AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಆರ್ಥಿಕ ಒತ್ತಡ, ವೃತ್ತಿ ಬದುಕು ಹಾಗೂ ದಾಂಪತ್ಯ; ಇಂದಿನ ಗ್ರಹಗತಿಗಳ ಬಗ್ಗೆ ತಿಳಿಯಿರಿ

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮೀ ತಿಥಿಯ ಶುಕ್ರವಾರದಂದು ಬೇರೆಯವರ ಅನುಕರಣೆ, ಪ್ರಶಸ್ತಿಗೆ ತಿರಸ್ಕಾರ, ಅಶಾಂತಿ, ದುಂದುವೆಚ್ಚ, ಕ್ಷಮೆಯಾಚನೆ ಮತ್ತು ಲಾಭದಿಂದ ಸಂತೋಷ. ಈ ಕುರಿತು ಮಾಹಿತಿ ತಿಳಿದುಕೊಳ್ಳಲು ಈ ಲೇಖನವನ್ನು ಓದಿ.

ದಿನ ಭವಿಷ್ಯ: ಆರ್ಥಿಕ ಒತ್ತಡ, ವೃತ್ತಿ ಬದುಕು ಹಾಗೂ ದಾಂಪತ್ಯ; ಇಂದಿನ ಗ್ರಹಗತಿಗಳ ಬಗ್ಗೆ ತಿಳಿಯಿರಿ
ದಿನ ಭವಿಷ್ಯImage Credit source: Getty images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Sep 18, 2026 | 1:14 AM

Share

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಪ್ರೀತಿ, ಕರಣ : ವಣಿಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 17 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:43 – 12:14, ಯಮಗಂಡ ಕಾಲ 15:16 – 16:47, ಗುಳಿಕ ಕಾಲ 07:41 – 09:12

ಮೇಷ ರಾಶಿ: ಗೊಂದಲಗಳು ನಿಮ್ಮ ಖರೀದಿಸುವ ತೀರ್ಮಾನವನ್ನು ಬದಲಿಸಲೂಬಹುದು. ಆರ್ಥಿಕ ಒತ್ತಡದಿಂದ ನೀವು ಆಚೆ ಬಂದು ನೆಮ್ಮದಿಯನ್ನು ಕಾಣುವಿರಿ. ನಿಮ್ಮಲ್ಲಿ ಇಂದು ಹೆಚ್ಚು ಉತ್ಸಾವಿರಲಿದ್ದು ಕೆಲಸಕ್ಕೆ ಪೂರಕವಾಗಲಿದೆ. ಯಾರನ್ನೋ ದೂರುವ ಬದಲು ನಿಮ್ಮ ನೇರಕ್ಕೆ ಕೆಲಸವನ್ನು ಮಾಡಿ. ಉದ್ಯೋಗದಲ್ಲಿ ಆಲಸ್ಯದಿಂದ ಇರುವ ಕಾರಣ ಅಧಿಕಾರಿಗಳಿಂದ ಎಚ್ಚರಿಕೆಯ ಮಾತುಗಳೂ ಬರಬಹುದು. ವ್ಯಾಪಾರದ ನಷ್ಟವನ್ನು ಬೇರೆ ರೀತಿಯಿಂದ ಸರಿಮಾಡಿಕೊಳ್ಳುವಿರಿ.

ವೃಷಭ ರಾಶಿ: ಸಹಭಾಗಿಗಳ ಜೊತೆ ಸ್ನೇಹದಿಂದ ಇರಬೇಕಾಗುವುದು. ಉದ್ಯೋಗವನ್ನು ಬದಲಿಸಲು ಇಚ್ಛೆ ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆದೀತು. ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳು ನಿಮಗೆ ಸಹಕಾರವನ್ನು ಕೊಡದೇ ಹೋಗಬಹುದು. ಹಿರಿಯರ ಮಾರ್ಗದರ್ಶನ ಸಿಗಲಿದೆ. ನಿಮ್ಮ ಗುಟ್ಟನ್ನು ಯಾರ ಬಳಿಯೂ ಬಿಟ್ಟುಕೊಡಲಾರಿರಿ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು.

ಮಿಥುನ ರಾಶಿ: ಮತ್ತೆ ಮತ್ತೆ ನಡೆಯುವ ಘಟನೆಗಳನ್ನು ಗಂಭೀರವಾಗಿ ಸ್ವೀಕರಿಸುವುದು ಬೇಡ. ಮಾನಸಿಕ ನೋವಿನಿಂದ ಬಳಲುವಿರಿ. ಹೊಸತನ್ನು ಅಭ್ಯಾಸ ಮಾಡಬೇಕು ಎನ್ನುವ ಹಂಬಲವು ನಿಲ್ಲುವುದು. ನಟನೆಗೆ ಆಸಕ್ತಿಯು ಬರಲಿದೆ. ಸಾಮಾಜಿಕ ಕಾರ್ಯದಲ್ಲಿ ಮೆಚ್ಚುಗೆ ಸಿಗಲಿದೆ. ಕುಲದೇವರ ದರ್ಶನವನ್ನು ಮಾಡುವಿರಿ. ಪ್ರವಾಸದಿಂದ ನಿಮಗೆ ತೊಂದರೆಯಾಗಲಿದೆ. ಹೂಡಿಕೆಯ ಹಣವನ್ನು ತೆಗೆಯುವ ನಿರ್ಧಾರಕ್ಕೆ ಬರಬೇಕಾದೀತು.‌

ಕರ್ಕಾಟಕ ರಾಶಿ: ಅಪಕ್ವವಾದ ಆಹಾರಸೇವನೆಯಿಂದ ತೊಂದರೆಯಾಗಲಿದೆ. ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಯು ಹೆಚ್ಚಾಗಬಹುದು. ಬೇರೆ ಊರಿಗೆ ಹೋಗಿ ಸಂಕಟಪಡುವಿರಿ. ದಾಂಪತ್ಯದಲ್ಲಿ ಹೊಂದಾಣಿಯನ್ನು ತರಲು ಬಹಳ ಶ್ರಮವನ್ನು ವಹಿಸಬೇಕಾದೀತು. ವೃತ್ತಿಯ ಬಗ್ಗೆ ನಿಮ್ಮಲ್ಲಿ ಹಲವು ಗೊಂದಲಗಳು ಕಾಣಿಸುವುದು. ತಾಯಿಯ ಆಸೆಯನ್ನು ಸ್ವಲ್ಪವಾದರೂ ತೀರಿಸುವಿರಿ. ನೀವು ಇಂದು ಅನೇಕ ಪಾತ್ರಗಳನ್ನು ನಿರ್ವಹಿಸಬೇಕಾಗಬಹುದು.

ಸಿಂಹ ರಾಶಿ: ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸಲು ಕಷ್ಟವಾದೀತು. ಆಪ್ತ ಸಮಾಲೋಚನೆಯಿಂದ ನಿಮ್ಮ ಮನಸ್ಸು ಹಗುರಾಗಲಿದೆ. ಸಾಲಗಾರರ ಕಿರಿಕಿರಿ ಅತಿಯಾಗಲಿದೆ. ಜನಜಾಗರಣ ಕಾರ್ಯದಲ್ಲಿ ಇಂದು ತೊಡಗಿಕೊಳ್ಳುವಿರಿ. ವಿದೇಶಕ್ಕೆ ಬರಲು ಆಹ್ವಾನವೂ ಬರಲಿದೆ. ಆತುರದ ಪ್ರಯಾಣವು ಬೇಡ. ನಿಮ್ಮ ನಕಾರಾತ್ಮಕ ಭಾವವನ್ನು ಇನ್ನೊಬ್ಬರ ಮೇಲೆ ಹೇರುವಿರಿ. ನಿಮ್ಮ ಪ್ರತಿಕ್ರಿಯೆ ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು.

ಕನ್ಯಾ ರಾಶಿ: ಸಾಮರಸ್ಯವನ್ನು ತಂದುಕೊಳ್ಳಲು ದಂಪತಿಗಳು ಶ್ರಮಿಸುವರು. ನಿಮ್ಮ ವ್ಯವಹಾರದಲ್ಲಿ ಪರಿಚಿತರು ಬರುವುದು ಇಷ್ಡವಾಹದು. ನಿಮಗೆ ಹಳೆಯ ಘಟನೆಗಳು ನೆನಪಾಗಿ ದುಃಖಿಸುವಿರಿ. ನೀವು ತಪ್ಪುಗಳನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರುವಿರಿ. ನಿಮ್ಮ ಬಗ್ಗೆ ಕಲಿಕಾರಭಾವವು ಇರಲಿದೆ. ನಿಮ್ಮ ಮಾತುಗಳು ನೇರವೂ ಕಠೋರವೂ ಅಗಿರಲಿದ್ದು, ನಿಮ್ಮ ಇಷ್ಟಪಡದವರ ಗುಂಪೊಂದು ತಯಾರಾಗಲಿದೆ.

ತುಲಾ ರಾಶಿ: ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಕಳೆದ ದಿನಗಳಿಗಿಂತ ಇಂದು ವಿದ್ಯಾಭ್ಯಾಸವು ಉತ್ತಮ. ದೂರ ಹೋಗುವವರಿದ್ದರೆ ಹಿರಿಯರ ಆಸೀರ್ವಾದವನ್ನು ಪಡೆಯುವುದು ಉತ್ತಮ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಕೆದಕಿ ತೆಗೆಯಬಹುದು. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ.

ವೃಶ್ಚಿಕ ರಾಶಿ: ಒಂಟಿಯಾಗಿ ಸುತ್ತಾಡಬೇಕು ಎಂದು ಅನ್ನಿಸಬಹುದು. ನ್ಯಾಯವನ್ನು ಕೊಡಿಸುವವರಿಗೆ ಸೂಕ್ತ ಆಧಾರಗಳು ಸಿಗಲಿವೆ. ನಿಮ್ಮ‌ ಬಳಿ ಸಾಮಾಜಿಕ ಕಳಕಳಿಯಿಂದ ಜನರು ಬರಬಹುದು. ಬಾರದೆಂದು ತಿಳಿದ ಹಣವು ಇಂದು ನಿಮ್ಮ ಕೈ ಸೇರಬಹುದು. ಪ್ರಾಣಿಗಳ‌ ಮೇಲೆ‌ ಪ್ರೀತಿ ಅತಿಯಾಗಬಹುದು. ‌ಅನುಮಾನವನ್ನು ಬಿಟ್ಟು ನೇರವಾಗಿ ಇರಲು ಪ್ರಯತ್ನಿಸಿ. ಇಂದು ನೀವು ಹೆಚ್ಚು ನಗಲಿದ್ದೀರಿ. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ.

ಧನು ರಾಶಿ: ನಿಮ್ಮ ಚೌಕಟ್ಟನ್ನು ಬಿಟ್ಟು ಆಚೆ ಇರಲಾರಿರಿ. ಪರಿಹಾರವಿಲ್ಲದ ಸಮಸ್ಯೆಯು ಇಲ್ಲವೆಂಬುದು ಅರಿವಿಗೆ ಬರುವುದು. ನೀವು ಸ್ವಾರ್ಥಿಗಳಂತೆ ತೋರಬಹುದು. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡಬೇಕಾದೀತು. ಮಾತಿನಿಂದ ನೀವು ಗೆಲ್ಲಲು ಯತ್ನಿಸುವಿರಿ. ಆರ್ಥಿಕತೆಗಾಗಿ ನಿರಂತರ ಶ್ರಮಿಸಬೇಕಾದೀತು. ಇನ್ನೊಬ್ಬರಿಗೆ ಕೊಡುವುದು ನಿಮಗೆ ಇಷ್ಟವಾಗದು. ಆರೋಗ್ಯವು ಸ್ಥಿರವಾಗಿರಲಿದೆ. ಧಾರ್ಮಿಕ ಆಚರಣೆಗಳು ನಿಮಗೆ ಇಷ್ಟವಾಗದ ವಿಚಾರವಾಗಲಿದೆ. ನಿಮ್ಮ ಕ್ರಮವನ್ನು ನೀವು ಮಾಡಿ.

ಮಕರ ರಾಶಿ: ನೀವು ಏನಾದರೂ ನಿರ್ಧರಿಸಿದರೆ ನಿಮಗೆ ಸಂಪೂರ್ಣ ಬೆಂಬಲವು ಸಿಗಲಿದೆ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಲಿದ್ದೀರಿ. ವಾತಕ್ಕೆ ಸಂಬಂಧಿಸಿದ ಖಾಯಿಲೆಯನ್ನು ಶಮನ ಮಾಡಿಕೊಳ್ಳುವುದು ಉತ್ತಮ. ಆಯ್ಕೆಯ ವಿಚಾರ ಬಂದಾಗ ಸ್ವಲ್ಪ ಸಮಯವನ್ನು ಪಡೆದು ತಾಳ್ಮೆಯಿಂದ ಉತ್ತರಿಸುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌.

ಕುಂಭ ರಾಶಿ: ನಿಮ್ಮದು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಬೇಕಸದೀತು. ಎಂದೋ ಕಳೆದುಕೊಂಡ ವಸ್ತುವು ಇಂದು ಪ್ರಾಪ್ತವಾಗಿ ಸಂತೋಷವಾಗುವುದು. ಸಾಮಾಜಿಕ ಕಾರ್ಯಗಳಿಂದ ಪ್ರಶಂಸೆಯನ್ನು ಅಪೇಕ್ಷಿಸುವಿರಿ. ಹಣದ ಅಭಾವವಿದ್ದರೂ ಖರ್ಚನ್ನು‌ ಮಾಡಬೇಕಾದೀತು. ಮನೆಯಿಂದ ದೂರವಿದ್ದು ಬೇಸರವಾಗಬಹುದು. ಜೊತೆಗಿರುವವರಿಂದ ಏನನ್ನಾದರೂ ನಿರೀಕ್ಷಿಸುವಿರಿ. ವ್ಯಾಪಾರವು ಸಾಧಾರಣವಾಗಿ ಇರಲಿದೆ.

ಮೀನ ರಾಶಿ: ಇಂದು ನೀವು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಆಸಕ್ತಿಯು ಇರಲಿದೆ.‌ ನಿಮ್ಮ ಪ್ರಾಮಾಣಿಕತೆಯನ್ನು ಪ್ರಶ್ನಿಸಬಹುದು. ವ್ಯಾಪಾರವನ್ನು ಬಹಳ ಉತ್ಸಾಹದಿಂದ ಮಾಡುವಿರಿ. ಸಂಗಾತಿಯನ್ನು ಭೇಟಿಯಾಗಲು ಕಾರಣವನ್ನು ಹುಡುಕುವಿರಿ. ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ. ಯಾವುದೇ ಸಂದರ್ಭದಲ್ಲಿಯೂ ಸಮಯಪ್ರಜ್ಞೆಯಿಂದ ಮುನ್ನಡೆಯಿರಿ.

ಲೋಹಿತ್ ಹೆಬ್ಬಾರ್-8762924271 (what’s app only)

Follow Us
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
‘ಅಮೆರಿಕ ಅಮೆರಿಕ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಸುಧಾ ಮೂರ್ತಿ
‘ಅಮೆರಿಕ ಅಮೆರಿಕ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಸುಧಾ ಮೂರ್ತಿ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು