AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸ್ತ್ರಿಯ ಕುತಂತ್ರಕ್ಕೆ ಸೋಲು, ಮೊದಲ ‘ಪೈಲೆಟ್’ ಸಂಗೀತಾ

Bigg Boss Kannada season 13: ಸ್ಪರ್ಧಿಗಳು ಟಾಸ್ಕುಗಳನ್ನು ಗೆಲ್ಲಲು ನಾ-ನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲವರು ನೇರವಾಗಿ ಜಿದ್ದಾ-ಜಿದ್ದಿನ ಹೋರಾಟ ನಡೆಸಿ ಆಡಿದರೆ ಕೆಲವರು ಕುತಂತ್ರದಿಂದ ಆಡುತ್ತಿದ್ದಾರೆ. ಅದರಲ್ಲೂ ಮಂಗಳವಾರ ಮುಗಿದ ಟಾಸ್ಕ್​​ನಲ್ಲಂತೂ ತಂತ್ರ-ಕುತಂತ್ರ ಜೋರಾಗಿಯೇ ನಡೆಯಿತು. ಸಂಗೀತಾ ಅವರು ಮನೆಯ ಮೊದಲ ಪೈಲಟ್ ಆದರು. ಶಾಸ್ತ್ರಿಯ ಕುತಂತ್ರಕ್ಕೆ ಗೆಲುವು ಸಿಗಲಿಲ್ಲ

ಶಾಸ್ತ್ರಿಯ ಕುತಂತ್ರಕ್ಕೆ ಸೋಲು, ಮೊದಲ ‘ಪೈಲೆಟ್’ ಸಂಗೀತಾ
Kiran Sangeetha
ಮಂಜುನಾಥ ಸಿ.
|

Updated on:Sep 15, 2026 | 11:38 PM

Share

ಬಿಗ್​​ಬಾಸ್ ಮನೆಯಲ್ಲಿ ಎರಡನೇ ವಾರದಲ್ಲಿ ಟಾಸ್ಕುಗಳು ಸಖತ್ ಆಗಿ ರಂಗೇರಿವೆ. ಮೊದಲ ವಾರವೆಲ್ಲ ಅರ್ಧ ಸ್ಪರ್ಧಿಗಳು ವಿಮಾನದಲ್ಲಿ ಅರ್ಧ ಸ್ಪರ್ಧಿಗಳು ಮನೆಯಲ್ಲಿ ಇದ್ದರು. ಆದರೆ ಈಗ ಎಲ್ಲರೂ ಮನೆಯೊಳಗೆ ಇದ್ದಾರೆ. ಇದರ ನಡುವೆ ಟಾಸ್ಕುಗಳು ಸಹ ಬಂದಿದ್ದು, ಸ್ಪರ್ಧಿಗಳು ಟಾಸ್ಕುಗಳನ್ನು ಗೆಲ್ಲಲು ನಾ-ನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲವರು ನೇರವಾಗಿ ಜಿದ್ದಾ-ಜಿದ್ದಿನ ಹೋರಾಟ ನಡೆಸಿ ಆಡಿದರೆ ಕೆಲವರು ಕುತಂತ್ರದಿಂದ ಆಡುತ್ತಿದ್ದಾರೆ. ಅದರಲ್ಲೂ ಮಂಗಳವಾರ ಮುಗಿದ ಟಾಸ್ಕ್​​ನಲ್ಲಂತೂ ತಂತ್ರ-ಕುತಂತ್ರ ಜೋರಾಗಿಯೇ ನಡೆಯಿತು.

ಸೋಮವಾರವೇ ಆರಂಭವಾಗಿದ್ದ ವಸ್ತುಗಳನ್ನು ಸಂಗ್ರಹಿಸುವ ಮತ್ತು ಕಾಯ್ದುಕೊಳ್ಳುವ ಟಾಸ್ಕ್​​ನಲ್ಲಿ ಸಾಕಷ್ಟು ಡ್ರಾಮಾ-ಫೈಟಿಂಗ್ ಎಲ್ಲವೂ ನಡೆದು ಮಂಜ, ಸೌಂದರ್ಯಾ, ಧನು ಇನ್ನೂ ಕೆಲವರು ಹೊರಗೆ ಹೋದರು. ಧನುಶ್​​ಗೆ ಕಿರಣ್ ಶಾಸ್ತ್ರಿ ಸಹಾಯ ಮಾಡದೆ, ಉದ್ದೇಶಪೂರ್ವಕವಾಗಿ ಅಂತರ ಕಾಯ್ದುಕೊಂಡು ಧನುಶ್ ಹೊರಗೆ ಹೋಗುವಂತೆ ಮಾಡಿದ. ಅದು ಮಾತ್ರವೇ ಅಲ್ಲದೆ, ಇಡೀ ಆಟದ ಸಮಯದಲ್ಲಿ ನೇರ ಆಟ ಆಡದೆ ತಾನೇ ಹೇಳಿಕೊಂಡಂತೆ ‘ಬುದ್ಧಿ’ಯ ಆಟ ಆಡಿದ ಕಿರಣ್ ಶಾಸ್ತ್ರಿ.ಆದರೆ ಅಂತಿಮವಾಗಿ ಅದೇ ಆಟ ಕಿರಣ್ ಶಾಸ್ತ್ರಿಗೆ ಮುಳುವಾಯ್ತು.

ಕಿರಣ್ ಶಾಸ್ತ್ರಿ, ಬಹಳ ಉಪಾಯದಿಂದ ಎಲ್ಲರನ್ನೂ ಹೊರಗೆ ಹೋಗುವಂತೆ ಮಾಡಿದ, ಆದರೆ ಸಂಗೀತಾ, ಅದೇ ಜಾಣತನವನ್ನು ಉಪಯೋಗಿಸಿ, ಜೊತೆಗೆ ತುಸು ತಾಳ್ಮೆಯನ್ನೂ ಬೆರೆಸಿ ಫೈನಲ್ ವರೆಗೆ ಬಂದರು. ಫೈನಲ್​​ನಲ್ಲಿ ಕಿರಣ್ ಶಾಸ್ತ್ರಿ ಮತ್ತು ಸಂಗೀತಾ ಎದುರಾದರು. ಕಿರಣ್ ಶಾಸ್ತ್ರಿ, ತನ್ನದೇ ಗೆಲುವು ಎಂದು ತುಸು ಮೈಮರೆತು ನಿಯಮಗಳನ್ನು ಗಾಳಿಗೆ ತೂರಿದ. ಲುಂಗಿಯಲ್ಲಿ ವಸ್ತುಗಳನ್ನು ತೆಗೆದುಕೊಂಡು ಬಂದ, ಕ್ಯಾಮೆರಾಗೆ ಹಲವು ಬಾರಿ ಕಾಣಿಸಿಕೊಂಡ.

ಇದನ್ನೂ ಓದಿ:ಮಂಜ vs ಸೌಂದರ್ಯ: ಕೈ-ಕೈ ಮಿಲಾಯಿಸಿದರು ಬಿಟ್ಟಿದ್ದೇಕೆ ಬಿಗ್​​ಬಾಸ್

ಇತ್ತ ಸಂಗೀತಾ ಕೆಲವೇ ವಸ್ತುಗಳನ್ನು ತೆಗೆದುಕೊಂಡು ಬಂದರು. ಆದರೆ ಕಿರಣ್ ಶಾಸ್ತ್ರಿ ಅದರ ಮೇಲೂ ಸಹ ದಾಳಿ ಮಾಡಿ ಕಿತ್ತುಕೊಳ್ಳಲು ಯತ್ನಿಸಿದ. ಬಜರ್ ಬಳಿಕ ಉಸ್ತುವಾರಿಗಳು ಒಟ್ಟಾಗಿ ತೀರ್ಮಾನ ಪ್ರಕಟಿಸಿ, ನಿಯಮಗಳನ್ನು ಗಾಳಿಗೆ ತೂರಿದ ಕಿರಣ್ ಶಾಸ್ತ್ರಿಯನ್ನು ಆಟದಿಂದ ಹೊರಗಟ್ಟಿ, ಮೊದಲ ಪೈಲೆಟ್ ಆಗಿ ಸಂಗೀತಾ ಅವರನ್ನು ಆಯ್ಕೆ ಮಾಡಿದರು.

ಆದರೆ ಕಿರಣ್ ಶಾಸ್ತ್ರಿ ಇದರಿಂದ ಬಹಳ ಸಿಟ್ಟಿಗೆದ್ದು ಬಹಳ ಮಾತನಾಡಿದರು. ಮುಖ್ಯ ಉಸ್ತುವಾರಿಗಳಾಗಿದ್ದ ತಾಂಡವ್, ಗಗನ್ ಅವರನ್ನು ಬುದ್ದಿಗೇಡಿಗಳು, ದಡ್ಡರು, ನಯಾ ಪೈಸಕ್ಕೆ ಪ್ರಯೋಜನ ಇಲ್ಲದವರು, ಬಳೆ ಹಾಕಿಕೊಳ್ಳಲು ಲಾಯಕ್ಕು ಎಂದೆಲ್ಲ ಬಹಳ ಅತಿಯಾಗಿ ಮಾತನಾಡಿದ. ಇತರೆ ಅಗ್ನಿ ಬಾಯ್ಸ್, ಕಿರಣ್ ಅನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ ಕಿರಣ್ ಸುಮ್ಮನಾಗಲಿಲ್ಲ. ತನ್ನದೇ ಹಳ್ಳಿ ಶೈಲಿಯಲ್ಲಿ ವಿಪರೀತ ಮಾತನಾಡಿ ಗಗನ್ ಹಾಗೂ ತಾಂಡವ್ ಮೇಲೆ ರೇಗಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:37 pm, Tue, 15 September 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ