AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಎಸ್ ಸುಬ್ಬುಲಕ್ಷ್ಮಿ ಪಾತ್ರಕ್ಕೆ ರಶ್ಮಿಕಾ ಆಯ್ಕೆಗೆ ಟೀಕೆ: ಕಾರಣ?

ಎಂಎಸ್ ಸುಬ್ಬುಲಕ್ಷ್ಮಿ ಅವರ ಜೀವನ ಆಧರಿತ ಸಿನಿಮಾದ ನಿರ್ದೇಶನವನ್ನು ಗೌತಮ್ ತಿನರೂರಿ ಮಾಡಲಿದ್ದಾರೆ. ಗೌತಮ್ ತಿನರೂರಿ ನಿರ್ದೇಶನ ಮಾಡಲಿರುವ ಈ ಸಿನಿಮಾನಲ್ಲಿ ಎಂಎಸ್ ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟನೆ ಮಾಡಲಿದ್ದಾರೆ. ಆದರೆ ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಕೆಲ ಟೀಕೆಗಳು ವ್ಯಕ್ತವಾಗುತ್ತಿವೆ.

ಎಂಎಸ್ ಸುಬ್ಬುಲಕ್ಷ್ಮಿ ಪಾತ್ರಕ್ಕೆ ರಶ್ಮಿಕಾ ಆಯ್ಕೆಗೆ ಟೀಕೆ: ಕಾರಣ?
Rashmika Ms Subbulakshmi
ಮಂಜುನಾಥ ಸಿ.
|

Updated on: Sep 20, 2026 | 5:33 PM

Share

ಮುಖ್ಯಾಂಶಗಳು

  • ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ
  • ಎಂ ಎಸ್ ಸುಬ್ಬುಲಕ್ಷ್ಮಿ ಪಾತ್ರದಲ್ಲಿ ರಶ್ಮಿಕಾ
  • ಎಂ ಎಸ್ ಸುಬ್ಬುಲಕ್ಷ್ಮಿ ಪಾತ್ರದಲ್ಲಿ ರಶ್ಮಿಕಾ ಆಯ್ಕೆಗೆ ಟೀಕೆ

ಭಾರತ ಸಂಗೀತ ಕ್ಷೇತ್ರದ ಲಿಜೆಂಡರಿ ಗಾಯಕಿ, ಭಾರತ ರತ್ನ ಎಂಎಸ್ ಸುಬ್ಬುಲಕ್ಷ್ಮಿ ಅವರ ಜೀವನ ಆಧರಿಸಿದ ಸಿನಿಮಾ ನಿರ್ಮಾಣ ಆಗುತ್ತಿದ್ದು, ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ಕಾರ್ಯಕ್ರಮ ಚೆನ್ನೈನಲ್ಲಿ ಬಲು ಅದ್ಧೂರಿಯಾಗಿ ನೆರವೇರಿತು. ಗೌತಮ್ ತಿನರೂರಿ ನಿರ್ದೇಶನ ಮಾಡಲಿರುವ ಈ ಸಿನಿಮಾನಲ್ಲಿ ಎಂಎಸ್ ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟನೆ ಮಾಡಲಿದ್ದಾರೆ. ಆದರೆ ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಕೆಲ ಟೀಕೆಗಳು ವ್ಯಕ್ತವಾಗುತ್ತಿವೆ.

ಎಂಎಸ್ ಸುಬ್ಬುಲಕ್ಷ್ಮಿ ಅವರು ಭಾರತ ಕಂಡ ಕೆಲವೇ ಕೆಲವು ಅದ್ಭುತ ಗಾಯಕಿಯರಲ್ಲಿ ಒಬ್ಬರು. ಅವರ ಜೀವನ ಅವರ ಗಾಯನದಷ್ಟು ಮಧುರವಾಗಿರಲಿಲ್ಲ, ಸಾಕಷ್ಟು ಏಳು-ಬೀಳುಗಳನ್ನು ಕಂಡವರು ಅವರು. ಅಂಥಹಾ ಮಹಾನ್ ಕಲಾವಿದೆಯ ಪಾತ್ರದಲ್ಲಿ ನಟಿಸುವ ಅವಕಾಶ ರಶ್ಮಿಕಾ ಮಂದಣ್ಣ ಅವರಿಗೆ ದೊರೆತಿದೆ. ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಖುದ್ದು ರಶ್ಮಿಕಾ ಮಂದಣ್ಣ ಈ ಬಗ್ಗೆ ಭಾವುಕವಾಗಿ ಮಾತನಾಡಿದ್ದರು. ಆದರೆ ರಶ್ಮಿಕಾರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿರುವುದಕ್ಕೆ ಕೆಲವರು ತಕರಾರು ತೆಗೆದಿದ್ದಾರೆ.

ತಕರಾರಿಗೆ ಮುಖ್ಯ ಕಾರಣ ರಶ್ಮಿಕಾ ಅವರ ಭಾಷೆ. ಸುಬ್ಬುಲಕ್ಷ್ಮಿ ಅವರು ಅದ್ಭುತವಾದ ಗಾಯಕಿ, ಅವರ ಭಾಷೆ ಬಲು ಸ್ಪಷ್ಟ, ನಿರರ್ಗಳವಾದುದು. ಆದರೆ ರಶ್ಮಿಕಾ ಅವರಿಗೆ ಯಾವುದೇ ಒಂದು ಭಾಷೆಯ ಮೇಲೂ ಸಹ ಸ್ಪಷ್ಟವಾದ ಹಿಡಿತ ಇಲ್ಲ, ಅವರೇ ಖುದ್ದು ಹೇಳಿಕೊಂಡಿರುವಂತೆ ಅವರಿಗೆ ಭಾಷೆಯ ಸಮಸ್ಯೆ ಇದೆ. ಮುಹೂರ್ತ ಕಾರ್ಯಕ್ರಮದಲ್ಲಿಯೂ ಸಹ ಅವರು ತಮಿಳು ಮಾತನಾಡಿದ್ದು ಹಲವರಿಗೆ ಮೂಗು ಮುರಿಯುವಂತಾಗಿತ್ತು. ಅವರ ಭಾಷೆಯಲ್ಲಿ ಸ್ಪಷ್ಟತೆ ಇಲ್ಲದೇ ಇರುವ ಕಾರಣ, ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ಅವರು ನ್ಯಾಯ ಒದಗಿಸಬಲ್ಲರಾ ಎಂಬ ಅನುಮಾನ ಕೆಲವರಿಗೆ ಮೂಡಿದೆ.

ಇದನ್ನೂ ಓದಿ:ಬಾಲಿವುಡ್​​ ಜನಪ್ರಿಯ ಟಾಕ್ ಶೋಗೆ ರಶ್ಮಿಕಾ ಮಂದಣ್ಣ ಅತಿಥಿ: ಯಾವುದದು?

ರಶ್ಮಿಕಾ ಅವರ ನಟನಾ ಪ್ರತಿಭೆಯ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸುಬ್ಬುಲಕ್ಷ್ಮಿ ಅವರ ಜೀವನ ಆಧರಿತ ಪಾತ್ರದಲ್ಲಿ ನಟಿಸಲು ನಟನೆಯಲ್ಲಿ ಪ್ರೌಢಿಮೆ ಉಳ್ಳ ನಟಿ ಬೇಕಿತ್ತು, ರಶ್ಮಿಕಾ ಅವರು ಒಳ್ಳೆಯ ನಟಿಯಾದರೂ, ಅವರ ನಟನೆಯ ಕಮರ್ಶಿಯಲ್ ಸಿನಿಮಾಗಳಿಗೆ ಸೂಕ್ತವಾಗಿದೆ ಆದರೆ ಮಹತ್ತರವಾದ ಪಾತ್ರಕ್ಕೆ ಸೂಕ್ತವಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಂಎಸ್ ಸುಬ್ಬುಲಕ್ಷ್ಮಿ ಅವರ ಜೀವನ ಆಧರಿತ ಸಿನಿಮಾದ ನಿರ್ದೇಶನವನ್ನು ಗೌತಮ್ ತಿನರೂರಿ ಮಾಡಲಿದ್ದಾರೆ. ಸಿನಿಮಾಕ್ಕೆ ಅಲ್ಲು ಅರವಿಂದ್ ಬಂಡವಾಳ ಹೂಡಿದ್ದಾರೆ. ಜೊತೆಗೆ ಕನ್ನಡಿಗ ರಾಕ್​ಲೈನ್ ವೆಂಕಟೇಶ್ ಸಹ ನಿರ್ಮಾಣ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್