AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರು ಗೊತ್ತಿದ್ದರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಲಾರರು..

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯ ಭಾನುವಾರದಂದು ಬೋಧ‌ನೆ, ನಿಧಾನಗತಿ, ಪಿತ್ತದ ಪ್ರಕೋಪ, ಬಂಧನದ ಭೀತಿ, ತಂದೆಯ ಜೊತೆ ಕಲಹ, ಸ್ನೇಹಿತರಿಂದ ದುಃಖ, ಪ್ರಾಯಶ್ಚಿತ್ತ ಇವೆಲ್ಲ ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಗೊತ್ತಿದ್ದರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಲಾರರು..
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Sep 20, 2026 | 12:28 AM

Share

ಮೇಷ ರಾಶಿ:

ಪಾಲುದಾರಿಕೆಯಲ್ಲಿ ಹೊಸ ಉದ್ಯಮವನ್ನು ಆರಂಭಿಸುವಿರಿ. ಕುಟುಂಬವು ನಿಮ್ಮ ಶ್ರೇಯಸ್ಸನ್ನು ಹಾರೈಸಲಿದೆ. ಪಾಲುದಾರಿಕೆಯಲ್ಲಿ ಹಣಕಾಸಿನ ವಿಚಾರವು ವಿವಾದಕ್ಕೆ ಕಾರಣವಾಗಲಿದೆ. ಪ್ರಸಿದ್ಧ ಸಂಸ್ಥೆಗೆ ಸೇರುವ ಕನಸು ದೃಢವಾಗಲಿದೆ. ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳುವ ಹಂಬಲವಿರುವುದು. ನಿಮ್ಮನ್ನು ನೀವು ಪ್ರಕಟಮಾಡಿಕೊಳ್ಳು ತಯಾರಾಗುವಿರಿ. ನಿಮ್ಮ‌ ಮೇಲೆ‌ ಕೆಟ್ಟ ಕಣ್ಣುಗಳು ಬೀಳಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿ.

ವೃಷಭ ರಾಶಿ:

ನಿಮ್ಮ ಇಂದಿನ ಸುತ್ತಾಟ ವ್ಯರ್ಥವಾಗುವುದು. ಅಶುಭ ಸೂಚನೆಗಳನ್ನು ಗಮನಿಸಿಯೂ ಉದ್ಧಟತನದಿಂದ ಮುನ್ನುಗ್ಗುವಿರಿ. ಯಾರಾದರೂ ನಿಮ್ಮನ್ನು ಪೀಡಿಸಬಹುದು. ಆಪ್ತಬಂಧುವನ್ನೊಬ್ಬರನ್ನು ಕಳೆದುಕೊಳ್ಳಲೂಬಹುದು. ಎಲ್ಲರೆದುರು ಮುಖಭಂಗವಾಗಬಹುದು. ವೈವಾಹಿಕ ಜೀವನದ ಕನಸನ್ನು ನೀವು ಕಾಣುವಿರಿ. ನಿಮ್ಮ‌ ಭಾವವನ್ನು ಪ್ರಕಟಗೊಳಿಸಿ. ಅವಶ್ಯಕ ವಸ್ತುಗಳು ಕಣ್ಮರೆಯಾದಾವು. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ.

ಮಿಥುನ ರಾಶಿ:

ನೀವು ಇಂದು ಅಸಾಧ್ಯವೆಂದು ಬಿಟ್ಟ ಕಾರ್ಯಗಳನ್ನು ಪುನಃ ಕೈಗೆತ್ತಿಕೊಳ್ಳುವಿರಿ. ಸಹೋದರನ ಸಹಾಕಾರವು ಸ್ವಲ್ಪಮಟ್ಟಿಗೆ ಅನುಕೂಲವಾಗುವುದು. ನೂತನ ವಾಹನದ‌ ಖರೀದಿಯನ್ನು ಮಾಡುವ ಬಯಕೆಯು ಇಂದು ಪೂರ್ಣಗೊಳ್ಳಬಹುದು. ಹಿತಶತ್ರು ನಿಮ್ಮ‌ ಪತನವನ್ನೇ ನಿರೀಕ್ಷಿಸುತ್ತ ಅದಕ್ಕೆ ಬೇಕಾದುದನ್ನು ಮಾಡುವರು.‌ ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಇಂದು ನೀವು ತಾಳ್ಮೆಯನ್ನು ಅಭ್ಯಾಸದಿಂದ ಗಳಿಸಬೇಕಾಗುವುದು. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ.

ಕರ್ಕಾಟಕ ರಾಶಿ:

ನಿಮ್ಮ ಮನೆಯ ಕೆಲಸವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭವಾಗಲಿದೆ. ಇದು ನಿಮಗೆ ಅನಿರೀಕ್ಷಿತ ಆನಂದವನ್ನು ತರಬಹುದು. ಬಹಳ ದಿನಗಳ ಅನಂತರ ತಂದೆಯ ಜೊತೆ ಮಾತನಾಡಿ ಅವರ್ಣನೀಯ ನೆಮ್ಮದಿಯು ಪಡೆಯುವಿರಿ. ಅಪರಿಚಿತರಿಂದ ನಿಮಗೆ ಗೌರವ ಪ್ರಾಪ್ತವಾಗುವುದು. ಹಿರಿಯರಿಗೆ ಎದುರು ಮಾತನಾಡದೇ ಮೌನವಹಿಸುವಿರಿ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ನಂಬಿಕೆ ದ್ರೋಹವು ನಿಮಗೆ ಕಷ್ಟವಾದೀತು. ನಿಮ್ಮ ಕೋಪಕ್ಕೆ ಒಂದು ಮಿತಿ‌ ಇರಲಿ.

ಸಿಂಹ ರಾಶಿ:

ಇಂದು ನಿಮ್ಮ ನಿಮಗೆ ಹಣವನ್ನು ಉಳಿಸುಕೊಳ್ಳಬೇಕು ಎಂಬ ಇಚ್ಛೆ ಇದ್ದರೂ ಬಂದ ಹಣವು ನಿಲ್ಲದೆ ಖಾಲಿಯಾಬಹುದು. ಬಂಧುಗಳ ಆಗಮನವು ನಿಮ್ಮ ಯೋಜನೆಗೆ ಪೂರಕವಾಗಿ ಇರದು. ಮಕ್ಕಳಿಂದ ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಒಪ್ಪಿಗೆಯನ್ನು ಪಡೆಯುವಿರಿ. ಉದ್ಯೋಗದ ಕೆಲವು ಗೌಪ್ಯ ವಿಚಾರಗಳು ನಿಮಗೆ ಗೊತ್ತಾಗಬಹುದು. ವಿಷಯಾಸಕ್ತಿಯು ಇಂದು ಅಧಿಕವಾಗಿ ಇರಲಿದೆ. ನ್ಯಾಯವಲ್ಲದ ಮಾರ್ಗದಲ್ಲಿ ನಿಮ್ಮ ಯೋಚನೆಯು ಸಾಗಬಹುದು.

ಕನ್ಯಾ ರಾಶಿ:

ನಿಮ್ಮ ಶಿಕ್ಷಣದಿಂದ ಪ್ರತಿಷ್ಠಿತ ಕಂಪೆನಿಯ ಉದ್ಯೋಗವನ್ನು ಪಡೆಯುವಿರಿ. ನೀವು ಅಂದುಕೊಂಡಿದ್ದು ಆಗುತ್ತಿದ್ದರೂ ಮಾನಸಿಕ ಕಿರಿಕಿರಿ ಅಧಿಕವಾಗುವುದು. ನಿಮಗೆ ಕೊಟ್ಟ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಕಷ್ಟ. ಮಕ್ಕಳ ಕಾರಣದಿಂದ‌ ನಿಮಗೆ ಕೆಟ್ಟ ಹೆಸರು ಬರಬಹುದು. ನಿಮ್ಮವರಿಗೆ ನಿಮ್ಮ ಸರಿಯಾದ ಪರಿಚಯ ಆಗಿಲ್ಲವೆನಿಸುವುದು. ತಂದೆಗೆ ನಿಮ್ಮ ಕಡೆಯಿಂದ ಧನಸಹಾಯ ಸಿಗುವುದು. ವ್ಯಾಪರವು ಒಂದೇ ಹದದಲ್ಲಿ ಹೋಗುವುದು.

ತುಲಾ ರಾಶಿ:

ನೀವು ಬಹಳ ನಾಜೂಕಿನಿಂದ ಕೆಲಸ ಮಾಡಿಕೊಂಡು ಎಲ್ಲಿಯೂ ಸಿಕ್ಕಿಹಾಕಿಕೊಳ್ಳಲಾರಿರಿ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಬಹುದು. ನಿಮ್ಮ ಗಮನವು ಅವರ ಮೇಲಿರಲಿ. ಆಸ್ತಿಯನ್ನು ಪಡೆಯಲು ಎದುರಾಳಿಗಳ ಬಲ ಹೆಚ್ಚಾಗುವುದು. ಬಳಸಿದ ವಸ್ತುಗಳನ್ನು ಮತ್ತೆ ಮತ್ತೆ ಬಳಸುವ ಉತ್ಸಾಹ ತೋರಿಸುವುದಿಲ್ಲ. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಹೆಚ್ಚು ಆಸಕ್ತಿಯು ಹೆಚ್ಚಾಗಿ ಅಭ್ಯಾಸವನ್ನು ನಿಲ್ಲಿಸುವಿರಿ. ನಿಷ್ಠುರ ಮಾತುಗಳನ್ನು ಆಡಿ ಸಂಬಂಧವನ್ನು ಕಳೆದುಕೊಳ್ಳುವಿರಿ.

ವೃಶ್ಚಿಕ ರಾಶಿ:

ಇಂದಿನ ನಿಮ್ಮ‌ ಶ್ರಮವು ಫಲಿಸಿ, ಉತ್ಸಾಹವನ್ನೂ ಹೆಚ್ಚಿಸುವುದು. ಮಾನಸಿಕ ಬದಲಾವಣೆಯನ್ನು ಸರಿಯಾಗಿ ಬಿಂಬಿಸಿಕೊಳ್ಳುವಿರಿ. ನಿಮ್ಮ ಅಪೇಕ್ಷೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಎಂದಿನ‌ ಕೆಲಸದಲ್ಲಿ ಪ್ರವೃತ್ತರಾಗುವಿರಿ. ಆಸ್ತಿಯ ಖರೀದಿಯಲ್ಲಿ ತಂದೆಯ ಕಡೆಯಿಂದ ನಿಮಗೆ ಸಿಂಹಪಾಲು ಸಿಗಲಿದೆ. ಧೈರ್ಯವನ್ನು ಕಳೆದುಕೊಂಡರೆ ಗೆಲ್ಲುವುದನ್ನೂ ಸೋಲಬೇಕಾಗುತ್ತದೆ. ನಿಮಗೆ ಬರಬೇಕಾದ ಹಣವನ್ನು ಬಲವಂತವಾಗಿ ಪಡೆದುಕೊಳ್ಳುವಿರಿ. ನಿಮಗೆ ಸರಿಯಾದ ನಿರ್ಧಾರಕ್ಕೆ ಬರಲು ಕಷ್ಟವಾದೀತು.

ಧನು ರಾಶಿ:

ನೀವು ಅಂದುಕೊಂಡಿದ್ದನ್ನು ಸಾಧಿಸಿಕೊಂಡು ನೆಮ್ಮದಿಯಿಂದ ನಿದ್ರಿಸುವಿರಿ. ಮಹಿಳೆಯರು ತಾಯಿಯಿಂದ ಲಾಭವನ್ನು ನಿರೀಕ್ಷಿಸುವರು. ಏನನ್ನಾದರೂ ಮಾಡಬೇಕು ಎಂಬ ನಿಮ್ಮ ಹಂಬಲ ಅತಿಯಾಗಿರುವುದು. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸುವಿರಿ. ಮಾತು ಕೊಟ್ಟಿದ್ದನ್ನು ಸ್ನೇಹಿತರು ನೆರವೇರಿಸಲಾರರು. ವೃತ್ತಿಯನ್ನು ಬಹಳ ಹಗುರಾಗಿ ಭಾವಿಸಿ ಕೆಲಸವನ್ನು ಮಾಡುವಿರಿ. ಅಧಿಕಾರಿಗಳಿಂದ ನಿಮಗೆ ಸರಿಯಾದ ಮಾಹಿತಿ ಲಭ್ಯವಾಗದು.

ಇದನ್ನೂ ಓದಿ: ರವಿ ಸಿಂಹ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

ಮಕರ ರಾಶಿ:

ಇನ್ನೊಬ್ಬರಿಗೆ ಮಾಡುವ ಸಹಾಯದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮವರ ಪ್ರೀತಿಯಲ್ಲಿ‌ ನೀವು ಮನಸೋಲುವಿರಿ. ನಿಮ್ಮ ಕೆಲಸವು ಶಿಸ್ತಿನದ್ದಾಗಿದ್ದು ಪ್ರಶಂಸೆಯೂ ಸಿಗಲಿದೆ. ನೀವು ಎಲ್ಲರ‌ ನಡುವೆ ಅಂತರವನ್ನು ಕಾಯ್ದುಕೊಂಡು ವ್ಯವಹಾರವನ್ನು ನಡೆಸುವಿರಿ. ವಿದ್ಯಾಭ್ಯಾಸದ ತೊಂದರೆಯನ್ನು ಇನ್ನೊಬ್ಬರ ಮೂಲಕ ಸರಿಮಾಡಿಕೊಳ್ಳುವಿರಿ. ಕಾರ್ಯದ ಸ್ಥಳವನ್ನು ಒತ್ತಡದಿಂದ ಮುಕ್ತಮಾಡಿಕೊಳ್ಳಿ.

ಕುಂಭ ರಾಶಿ:

ನೀವು ಕೆಲವು ಸಮಸ್ಯೆಗಳು ಇದ್ದರೂ ಅದನ್ನು ಬದಿಗೊತ್ತಿ ಏನೂ ಇಲ್ಲದವರ ತೋರುವಿರಿ. ಹೊಸ ವಿಚಾರವನ್ನು ಹುಡುಕುವುದು ನಿಮಗೆ ಪ್ರಿಯವಾದುದಾಗಿದೆ. ನೇರ ಮಾತುಗಳು ನಿಮಗೆ ಸಹಿಸಲು ಅಶಕ್ಯವಾದ ನೋವನ್ನು ಕೊಡಲಿದೆ. ನಿಮ್ಮ ದೌರ್ಬಲ್ಯಗಳನ್ನು ನೀವು ಮೀರುವುದು ಅಸಾಧ್ಯವಾಗಲಿದೆ. ಅಧಿಕ ಒತ್ತಡವನ್ನು ಇಂದು ನೀವು ಮಾಡಿಕೊಳ್ಳಲಾರಿರಿ. ಸ್ವತಂತ್ರ ನಿರ್ಧಾರವು ನಿಮಗೆ ಭಯ ಹುಟ್ಟಿಸೀತು. ಯಂತ್ರೋಪಕರಣಗಳು ದುರಸ್ತಿಗೆ ಬರಬಹುದು.

ಮೀನ ರಾಶಿ:

ಆದಾಯಕ್ಕಿಂತ ಅಧಿಕವಾದ ಖರ್ಚನ್ನು ನೀವು ತೋರಿಸುವಿರಿ. ನಿಮ್ಮ‌ ಪರೀಕ್ಷೆಯ ಕಾಲವು ಇದಾಗಿದ್ದು ಎಚ್ಚರಿಕೆಯಿಂದ ಮಾತನಾಡಿ. ಗುರುಹಿರಿಯರಲ್ಲಿ ಶ್ರದ್ಧೆ, ಗೌರವದ ಅಗತ್ಯವಿದೆ. ನೇರ ನುಡಿಯಿಂದ ಶತ್ರುಗಳು ಹುಟ್ಟಿಕೊಂಡಾರು. ಸಮಯಸ್ಫೂರ್ತಿಯಿಂದ ಕೆಲಸವನ್ನು ಮಾಡುವಿರಿ. ದುರಭ್ಯಾಸದಿಂದ ನಿಮಗೆ ತೊಂದರೆಗಳು ಕಾಣಿಸಿಕೊಳ್ಳುವುದು. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ದಶಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಸೌಭಾಗ್ಯ, ಕರಣ : ಕೌಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 16 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:45 – 18:16, ಯಮಗಂಡ ಕಾಲ 12:13 – 13:44, ಗುಳಿಕ ಕಾಲ 15:15- 16:45

– ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ​

Published On - 12:27 am, Sun, 20 September 26

Follow Us
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!