AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಡಲ ನಿಯಮಗಳ ಉಲ್ಲಂಘನೆ’; ಸಮುದ್ರದಲ್ಲಿ ಯುದ್ಧನೌಕೆಯ ಡಿಕ್ಕಿಗೆ ಪಾಕಿಸ್ತಾನಕ್ಕೆ ಭಾರತ ತರಾಟೆ

ಅರೇಬಿಯನ್ ಸಮುದ್ರದಲ್ಲಿ ಇತ್ತೀಚೆಗೆ ಭಾರತೀಯ ನೌಕಾಪಡೆಯ ಯುದ್ಧನೌಕೆ ಮತ್ತು ಪಾಕಿಸ್ತಾನಿ ನೌಕೆಯ ನಡುವೆ ಸಂಭವಿಸಿದ ಢಿಕ್ಕಿ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಆರೋಪಗಳನ್ನು ಭಾರತ ಇಂದು ತೀವ್ರವಾಗಿ ಖಂಡಿಸಿದೆ. ಬುಧವಾರವೇ ಭಾರತದ ವಿದೇಶಾಂಗ ಸಚಿವಾಲಯವು ನವದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಪ್ರಭಾರಿ ಅವರನ್ನು ಕರೆಸಿ ತೀವ್ರ ಪ್ರತಿಭಟನೆ ದಾಖಲಿಸಿತ್ತು. ಇಂದು ಮಾಧ್ಯಮ ಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪಾಕಿಸ್ತಾನದ ಸುಳ್ಳು ಆರೋಪಗಳನ್ನು ತಳ್ಳಿಹಾಕಿದ್ದಾರೆ.

'ಕಡಲ ನಿಯಮಗಳ ಉಲ್ಲಂಘನೆ'; ಸಮುದ್ರದಲ್ಲಿ ಯುದ್ಧನೌಕೆಯ ಡಿಕ್ಕಿಗೆ ಪಾಕಿಸ್ತಾನಕ್ಕೆ ಭಾರತ ತರಾಟೆ
ರಣಧೀರ್ ಜೈಸ್ವಾಲ್ Image Credit source: PTI
ಸುಷ್ಮಾ ಚಕ್ರೆ
|

Updated on: Sep 18, 2026 | 10:41 PM

Share

ನವದೆಹಲಿ, ಸೆಪ್ಟೆಂಬರ್ 18: ಅಂತಾರಾಷ್ಟ್ರೀಯ ಜಲ ಗಡಿಯಲ್ಲಿ ಸಂಭವಿಸಿದ ಹಡಗುಗಳ ಡಿಕ್ಕಿಯ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಬೇಜವಾಬ್ದಾರಿ ನಡವಳಿಕೆ ಹಾಗೂ ಸುಳ್ಳು ಆರೋಪಗಳ ವಿರುದ್ಧ ಭಾರತೀಯ ನೌಕಾಪಡೆ ಮತ್ತು ವಿದೇಶಾಂಗ ಸಚಿವಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಪಾಕಿಸ್ತಾನ ನೌಕಾಪಡೆಯ ಯುದ್ಧನೌಕೆ ‘ಪಿಎನ್‌ಎಸ್ ಹುನೈನ್’ ಅಂತಾರಾಷ್ಟ್ರೀಯ ಸಮುದ್ರಯಾನ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ಭಾರತೀಯ ನೌಕಾಪಡೆಯ ಹಡಗಿಗೆ ಅಪಾಯಕಾರಿ ರೀತಿಯಲ್ಲಿ ತಡೆಯೊಡ್ಡಲು ಯತ್ನಿಸಿದೆ ಎಂದು ಭಾರತ ಖಂಡಿಸಿದೆ.

ಭಾರತೀಯ ನೌಕಾಪಡೆಯ ಯುದ್ಧನೌಕೆಯು ತನ್ನ ನಿಯಮಿತ ಗಸ್ತು ತಿರುಗುವಿಕೆ ನಡೆಸುತ್ತಿದ್ದಾಗ, ಪಾಕಿಸ್ತಾನದ ‘ಪಿಎನ್‌ಎಸ್ ಹುನೈನ್’ ನೌಕೆಯು ಇದ್ದಕ್ಕಿದ್ದಂತೆ ನೌಕಾಯಾನ ನಿಯಮಗಳನ್ನು ಗಾಳಿಗೆ ತೂರಿ ಅತ್ಯಂತ ಹತ್ತಿರಕ್ಕೆ ಬಂದು ಅಪಾಯಕಾರಿ ರೀತಿಯಲ್ಲಿ ದಿಕ್ಕು ಬದಲಾಯಿಸಿತು. ಇದರಿಂದಾಗಿ ಸಣ್ಣ ಪ್ರಮಾಣದ ಢಿಕ್ಕಿ ಸಂಭವಿಸಿತು. ‘ಪಿಎನ್‌ಎಸ್ ಹುನೈನ್’ ಸುರಕ್ಷಿತ ಅಂತರ ಕಾಯ್ದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಪಾಕಿಸ್ತಾನಿ ನೌಕೆಯ ಈ ಬೇಜವಾಬ್ದಾರಿ ತಂತ್ರಗಳು ಕಡಲ ಭದ್ರತೆಗೆ ಭಾರಿ ಬೆದರಿಕೆಯಾಗಿವೆ ಎಂದು ಭಾರತ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕೆಗೆ ಢಿಕ್ಕಿ ಹೊಡೆದ ಪಾಕಿಸ್ತಾನ ಹಡಗು

“ನಾವು ಸಲ್ಲಿಸಿದ ಪ್ರತಿಭಟನಾ ಪತ್ರಕ್ಕೆ ಪಾಕಿಸ್ತಾನ ನೀಡಿದ ಉತ್ತರವನ್ನು ನಾವು ಗಮನಿಸಿದ್ದೇವೆ. ಇದು ನಾವು ನಿರೀಕ್ಷಿಸಿದ ರೀತಿಯಲ್ಲೇ ಸಮಜಾಯಿಷಿ ಮತ್ತು ಸತ್ಯ ಮರೆಮಾಚುವ ಯತ್ನ ಮಾಡಲಾಗಿದೆ. ಅದರಲ್ಲಿರುವ ಎಲ್ಲಾ ಆರೋಪಗಳನ್ನು ಮತ್ತು ಅಪಪ್ರಚಾರಗಳನ್ನು ನಾವು ಖಡಾಖಂಡಿತವಾಗಿ ತಳ್ಳಿಹಾಕುತ್ತೇವೆ” ಎಂದು ಜೈಸ್ವಾಲ್ ಹೇಳಿದ್ದಾರೆ.

“ಪಾಕಿಸ್ತಾನದ ಹುನೈನ್ ನೌಕೆಯು ಭಾರತೀಯ ನೌಕೆಯನ್ನು ಅಪಾಯಕಾರಿಯಾಗಿ ಓವರ್‌ಟೇಕ್ ಮಾಡಲು ಯತ್ನಿಸಿದ್ದು, ಏಪ್ರಿಲ್ 1991ರ ಭಾರತ-ಪಾಕಿಸ್ತಾನ ಸೈನಿಕ ಸಮರಾಭ್ಯಾಸ ಮತ್ತು ನೌಕಾ ಸಂಚಾರ ಒಪ್ಪಂದದ ಆರ್ಟಿಕಲ್ 10 ಅನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಈ ನಿಯಮದ ಪ್ರಕಾರ ಉಭಯ ದೇಶಗಳ ಯುದ್ಧನೌಕೆಗಳು ಸಮುದ್ರದಲ್ಲಿ ಕನಿಷ್ಠ 3 ನಾಟಿಕಲ್ ಮೈಲಿ ಅಂತರ ಕಾಯ್ದುಕೊಳ್ಳಬೇಕು. ಇದರ ಜೊತೆಗೆ ಅಂತಾರಾಷ್ಟ್ರೀಯ ಸಮುದ್ರ ಅಪಘಾತ ತಡೆ ನಿಯಮಗಳನ್ನು ಪಾಕಿಸ್ತಾನ ಉಲ್ಲಂಘಿಸಿದೆ” ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ‘ಪಾಕಿಸ್ತಾನದ ಕಣ್ಣೊರೆಸುವ ತಂತ್ರ’; ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ ಹೆಚ್ಚಳಕ್ಕೆ ಭಾರತ ತರಾಟೆ

ಇಂತಹ ಅಪಾಯಕಾರಿ ಘಟನೆಗಳು ಮರುಕಳಿಸದಂತೆ ತಡೆಯಲು ಪಾಕಿಸ್ತಾನವು ಎರಡೂ ದೇಶಗಳ ನಡುವಿನ ಒಪ್ಪಂದಗಳು ಮತ್ತು ಅಂತರರಾಷ್ಟ್ರೀಯ ನಿಯಮಗಳನ್ನು ಗೌರವಿಸಬೇಕು ಹಾಗೂ ಅಗತ್ಯ ಎಚ್ಚರಿಕೆ ವಹಿಸಬೇಕು ಎಂದು ಇಸ್ಲಾಮಾಬಾದ್‌ಗೆ ಮತ್ತೊಮ್ಮೆ ಸಲಹೆ ನೀಡಲಾಗಿದೆ.

ಕಡಲ ಮಾರ್ಗಗಳಲ್ಲಿ ಇಂತಹ ಬೇಜವಾಬ್ದಾರಿ ಹಾಗೂ ಪ್ರಚೋದನಕಾರಿ ಸಾಗರ ಕೃತ್ಯಗಳು ಅಂತಾರಾಷ್ಟ್ರೀಯ ಜಲಮೂಲಗಳಲ್ಲಿ ಸಂಚಾರ ನಡೆಸುವ ಹಡಗುಗಳಿಗೆ ಕಂಟಕವಾಗಲಿವೆ. ಪಾಕಿಸ್ತಾನವು ಇಂತಹ ಅಗ್ಗದ ಸಾಹಸಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಎಚ್ಚರಿಸಿದೆ. ಭಾರತೀಯ ನೌಕಾಪಡೆಯ ಹಡಗಿನ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಹಾಗೂ ನೌಕೆಗೆ ಸಣ್ಣಪುಟ್ಟ ಹಾನಿಯಾಗಿದ್ದರೂ ಅದು ಸಂಪೂರ್ಣ ಸುರಕ್ಷಿತವಾಗಿದ್ದು, ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ ಎಂದು ನೌಕಾಪಡೆ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ
ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ