ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಕಾರ್ಯ ವಿಳಂಬ ಹಾಗೂ ಅನ್ಯರಿಂದ ಅಪಮಾನ…
ಸೆಪ್ಟೆಂಬರ್ 16, 2026ರ ನಿತ್ಯ ಭವಿಷ್ಯ ಇಲ್ಲಿದೆ. ಈ ದಿನದ ರಾಶಿ ಭವಿಷ್ಯವು ನಿಮ್ಮ ಕಾರ್ಯ ವಿಳಂಬ, ಆರೋಗ್ಯದ ಸ್ಥಿತಿ, ಉದ್ಯೋಗದಲ್ಲಿ ಸ್ಥಿರತೆ, ಆರ್ಥಿಕ ಪರಿಸ್ಥಿತಿ, ಸಂಬಂಧಗಳು ಹಾಗೂ ಅದೃಷ್ಟದ ಬಗ್ಗೆ ವಿವರಗಳನ್ನು ನೀಡುತ್ತದೆ. ಕಾನೂನು ಹೋರಾಟ, ಹಣಕಾಸಿನ ವ್ಯವಹಾರಗಳು, ವೈವಾಹಿಕ ಜೀವನ ಮತ್ತು ವೈಯಕ್ತಿಕ ಬೆಳವಣಿಗೆಗಳ ಕುರಿತು ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ಷಷ್ಠೀ ತಿಥಿಯ ಬುಧವಾರದಂದು ಜನಬಲ ಪ್ರದರ್ಶನ, ಆರೋಗ್ಯಕ್ಕೆ ತೊಂದರೆ, ಉದ್ಯೋಗದಲ್ಲಿ ಸ್ಥಿರತೆ, ಸ್ಥಾನ ಬದಲಾವಣೆ, ದೂರಿನ ಚಿಂತೆ, ಸಾಲದ ಹಣ ವಾಪಾಸು, ಹಿರಿಯರ ಸೇವೆಯಿಂದ ಸಂತೋಷ ಇವೆಲ್ಲ ಇಂದಿನ ವಿಶೇಷ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವೈಧೃತಿ, ಕರಣ : ಬಾಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 19 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:14 – 13:46, ಯಮಗಂಡ ಕಾಲ 07:41- 09:12, ಗುಳಿಕ ಕಾಲ 10:43 – 12:14
ಮೇಷ ರಾಶಿ : ಕಾನೂನಿಗೆ ವಿರುದ್ಧವಾಗಿ ಯಾವುದಾದರೂ ಕಾರ್ಯವನ್ನು ಮಾಡುವ ಆಲೋಚನೆ ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ. ಉಪಾಯದಿಂದ ಮಾಡುವ ಕೆಲಸಕ್ಕೆ ಶಕ್ತಿಯ ಅವಶ್ಯಕತೆ ಇರದು. ನಿಮಗೆ ಪ್ರಭಾವಿಗಳಿಂದ ಉತ್ತಮ ಬಿರುದುಗಳು ಬರಬಹುದು. ಯಾರಾದರೂ ನಿಮ್ಮವರು ಅಪಾಯಕ್ಕೆ ಸಿಲುಕಿದ ಸೂಚನೆ ತಾನಾಗಿಯೇ ಗೊತ್ತಾಗುವುದು. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು.
ವೃಷಭ ರಾಶಿ : ನೀವು ವಹಿಸಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರಗೊಳಿಸಿಕೊಳ್ಳುವಿರಿ. ನಿಮಗೆ ಬೇಕಾದಾಗ ಬೇಕಾದವರು ಸಿಗದೇಹೋಗಬಹುದು. ಅಭಾವವೈರಾಗ್ಯವು ನಿಮ್ಮಲ್ಲಿ ಉಂಟಾಗಬಹುದು. ಇಂದಿನ ನಿಮ್ಮ ಕೆಲಸವನ್ನು ಹಂಚಿಕೊಂಡು ಮಾಡಿ. ಇದು ಕಾರ್ಯಕ್ಕೆ ವೇಗವನ್ನು ತಂದುಕೊಡುವುದು.
ಮಿಥುನ ರಾಶಿ : ನಿಮ್ಮ ಜೀವನದಲ್ಲಿ ತಪ್ಪು ತಿಳುವಳಿಕೆಗಳೇ ಹೆಚ್ಚು ತೋರುವುದು. ಉದ್ಯಮಿಗಳಿಗೆ ರಪ್ತು ವ್ಯವಹಾರವು ಬಹಳ ಕಷ್ಟವೆನಿಸಲಿದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು. ನಿಮ್ಮವರನ್ನು ನೀವು ಬಿಟ್ಟುಕೊಡಲಾರಿರಿ. ಸಲ್ಲದ ಮಾತುಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇರಲಿದೆ. ಪ್ರಯಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಎಷ್ಟು ಸಮಯವಾದರೂ ನಿಮ್ಮ ಆಸೆ ನೆರವೇರುತ್ತಿಲ್ಲ ಎಂಬ ಆತಂಕವೂ ಇರಲಿದೆ.
ಕರ್ಕಾಟಕ ರಾಶಿ : ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯು ಬರಲಿದೆ. ಇಂದಿನ ನಿಮ್ಮ ಉತ್ಸಾಹವು ಬಹಳ ಸಂತೋಷದಿಂದ ಭಾಗವಿಸುವಂತೆ ಮಾಡುವುದು. ಹೊಸ ವೃತ್ತಿಯನ್ನು ಹುಡುಕುತ್ತಿದ್ದರೆ ಉತ್ತಮ ವೃತ್ತಿಯು ಸಿಗಬಹುದು. ಗೊತ್ತಿಲ್ಲದೇ ಅಧಿಕಾರಿಗಳ ಜೊತೆ ಅಸಭ್ಯ ವರ್ತನೆ ಮಾಡಿ ಮುಜುಗರಪಡುವಿರಿ. ಧನ ಸಂಪಾದನೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ಮನೆಯ ಬಗ್ಗೆ ಪ್ರೀತಿ ಹೆಚ್ಚಾಗಬಹುದು.
ಸಿಂಹ ರಾಶಿ : ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳ ಶ್ರಮ ಸಫಲವಾಗದು. ನೀವು ಇಂದು ಕಾರ್ಯದಲ್ಲಿ ಅನಿರೀಕ್ಷಿತ ಜಯವನ್ನು ಗಳಿಸುವಿರಿ. ಭೂಮಿಯ ದಾಖಲೆಗಳನ್ನು ಸರಿಯಾಗಿ ಪಡೆದುಕೊಂಡು ವ್ಯವಹಾರವನ್ನು ಮುಂದುವಿರಿಸಿ. ವಾಹನ ಚಾಲನೆಗೆ ಪರಿಮಿತಿ ಇಲ್ಲದೇ ಓಡಾಡಿಸಿ, ತೊಂದರೆ ಕೊಡುವಿರಿ. ನಿಮ್ಮವರ ಕೆಲವು ಸ್ವಭಾವವು ನಿಮಗೆ ಮೆಚ್ಚುಗೆಯಾಗದು. ನಿಮಗೆ ಸಿಕ್ಕ ಅನಾದರದಿಂದ ಬೇಸರವಾಗಬಹುದು.
ಕನ್ಯಾ ರಾಶಿ : ಬಂಧುಗಳು ನಿಮ್ಮ ಸಹಾಯವನ್ನು ಬಯಸುವರು. ಆಸ್ತಿಯ ವಿಚಾರವಾಗಿ ನೀವು ಕಾನೂನು ಹೋರಾಟವನ್ನು ಮಾಡಲಿದ್ದೀರಿ. ತಾಯಿಯ ಪ್ರೀತಿ ಕಡಿಮೆಯಾದ ಅನುಭವ ನಿಜವಾದ ಮಕ್ಕಳಿಗೆ ಗೊತ್ತಾಗುವುದು. ಕಲಾವಿದರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ನಿಮ್ಮ ಬೆಳವಣಿಗೆಯನ್ನು ಬಂಧುಗಳು ಕಂಡು ಇಷ್ಟಪಡುವರು. ಎಲ್ಲದಕ್ಕೂ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತ ಯಾವ ಕಾರ್ಯವನ್ನೂ ಸಫಲ ಮಾಡಲಾಗದು.
ತುಲಾ ರಾಶಿ : ಸಾಂಸಾರಿಕ ಬದುಕಿನಲ್ಲಿ ಇಂದು ಸಣ್ಣಪುಟ್ಟ ಕಲಹಗಳಿದ್ದರೂ ತೂಗಿಸಿಕೊಂಡು ಹೋಗುವ ಸಾಮರ್ಥ್ಯ ಇರುವುದು. ದಾಯಾದಿ ಕಲಹವು ತಾರಕಕ್ಕೆ ಹೋಗಲಿದೆ. ನಿಮಗೆ ಬೆಂಬಲವು ಕಡಿಮೆ ಆಗಲಿದೆ. ಕಛೇರಿಯಲ್ಲಿ ನಿಮ್ಮ ಕೆಲಸವು ಮಂದಗತಿಯಲ್ಲಿ ಸಾಗಲಿದ್ದು ಸಹೋದ್ಯೋಗಿಗಳಿಂದ ದೂರು ಸಿಗಬಹುದು. ಅಜಾಗರೂಕತೆಯಿಂದ ಮಕ್ಕಳನ್ನು ಕಳೆದುಕೊಳ್ಳಬೇಕಾಗಬಹುದು. ಹಠದ ಸ್ವಭಾವವನ್ನು ಬಿಟ್ಟರೆ ಸಂತೋಷದ ಸಂಗತಿಗಳನ್ನು ನೀವು ಪಡೆಯುವಿರಿ.
ವೃಶ್ಚಿಕ ರಾಶಿ : ನಿಮ್ಮ ಎಂತಹ ಆಪ್ತರಾದರೂ ಸಹಕಾರವನ್ನು ಕೇಳುವಾಗ ಹಿಂದೇಟು ಹಾಕುವಿರಿ. ನಿಮ್ಮ ಆಸೆಯನ್ನು ಪ್ರಕಟಪಡಿಸಲು ಹಿಂಜರಿಯಬಹುದು. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ವರ್ತಿಸುವಿರಿ. ಒಮ್ಮೆಲೇ ಎರಡೆರಡು ಪರಿವರ್ತನೆಯಿಂದ ಗೊಂದಲ ಹೆಚ್ಚಾಗುವುದು. ವಿದ್ಯೆಯನ್ನು ಇನ್ನಷ್ಟು ಪಡೆಯುವ ಆಸೆ ಇರುವುದು. ಮುಖಂಡರ ಜೊತೆ ನೀವು ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚಿಸುವಿರಿ.
ಇದನ್ನೂ ಓದಿ: ರವಿ ಸಿಂಹ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಧನು ರಾಶಿ : ನಿಮಗೆ ಹಳೆಯ ಘಟನೆಗಳಿಂದ ಪಾಪಪ್ರಜ್ಞೆ ಕಾಡಬಹುದು. ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯುವುದು ಉತ್ತಮ. ಶತ್ರುಗಳಿಂದ ತೊಂದರೆಯಾಗಬಹುದು. ಹೆಚ್ಚು ಪ್ರಯತ್ನದಿಂದ ಸ್ವಲ್ಪ ಫಲವನ್ನು ಪಡೆಯುವಿರಿ. ಅವಕಾಶದ ಕೊರತೆಯಿಂದ ದುಃಖಿಸುವಿರಿ. ನಿಮ್ಮ ಧೈರ್ಯವು ಕ್ಷಣಿಕದ್ದು ಮಾತ್ರ. ಒತ್ತಡಕ್ಕೆ ಅವಕಾಶವನ್ನು ಕೊಡದೇ ನೀವು ನೆಮ್ಮದಿಯಿಂದ ಇರುವಿರಿ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ನೀವೇ ನಿಮ್ಮವರನ್ನು ಮೂದಲಿಸುವಿರಿ.
ಮಕರ ರಾಶಿ : ನಿಮ್ಮ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ನಿಮ್ಮ ಕಾರ್ಯವನ್ನು ಪರಿಶೀಲಿಸಲು ಉನ್ನತ ಅಧಿಕಾರಿಗಳು ಬರಲಿದ್ದಾರೆ. ಪ್ರಶಂಸೆಯೂ ಸಿಗುವ ಸಾಧ್ಯತೆ ಇದೆ. ತಾಯಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ಸದ್ಭಾವ ಬರುವುದು. ಒತ್ತಡದಿಂದ ಸ್ವಲ್ಪ ದೂರ ಬರುವಿರಿ. ಮನಸ್ಸಿಗೆ ಹಗುರಾಗುವುದು. ಗುಪ್ತವಾದ ಧನವನ್ನು ಮತ್ತಷ್ಟು ಜೋಪಾನ ಮಾಡುವಿರಿ.
ಕುಂಭ ರಾಶಿ : ನಿಮ್ಮ ಮನಸ್ಸು ಅನೇಕರ ಸಲಹೆಗಳ ಕಾರಣದಿಂದ ಬಹಳ ಚಂಚಲವಾಗಿರಲಿದೆ. ನಿಮ್ಮ ಉದ್ಯೋಗದ ಕನಸು ನನಸಾಗಲಿದೆ. ಅಶಿಸ್ತಿನ ವ್ಯವಸ್ಥೆಯು ನಿಮಗೆ ಬೇಸರ ತರಿಸಬಹುದು. ವಿದೇಶದ ಕನಸು ಅಂಕುರಿಸಬಹುದು. ಸಹೋದರಿಯರಿಗೆ ಏನನ್ನಾದರೂ ನೀಡುವಿರಿ. ನಿಮ್ಮ ಸಲಾರಾತ್ಮಕ ನಿಲುವು ಇಷ್ಟವಾಗುವುದು. ನಿಮಗೆ ಇಷ್ಟವಾದ ಕೊಡುಗೆಯು ಲಭ್ಯವಾಗಲಿದೆ. ಪ್ರಭಾವೀ ಪದವಿಯಲ್ಲಿ ಇರುವವರನ್ನು ನೀವು ಭೇಟಿಯಾಗುವಿರಿ. ಹೆಸರು ಮಾಡುವ ಭ್ರಮೆಯು ತಲೆಗೆ ಬರುವುದು.
ಮೀನ ರಾಶಿ : ನಿಮ್ಮ ಪ್ರಯತ್ನಕ್ಕೆ ಅದೃಷ್ಟವೂ ಜೊತೆಯಾಗುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ನಿಮ್ಮ ಶತ್ರುಗಳಿಂದ ಕೆಲವು ಅವಕಾಶಗಳು ತಪ್ಪುವುದು. ವಿವಾಹಕ್ಕೆ ಬೇಕಾದ ತಯಾರಿಯನ್ನು ನೀವು ಮಾಡಿಕೊಳ್ಳುವಿರಿ. ನಿಮ್ಮ ವೇತನವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ನ್ಯಾಯಪರತೆಯಿಂದ ಇರುವುದನ್ನು ಇಷ್ಟಪಡುವರು. ನಿಮ್ಮ ಆಲೋಚನೆಗಳು ಸರಿಯಾದ ದಿಕ್ಕಿನಲ್ಲಿ ಇರಲಿ. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವುದು ಬೇಡ ಸಫಲವಾಗದು.
-ಲೋಹಿತ್ ಹೆಬ್ಬಾರ್-8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




