- TV9 Kannada Photo gallery Cricket photos Harmanpreet Kaur Steps Down: Smriti Mandhana Likely to Lead Indian Women's Team
ನಾಯಕಿಯಾಗಿ ಹರ್ಮನ್‌ಪ್ರೀತ್ ಯುಗಾಂತ್ಯ; ಸ್ಮೃತಿ ಮಂಧಾನಗೆ ನಾಯಕತ್ವ?
ಹರ್ಮನ್‌ಪ್ರೀತ್ ಕೌರ್ ಭಾರತೀಯ ಮಹಿಳಾ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ, 10 ವರ್ಷಗಳ ಪಯಣ ಅಂತ್ಯಗೊಂಡಿದೆ. ಇದು ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದೆ. ಹಾಲಿ ಉಪನಾಯಕಿ ಸ್ಮೃತಿ ಮಂಧಾನ ಮುಂದಿನ ನಾಯಕಿಯಾಗುವ ಸಾಧ್ಯತೆ ದಟ್ಟವಾಗಿದೆ. ಬಿಸಿಸಿಐ ಸಭೆಯಲ್ಲಿ ಅವರ ಉಪಸ್ಥಿತಿ ನಾಯಕತ್ವ ಬದಲಾವಣೆಯ ಸ್ಪಷ್ಟ ಸೂಚನೆಯಾಗಿದೆ. ಮಂಧಾನಗೆ ನಾಯಕತ್ವದ ಪಟ್ಟುಗಳು ಕರಗತವಾಗಿವೆ.
Updated on: Oct 06, 2026 | 4:22 PM

ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಒಂದು ಯುಗ ಕೊನೆಗೊಂಡಿದ್ದು, ಇನ್ನೊಂದು ಯುಗ ಪ್ರಾರಂಭವಾಗಲು ಸಜ್ಜಾಗಿದೆ. ಮೂರು ಸ್ವರೂಪಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ತಮ್ಮ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಮೂಲಕ ನಾಯಕಿಯಾಗಿ ಹರ್ಮನ್ ಅವರ 10 ವರ್ಷಗಳ ಪಯಣ ಅಂತ್ಯವಾಗಿದೆ(PC-PTI).

ಆಟಗಾರ್ತಿಯಾಗಿ ಹರ್ಮನ್‌ಪ್ರೀತ್ ಕೌರ್ ಅವರ ಪ್ರಸ್ತುತ ಫಾರ್ಮ್ ಇದಕ್ಕೆ ಪ್ರಮುಖ ಕಾರಣವಾಗಿದೆ. 37 ವರ್ಷದ ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ತಂಡವು ಗೆಲುವು ಸಾಧಿಸುತ್ತಿದೆ. ಆದಾಗ್ಯೂ, ಆ ವಿಜಯಗಳ ನೆರಳಿನಲ್ಲಿ, ಬ್ಯಾಟ್ಸ್‌ಮನ್ ಆಗಿ ಹರ್ಮನ್‌ಪ್ರೀತ್ ಅವರ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ಹೀಗಾಗಿ ಹರ್ಮನ್‌ಪ್ರೀತ್ ನಾಯಕತ್ವ ಕಳೆದುಕೊಳ್ಳಬೇಕಾಯಿತು(PC-PTI).

ಹರ್ಮನ್‌ಪ್ರೀತ್ ರಾಜೀನಾಮೆಯಿಂದ ತೆರನಾದ ಜಾಗಕ್ಕೆ ಯಾರು ಬರಲಿದ್ದಾರೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಭಾರತ ಮಹಿಳಾ ತಂಡದ ನಾಯಕತ್ವದ ಹುದ್ದೆಗೆ ಹಲವರ ಹೆಸರು ರೇಸ್ನಲ್ಲಿದ್ದರೂ, ಅದರಲ್ಲಿ ಅಗ್ರಸ್ಥಾನದಲ್ಲಿರುವ ಏಕೈಕ ಹೆಸರು ಸ್ಮೃತಿ ಮಂಧಾನ ಅವರದ್ದು. ಪ್ರಸ್ತುತ ತಂಡದ ಉಪನಾಯಕಿಯಾಗಿರುವ ಸ್ಮೃತಿಗೆ ನಾಯಕತ್ವದ ಪಟ್ಟುಗಳು ಈಗಾಗಲೇ ಕರಗತವಾಗಿರುವುದು ಅವರಿಗೆ ಮತ್ತಷ್ಟು ಪ್ರಯೋಜನಕಾರಿಯಾಗಿವೆ(PC-PTI).

ಹರ್ಮನ್‌ಪ್ರೀತ್ ಕೌರ್ ರಾಜೀನಾಮೆ ನೀಡಿದ ನಂತರ ಸ್ಮೃತಿ ಮಂಧಾನ ಅವರನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ನೇಮಿಸುವುದು ಖಚಿತವಾಗಿದೆ. ಮಂಧಾನಗೆ ನಾಯಕತ್ವ ನೀಡಬೇಕು ಎಂಬ ಕೂಗು ಬಹಳ ಸಮಯದಿಂದಲೇ ಕೇಳಿಬರುತ್ತಿದೆ. ಇದರ ಜೊತೆಗೆ ಬಿಸಿಸಿಐ ಸಭೆಯಲ್ಲಿ ಸ್ಮೃತಿ ಮಂಧಾನ ಹಾಜರಿದಿದ್ದು, ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡುವುದಕ್ಕೆ ಮತ್ತಷ್ಟು ಪುಷ್ಠಿ ನೀಡಿವೆ(PC-PTI).

ಗುವಾಹಟಿಯಲ್ಲಿ ಬಿಸಿಸಿಐ ಜೊತೆ ನಡೆದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪರಿಶೀಲನಾ ಸಭೆಯ ಉದ್ದೇಶ ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದ ಬಗ್ಗೆ ನಿರ್ಧರಿಸುವುದಾಗಿತ್ತು. ಇದಕ್ಕಾಗಿಯೇ ಉಪನಾಯಕಿ ಸ್ಮೃತಿ ಮಂಧಾನಾ ಸಭೆಯಲ್ಲಿ ತಂಡದ ಕೋಚ್ ಅಮೋಲ್ ಮಜುಂದಾರ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಜರಿದ್ದರು(PC-PTI).

ಸಾಮಾನ್ಯವಾಗಿ ತಂಡದ ಪರಿಶೀಲನಾ ಸಭೆಗೆ ಉಪನಾಯಕಿಗೆ ಆಹ್ವಾನವಿರುವುದಿಲ್ಲ. ಆದಾಗ್ಯೂ, ಗುವಾಹಟಿಯಲ್ಲಿ ನಡೆದ ಈ ಸಭೆಗೆ ಅವರನ್ನು ಕರೆಯಲಾಗಿತ್ತು. ಹೀಗಾಗಿ ಸ್ಮೃತಿ ಮಂಧಾನಾ ಅವರ ಉಪಸ್ಥಿತಿಯು ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಬದಲಾವಣೆಗಳು ಸನ್ನಿಹಿತವಾಗಿವೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ(PC-PTI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



