AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರು ಹಳೆಯ ಹೂಡಿಕೆಯಿಂದ ಲಾಭ ಪಡೆಯುವರು

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ನವಮೀ ತಿಥಿಯ ಶನಿವಾರದಂದು ಭಗ್ನಪ್ರೇಮದಿಂದ‌ ಸಿಟ್ಟು, ಸಂತಾನಕ್ಕೆ ಚಿಂತನೆ, ಸಂಧಾನ ವಿಫಲ, ದೈವಭಕ್ತಿಯಿಂದ ಕಾರ್ಯ, ಮನಃಶಾಂತಿಗೆ ಧಕ್ಕೆ ಇವೆಲ್ಲ ಇಂದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಹಳೆಯ ಹೂಡಿಕೆಯಿಂದ ಲಾಭ ಪಡೆಯುವರು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Sep 19, 2026 | 12:28 AM

Share

ಮೇಷ ರಾಶಿ:

ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣ ಅತ್ಯವಶ್ಯಕ. ಅಮೂಲ್ಯ ವಸ್ತುವು ಕಳ್ಳತನ ಆಗುವ ಭಯವು ಕಾಡಲಿದೆ. ಇನ್ನೊಬ್ಬರ ಬಳಿ‌ ಇರುವ ನಿಮ್ಮ‌ ವಸ್ತುವನ್ನು ನೀವು ಪಡೆದುಕೊಳ್ಳುವಿರಿ. ಅಧಿಕ ವೆಚ್ಚವನ್ನು ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ನಿಮ್ಮ ಬಂಧುಗಳ ಸಹಕಾರದಿಂದ ನಿಮ್ಮ ಸಾಲಬಾಧೆಯು ಪರಿಹಾರವಾಗಲಿದೆ. ನಿಮ್ಮ ಬಗ್ಗೆ ಕೆಲವು ಊಹಾಪೋಹಗಳು ಹರಡುವುವು. ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ.

ವೃಷಭ ರಾಶಿ:

ಇಂದಿನ ನಿಮ್ಮ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ. ನಿಮ್ಮ ವ್ಯವಹಾರದಲ್ಲಿ ನಿಮಗೆ ವಂಚನೆಯಾಗಲಿದೆ. ಪ್ರೇಮಪಾಶದಿಂದ ನಿಮಗೆ ತಪ್ಪಿಸಿಕೊಳ್ಳುವುದು ಕಷ್ಟ. ನಿಮ್ಮ ಕಳುವಾದ ವಸ್ತುವು ಸಿಗಲಿದೆ. ರಾಜಕೀಯದಿಂದ ಪ್ರೇರಿತವಾದ ಮಾತುಗಳು ನಿಮಗೆ ಶೋಭೆಯನ್ನು ತರದು. ಆಸಕ್ತಿ ಇಲ್ಲದೇ ಇದ್ದರೂ ಕೆಲವು ಕೆಲಸಗಳನ್ನು ಮಾಡಲೇಬೇಕಾದೀತು. ಚರಸ್ವತ್ತಿನಲ್ಲಿ ಒಂದಿಲ್ಲೊಂದು ನಷ್ಟಗಳು ಆಗುವುದು. ವಿದ್ಯಾರ್ಥಿಗಳು ಓದಿನತ್ತ ಗಮನಕೊಡುವುದು ಒಳ್ಳೆಯದು. ಕೃತಜ್ಞತೆ ಇರಲಿ.

ಮಿಥುನ ರಾಶಿ:

ಆರ್ಥಿಕ ಲಾಭದಿಂದ ನೀವು ಸಂತೋಷವಾಗಿ ಇರಲಿದ್ದು ನಿಮ್ಮ ಮುಖದಲ್ಲಿ ನೆಮ್ಮದಿಯು ಕಾಣಲಿದೆ. ವಾಹನವನ್ನು ಖರೀದಿಸುವ ಮೊದಲು ಆಪ್ತರ ಸಲಹೆಯನ್ನು ಪಡೆಯಿರಿ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳಿ. ಮಹತ್ಕಾರ್ಯಕ್ಕೆ ನಿಮ್ಮದೊಂದು ಸಣ್ಣ ಕೊಡುಗೆ ಇರಲಿದೆ. ನಿಮಗೆ ಕೊಟ್ಟ ಜವಾಬ್ದಾರಿಯಿಂದ ನೀವು ಹಿಮ್ಮುಖರಾಗುವಿರಿ.

ಕರ್ಕಾಟಕ ರಾಶಿ:

ಯಾರ ಜೊತೆಗೂ ವಿವಾದಕ್ಕೆ ಸಿಲುಕುವುದು ಬೇಡ. ಯಂತ್ರೋಪಕರಣವನ್ನು ಬಳಸಿಕೊಂಡು ಹೊಸ ಉದ್ಯೋಗವನ್ನು ನೀವು ಆರಂಭಿಸಲಿದ್ದೀರಿ. ಯಾರೂ ನಿಮಗೆ ಸುಮ್ಮನೇ ಸಹಾಯ ಮಾಡಲಾರರು. ವಿದೇಶದಲ್ಲಿ ಇರುವವರಿಗೆ ಸಂಕಟವಾಗಬಹುದು. ಕಾನೂನನ್ನು ತಿಳಿಯದೇ ಏನನ್ನಾದರೂ ಹೇಳುವುದು ಬೇಡ. ಪೂರ್ವಯೋಜಿತ ಕಾರ್ಯಕ್ಕೆ ನೀವು ಸಮಯವನ್ನು ಹೊಂದಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಬೇಕು.

ಸಿಂಹ ರಾಶಿ:

ನಂಬಿಕೆ ಇದ್ದವರು ಇರುತ್ತಾರೆ.‌ ಇಂದು ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. ಮೇಲಧಿಕಾರಿಗಳ ಕಿರುಕುಳವು ನಿಮಗೆ ಬಹಳ ಕಷ್ಟವಾದೀತು. ಉದ್ಯೋಗವನ್ನು ಬದಲಿಸಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸ್ವಾರ್ಥವನ್ನು ಬಿಡಲು ನಿಮಗೆ ಇಂದು ಸುಸಂದರ್ಭ. ಬೇಗ ಮುಗಿಯಬಹುದಾದ ಕೆಲಸವನ್ನು ಮೊದಲು ಮಾಡಿ ಮುಗಿಸಿ. ಸಹೋದರನ ಆರೋಗ್ಯವು ನಿಮ್ಮನ್ನು ಕುಗ್ಗಿಸಬಹುದು.

ಕನ್ಯಾ ರಾಶಿ:

ಭೂಮಿಯನ್ನು ಖರೀದಿಸುವ ಯೋಗವು ಬಂದಿದ್ದರೂ ಹಣವನ್ನು ಸೇರಿಸಲು ಕಷ್ಟವಾದೀತು. ದುಬಾರಿ ವಸ್ತುಗಳನ್ನು ಖರೀದಿಸಬೇಕಾದರೂ ಅದನ್ನು ಮುಂದೂಡುವಿರಿ. ನಿಮ್ಮ ಸಮಯಪಾಲನೆಗೆ ಅಧಿಕಾರಿಗಳಿಂದ ಪ್ರಶಂಸೆಯು ಸಿಕ್ಕೀತು. ನೀವು ನಿಮ್ಮದೇ ಆದ ಚೌಕಟ್ಟನ್ನು ಸಿದ್ಧಮಾಡಿಕೊಳ್ಳುವಿರಿ. ಸ್ನೇಹಿತರ ಜೊತೆ ಸುತ್ತಾಟ ಮಾಡುವಿರಿ. ಅನಿರೀಕ್ಷಿತ ಆರ್ಥಿಕ ನೆರವು ನಿಮಗೆ ಆಗಲಿದೆ. ಯಾವ ಕಾರ್ಯಕ್ಕೂ ಸಹಾಯ ಸಿಗದೇ ಕಷ್ಟವಾದೀತು. ಹೊಂದಾಣಿಕೆಯನ್ನು ಸುಲಭದಲ್ಲಿ ಮಾಡಿಕೊಳ್ಳುವಿರಿ.

ತುಲಾ ರಾಶಿ:

ಇಂದಿನ ಕಾರ್ಯದ ಗುರಿಯನ್ನು ನೀವು ಸಹೋದ್ಯೋಗಿಗಳ ಸಹಕಾರದಿಂದ ಮಾಡುವಿರಿ. ನಿಮಗೆ ನಿರೀಕ್ಷಿತ ಉದ್ಯೋಗವು ಸಿಗಲಿದ್ದು ಮನೆಯಲ್ಲಿ ಚರ್ಚೆಗಳು ನಡೆಯಬಹುದು. ನಿಮ್ಮ ದಿವಸದ ವ್ಯವಸ್ಥೆಯನ್ನು ಸರಿಮಾಡಿಕೊಳ್ಳಿ. ಇನ್ನೊಬ್ಬರ ಮಾತಿನಿಂದ ಯಾರನ್ನೂ ಅಳೆಯುವುದು ಬೇಡ. ಕೆಲವರ ಮಾತಿನಿಂದ ಮನಸ್ಸಿಗೆ ಕಷ್ಟವಾಗುವುದು. ಸಂಗಾತಿಯು ನಿಮ್ಮನ್ನು ಸಮಾಧಾನ ಮಾಡಬಹುದು. ಅಪರಿಚಿತ ಕರೆಗಳಿಗೆ ಸೊಪ್ಪು ಹಾಕಬೇಡಿ.

ವೃಶ್ಚಿಕ ರಾಶಿ

ನೀವು ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮೊಳಗೆ ಧನಾತ್ಮಕತೆ ತುಂಬುವುದು. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗಲಿದೆ. ಇದು ನಿಮ್ಮ ಇಂದಿನ ಖುಷಿಯ ಸಂಗತಿಯೂ ಹೌದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಿ. ನಿಂತ ಕಾರ್ಯವನ್ನು ಬಂಧುಗಳ ಸಹಕಾರದಿಂದ ಮುನ್ನಡೆಸುವಿರಿ. ನಿಮ್ಮಿಂದ ಆಗದ ಕೆಲಸವನ್ನು ಮತ್ತೊಬ್ಬರು ಮಾಡಿ ಮುಗಿಸುವರು. ನಿಮ್ಮ ಹೆಚ್ಚಿನವರ ಭೇಟಿಯಾಗುವುದು. ಸಣ್ಣ ಉದ್ಯಮಿಗಳು ಬಂದ ಕೆಲಸವನ್ನು ಬಿಡದೇ ಮಾಡಿಕೊಡುವುದು ಉತ್ತಮ.

ಧನು ರಾಶಿ:

ನಿಮ್ಮ ಶ್ರಮಕ್ಕೆ ಯೋಗ್ಯ ಆದಾಯವು ಇಲ್ಲ ಎನಿಸಬಹುದು. ಕುಟುಂಬವನ್ನು ಇಷ್ಟಪಡುವಿರಿ. ಕಾನೂನಿಗೆ ವಿರುದ್ಧ ಕಾರ್ಯಗಳಿಂದ ಸಂಕಟವಾಗಲಿದೆ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗಬಹುದು. ಸಣ್ಣ ವಸ್ತುವನ್ನು ಕದ್ದು ದೊಡ್ಡ ನಿಂದನೆ ಪಡೆಯುವಿರಿ. ನಿಮ್ಮನ್ನು ಸಂಗಾತಿಯು ದೂರಬಹುದು. ಒತ್ತಡಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದೆ. ನಿಮ್ಮ ತಿಳುವಳಿಕೆಯ ಬಗ್ಗೆ ಅಹಂಕಾರ ಬೇಡ.

ಮಕರ ರಾಶಿ:

ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮಾಡುವಿರಿ. ದುರಭ್ಯಾಸವನ್ನು ನೀವು ರೂಢಿಸಿಕೊಂಡಿರುವುದು ಅರಿವಿಗೆ ಬರಲಿದೆ. ಸಾರ್ವಜನಿಕವಾಗಿ ನಿಮ್ಮೊಳಗೆ ಅಳುಕು ಇರಲಿದ್ದು ಅದನ್ನು ಬಿಟ್ಟು ಮುನ್ನಡೆಯಬೇಕು. ಸಾಮಾಜಿಕ ಕಾರ್ಯಕ್ಕೆ ನಿಮಗೆ ಬೆಂಬಲವು ಸಿಗಲಿದೆ. ಸ್ನೇಹಿತರಿಂದ ನಿಮಗೆ ಉಡುಗೊರೆ ಸಿಗಲಿದೆ. ಖುಷಿಯಾಗಿರಲು ನಿಮಗೆ ಅನೇಕ ಕಾರಣಗಳು ಸಿಗಲಿದೆ. ನಿಮ್ಮನ್ನು ಮಾತಿನ ಕಾರಕ್ಕೆ ಇಷ್ಟಪಡುವವರ ಸಂಖ್ಯೆ ಹೆಚ್ಚಾಗಲಿದೆ. ಕುಟುಂಬದ ಜೊತೆ ಇದ್ದರೂ ಅಲ್ಲಿಂದ ದೂರವಿರಲು ಪ್ರಯತ್ನಿಸುವಿರಿ.

ಕುಂಭ ರಾಶಿ:

ಕಣ್ಣಿಗೆ ಕಾಣಿಸಿದ್ದನ್ನೂ ನೀವು ನಂಬಲಾರಿರಿ. ವಿದೇಶದವರ ಸ್ನೇಹವು ಉಂಟಾಗಬಹುದು. ಸ್ನೇಹಿತರಿಂದ ಹಣಕಾಸಿನ ಸಹಾಯವನ್ನು ಬಯಸುವಿರಿ. ಹೊಸ ರೀತಿಯ ಆಲೋಚನೆಯಲ್ಲಿ ಮಾನಸಿಕ ಹಿತವು ಸಿಗಲಿದೆ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಶ್ಲಾಘನೀಯವಾಗಲಿದೆ. ಮನೆಯಿಂದ ಹೊರಗೆ ಭೋಜನವನ್ನು ಮಾಡುವಿರಿ. ಇಂದು ವೃತ್ತಿಯಲ್ಲಿ ಕೆಲಸ ಮಾಡುವ ಹುಮ್ಮಸ್ಸು ಇರದು. ಎಲ್ಲರ ಮೇಲೂ ವಿನಾ ಕಾರಣ ಕೋಪ‌ ಮಾಡಿಕೊಳ್ಳುವಿರಿ.

ಮೀನ ರಾಶಿ:

ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ. ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯನ್ನು ಮಾಡುವಿರಿ. ಅಪ್ರಧಾನವಾದ ವಿಚಾರವು ನಿಮನ್ನು ಕಾಡಬಹುದು. ದೇಹದಲ್ಲಿ ಕೆಲವು ಕೆಲಸಗಳನ್ನು ಬಿಡುವಿರಿ. ಎಲ್ಲದಕ್ಕೂ ಇನ್ನೊಬ್ಬರನ್ನು ಹೊಣೆ‌ಮಾಡಿ ಸುಮ್ಮನಾಗುವಿರಿ. ನಾಯಕತ್ವವನ್ನು ನೀವು ನಿರಾಕರಿಸಬಹುದು. ಸಂಗಾತಿಯಿಂದ ನಿಮಗೆ ನಕಾರಾತ್ಮಕ ಆಲೋಚನೆ ಬರುವುದು. ಮೌನವಾಗಿದ್ದು ನಿಮ್ಮ ಕಾರ್ಯವನ್ನು ಸಾಧಿಸುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ಮೂಲಾ, ಯೋಗ : ಆಯುಷ್ಮಾನ್, ಕರಣ : ಬವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 16 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:12 – 10:42, ಯಮಗಂಡ ಕಾಲ 13:44 – 15:15, ಗುಳಿಕ ಕಾಲ 06:10 – 07:41

– ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ
ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ