿ ಮತ್ತು ದಂಪತಿಗಳಲ್ಲಿ ಸಣ್ಣ ವಿಷಯಕ್ಕೂ ಮನಸ್ತಾಪಗಳು ಏರ್ಪಡಬಹುದು. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ನಕಾರಾತ್ಮಕ ಚಿಂತನೆಗಳನ್ನು ಬದಿಗೊತ್ತಿ ತಾಳ್ಮೆಯಿಂದ ವರ್ತಿಸಿದರೆ ವಿಚ್ಛೇದನದಂತಹ ಕಠಿಣ ಪರಿಸ್ಥಿತಿಗಳನ್ನು ತಡೆಯಬಹುದು.

ವೃಷಭ ರಾಶಿ: ​ರಾಶ್ಯಾಧಿಪತಿ ಶುಕ್ರನು ಪಂಚಮದಲ್ಲಿ ನೀಚನಾಗಿದ್ದರೂ, ದಶಮದ ಚಂದ್ರ, ರಾಹು ಹಾಗೂ ಸಪ್ತಮದ ಶುಭ ದೃಷ್ಟಿಯಿಂದ ದಾಂಪತ್ಯದಲ್ಲಿ ಮಿಶ್ರಫಲ. ಹಳೆಯ ಭಿನ್ನಾಭಿಪ್ರಾಯಗಳು ತಿಳಿಯಾಗುವ ಲಕ್ಷಣಗಳಿವೆ. ಪ್ರೇಮಿಗಳಿಗೆ ಕೊಂಚ ಗೊಂದಲಮಯ ವಾತಾವರಣವಿರುತ್ತದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯಕ್ಕಾಗಿ ಪರಸ್ಪರ ಗೌರವ ನೀಡುವುದು ಅತ್ಯಗತ್ಯ.

ಮಿಥುನ ರಾಶಿ: ​ಚತುರ್ಥದ ಶುಕ್ರ ಮತ್ತು ಲಗ್ನದ ಬುಧನ ಬಲದಿಂದಾಗಿ ಪ್ರೇಮ ಜೀವನದಲ್ಲಿ ಮಧುರತೆ ಹೆಚ್ಚಲಿದೆ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಬಂಧಗಳು ಕೂಡಿಬರುವ ಕಾಲ. ಈಗಾಗಲೇ ದಾಂಪತ್ಯದಲ್ಲಿ ಬಿರುಕು ಮೂಡಿದ್ದ ಕುಟುಂಬಗಳಲ್ಲಿ ಹಿರಿಯರ ಮಧ್ಯಸ್ಥಿಕೆಯಿಂದ ರಾಜಿ ಸಂಧಾನ ಏರ್ಪಟ್ಟು, ವಿಚ್ಛೇದನದಂಚಿನಲ್ಲಿದ್ದ ಸಂಬಂಧಗಳು ಚೇತರಿಸಿಕೊಳ್ಳಲಿವೆ.

ಕರ್ಕಾಟಕ ರಾಶಿ: ​ನಿಮ್ಮ ರಾಶಿಯಲ್ಲಿ ರವಿ-ಗುರುಗಳ ಸನ್ನಿಧಾನವಿದ್ದು, ಸಪ್ತಮ ಸ್ಥಾನಕ್ಕೆ ಶುಭದೃಷ್ಟಿ ಬೀಳುತ್ತಿದೆ. ದಾಂಪತ್ಯದಲ್ಲಿ ಅನುರಾಗ ಮತ್ತು ಆತ್ಮೀಕತೆ ವೃದ್ಧಿಯಾಗಲಿದೆ. ಪ್ರೇಮಿಗಳ ನಡುವೆ ನಂಬಿಕೆ ಗಟ್ಟಿಯಾಗಲಿದೆ. ದೀರ್ಘಕಾಲದ ದಾಂಪತ್ಯ ಕಲಹಗಳಿಗೆ ಶಾಶ್ವತ ಪರಿಹಾರ ಸಿಗಲಿದ್ದು, ಪ್ರೇಮ ಸಂಬಂಧಗಳು ವಿವಾಹ ಹಂತಕ್ಕೆ ತಲುಪಲು ಕಾಲ ಅನುಕೂಲವಾಗಿದೆ.

ಸಿಂಹ ರಾಶಿ: ​ನಿಮ್ಮ ರಾಶಿಯಲ್ಲಿ ಕೇತುವಿದ್ದು, ಸಪ್ತಮದಲ್ಲಿ ಚಂದ್ರ-ರಾಹು-ಲಗ್ನ ಸ್ಥಿತವಾಗಿವೆ. ಸಪ್ತಮ ಸ್ಥಾನದ ಮೇಲೆ ಪಾಪಗ್ರಹಗಳ ಪ್ರಭಾವವಿರುವುದರಿಂದ ದಾಂಪತ್ಯದಲ್ಲಿ ಅನಗತ್ಯ ಸಂಶಯ ಮತ್ತು ಅಹಂಕಾರದ ಘರ್ಷಣೆಗಳು ಉಂಟಾಗಬಹುದು. ನ್ಯಾಯಾಲಯದಲ್ಲಿರುವ ವಿಚ್ಛೇದನ ಪ್ರಕರಣಗಳಲ್ಲಿ ತೀವ್ರತೆ ಕಂಡುಬರಬಹುದು. ಕೋಪ ನಿಯಂತ್ರಣ ಅತ್ಯಗತ್ಯ.

ಕನ್ಯಾ ರಾಶಿ: ​ನಿಮ್ಮ ರಾಶಿಯಲ್ಲೇ ಶುಕ್ರನು ನೀಚನಾಗಿದ್ದರೂ, ಸಪ್ತಮದ ಶನಿಯ ಪ್ರಭಾವವಿದೆ. ಪ್ರೇಮ ವ್ಯವಹಾರಗಳಲ್ಲಿ ಭ್ರಮನಿರಸನ ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಮಾತುಕತೆ ನಡೆಸುವಾಗ ಜಾಗರೂಕರಾಗಿರಿ. ಮೂರನೇ ವ್ಯಕ್ತಿಯ ಪ್ರವೇಶದಿಂದ ಸಂಸಾರದಲ್ಲಿ ಅಶಾಂತಿ ಉಂಟಾಗದಂತೆ ಎಚ್ಚರವಹಿಸಿ.

ತುಲಾ ರಾಶಿ: ​ರಾಶ್ಯಾಧಿಪತಿ ಶುಕ್ರ ದ್ವಾದಶದಲ್ಲಿದ್ದು, ಸಪ್ತಮದ ಮೇಲೆ ಗುರುವಿನ ಶುಭ ದೃಷ್ಟಿ ಇದೆ. ಪ್ರೇಮಿಗಳಿಗೆ ದೂರದ ಪ್ರಯಾಣ ಹಾಗೂ ಸಂತೋಷದ ಕ್ಷಣಗಳು ಎದುರಾಗಲಿವೆ. ದಾಂಪತ್ಯದಲ್ಲಿದ್ದ ಸಣ್ಣಪುಟ್ಟ ಕಟುಸತ್ಯಗಳು ದೂರವಾಗಿ ಆಕರ್ಷಣೆ ಹೆಚ್ಚಲಿದೆ. ಬಿರುಕು ಬಿಟ್ಟಿದ್ದ ವೈವಾಹಿಕ ಬಾಂಧವ್ಯಗಳು ಮರುಜೀವ ಪಡೆಯಲಿವೆ.

ವೃಶ್ಚಿಕ ರಾಶಿ: ​ಭಾಗ್ಯದ ರವಿ-ಗುರುಗಳ ಬಲದಿಂದ ದಾಂಪತ್ಯ ಜೀವನದಲ್ಲಿ ಮಧುರತೆ ಕಂಗೊಳಿಸಲಿದೆ. ನವದಂಪತಿಗಳಿಗೆ ಶುಭ ವಾರ್ತೆ ಲಭಿಸುವ ಯೋಗವಿದೆ. ಪ್ರೇಮಿಗಳ ನಡುವೆ ಆಳವಾದ ತಿಳುವಳಿಕೆ ಮೂಡಲಿದೆ. ಕಾನೂನುತ್ಮಕ ವಿಚ್ಛೇದನಕ್ಕೆ ಕಾಯುತ್ತಿದ್ದವರಿಗೆ ಸೌಹಾರ್ದಯುತವಾದ ಅಂತಿಮ ತೀರ್ಮಾನ ದೊರೆಯಬಹುದು.

ಧನು ರಾಶಿ: ​ಸಪ್ತಮದಲ್ಲಿ ಬುಧನ ಉಪಸ್ಥಿತಿಯಿಂದಾಗಿ ಪ್ರೇಮ ಪ್ರಸಂಗಗಳಲ್ಲಿ ಯಶಸ್ಸು ಸಿಗಲಿದೆ. ಆದರೆ ಅಷ್ಟಮದ ರವಿ ಮತ್ತು ತೃತೀಯದ ರಾಹು-ಚಂದ್ರರ ಪ್ರಭಾವದಿಂದಾಗಿ ಸಂಗಾತಿಯ ಮನಸ್ಥಿತಿಯಲ್ಲಿ ಏರಿಳಿತ ಕಂಡುಬರಬಹುದು. ಹಳೆಯ ಘಟನೆಗಳನ್ನು ನೆನಪಿಸಿಕೊಂಡು ಜಗಳವಾಡುವುದನ್ನು ತಪ್ಪಿಸಿದರೆ ದಾಂಪತ್ಯವು ಶಾಂತಿಯುತವಾಗಿರುತ್ತದೆ.

ಮಕರ ರಾಶಿ: ​ಸಪ್ತಮದಲ್ಲಿ ಉಚ್ಚ ಗುರುವು ಮೂಢ ಸ್ಥಿತಿಯಲ್ಲಿದ್ದರೂ ಬಲ ಹಾಗೂ ರವಿಯ ಸ್ಥಿತಿಯಿಂದಾಗಿ ದಾಂಪತ್ಯದಲ್ಲಿ ಗೌರವ ಮತ್ತು ಬದ್ಧತೆ ಹೆಚ್ಚಲಿದೆ. ವಿವಾಹ ಬಂಧನಕ್ಕೆ ಕಾಲಿಡಲು ಬಯಸುವವರಿಗೆ ಒಳ್ಳೆಯ ಪ್ರಸ್ತಾವನೆಗಳು ಬರಲಿವೆ. ಪ್ರೇಮಿಗಳಲ್ಲಿ ಇದ್ದ ಅನುಮಾನಗಳು ನಿವಾರಣೆಯಾಗಿ ಪ್ರೀತಿ ಗಾಢವಾಗಲಿದೆ.

ಕುಂಭ ರಾಶಿ: ​ನಿಮ್ಮ ರಾಶಿಯಲ್ಲೇ ಲಗ್ನ, ಚಂದ್ರ, ರಾಹು ಇದ್ದು, ಸಪ್ತಮದಲ್ಲಿ ಕೇತು ಇದೆ. ಈ ಗ್ರಹಗತಿಗಳು ವೈವಾಹಿಕ ಜೀವನದಲ್ಲಿ ತೀವ್ರ ಮನಸ್ತಾಪ ಹಾಗೂ ಮಾನಸಿಕ ಅಭದ್ರತೆಯನ್ನು ತರಬಹುದು. ಪ್ರೇಮ ಸಂಬಂಧಗಳಲ್ಲಿ ಬಿರುಕು ಮೂಡುವ ಸನ್ನಿವೇಶಗಳಿವೆ. ವಿಚ್ಛೇದನದ ನಿರ್ಧಾರಗಳನ್ನು ಈ ವಾರ ಮುಂದೂಡುವುದು ಕ್ಷೇಮ.

ಮೀನ ರಾಶಿ: ​ನಿಮ್ಮ ರಾಶಿಯಲ್ಲಿ ಶನಿ ಹಾಗೂ ಸಪ್ತಮದಲ್ಲಿ ನೀಚ ಶುಕ್ರನ ಪ್ರಭಾವವಿದೆ. ದಾಂಪತ್ಯದಲ್ಲಿ ತಾಳ್ಮೆ ಮತ್ತು ಸಹನೆ ಅತ್ಯಗತ್ಯ. ಚಿಕ್ಕ ವಿಷಯಗಳೂ ದೊಡ್ಡದಾಗಿ ಬೆಳೆದು ಕೌಟುಂಬಿಕ ಅಶಾಂತಿಗೆ ಕಾರಣವಾಗಬಹುದು. ಸಂಗಾತಿಯ ಭಾವನೆಗಳಿಗೆ ಬೆಲೆ ನೀಡಿ, ವಾಗ್ಯುದ್ಧದಿಂದ ದೂರವಿದ್ದರೆ ಸಂಸಾರ ನೌಕೆ ಸುಸೂತ್ರವಾಗಿ ಸಾಗಲಿದೆ.

ಲೋಹಿತ್ ಹೆಬ್ಬಾರ್

Published On - 10:08 pm, Sat, 25 July 26

Follow Us
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ
ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ
ಪ್ರಧಾನ್ ರಾಜೀನಾಮೆ ಕ್ರೆಡಿಟ್ ಬಗ್ಗೆ ಬಿಕೆ ಹರಿಪ್ರಸಾದ್ ಹೇಳಿದ್ದಿಷ್ಟು
ಪ್ರಧಾನ್ ರಾಜೀನಾಮೆ ಕ್ರೆಡಿಟ್ ಬಗ್ಗೆ ಬಿಕೆ ಹರಿಪ್ರಸಾದ್ ಹೇಳಿದ್ದಿಷ್ಟು
ಪ್ರಧಾನ್ ರಾಜೀನಾಮೆ ನೀಡಿದ್ರೂ ಸಿಜೆಪಿಗಿಲ್ಲ ಸಮಾಧಾನ
ಪ್ರಧಾನ್ ರಾಜೀನಾಮೆ ನೀಡಿದ್ರೂ ಸಿಜೆಪಿಗಿಲ್ಲ ಸಮಾಧಾನ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ