AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಳೆ ಮುರಿದುಕೊಂಡಿದ್ದ ದ್ರೋಣ ಆನೆಗೆ ಫೈಬರ್ ಗ್ಲಾಸ್ ಚಿಕಿತ್ಸೆ ಯಶಸ್ವಿ

ಮೂಳೆ ಮುರಿದುಕೊಂಡಿದ್ದ ದ್ರೋಣ ಆನೆಗೆ ಫೈಬರ್ ಗ್ಲಾಸ್ ಚಿಕಿತ್ಸೆ ಯಶಸ್ವಿ

Basavaraj Yaraganavi
| Edited By: |

Updated on: Oct 07, 2026 | 12:18 PM

Share

ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರದಲ್ಲಿ ದ್ರೋಣ ಆನೆಯು ಮುರಿದ ಎಡಗಾಲಿನ ಮೂಳೆಯಿಂದ ಸಂಪೂರ್ಣವಾಗಿ ಗುಣಮುಖವಾಗಿದೆ. ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ಮತ್ತು ಹೈಡ್ರೋ ಥೆರಪಿ ಸೇರಿದಂತೆ ನಾಲ್ಕು ತಿಂಗಳ ತೀವ್ರ ಚಿಕಿತ್ಸೆಯಿಂದ ಅದು ಮತ್ತೆ ಕಾಡಿನಲ್ಲಿ ಸಂಚರಿಸುತ್ತಿದೆ. ಡಾ. ಮುರಳಿ ಮನೋಹರ್ ಮತ್ತು ಡಾ. ಮಹೇಶ್ ಅವರ ತಂಡವು ನಡೆಸಿದ ಈ ₹80,000 ವೆಚ್ಚದ ಅಪರೂಪದ ವೈದ್ಯಕೀಯ ಸಾಹಸವು ರಾಜ್ಯದ ವನ್ಯಜೀವಿ ಚಿಕಿತ್ಸೆಯಲ್ಲಿ ಹೊಸ ದಾಖಲೆ ಬರೆದಿದೆ.

ಶಿವಮೊಗ್ಗ, ಅ.7: ಕ್ರಾಲ್‌ನಲ್ಲಿ ಬಿದ್ದು ಎಡಗಾಲಿನ ಮೂಳೆ ಮುರಿದುಕೊಂಡು ತೀವ್ರ ಯಾತನೆ ಅನುಭವಿಸುತ್ತಿದ್ದ ‘ದ್ರೋಣ’ ಎಂಬ ಸಾಕಾನೆ ಇದೀಗ ಯಶಸ್ವಿ ಚಿಕಿತ್ಸೆಯ ನಂತರ ಸಂಪೂರ್ಣವಾಗಿ ಗುಣಮುಖಗೊಂಡು ಮರಳಿ ತನ್ನ ಸಹಪಾಠಿ ಆನೆಗಳೊಂದಿಗೆ ಕಾಡಿನಲ್ಲಿ ಮುಕ್ತವಾಗಿ ಸಂಚರಿಸುತ್ತಿದೆ. ಶಿವಮೊಗ್ಗ ತಾಲೂಕಿನ ಪ್ರಸಿದ್ಧ ಸಕ್ರೇಬೈಲು ಆನೆ ಬಿಡಾರದಲ್ಲಿ ನಡೆದಿರುವ ಈ ಅಪರೂಪದ ವೈದ್ಯಕೀಯ ಸಾಹಸವು ಪ್ರಾಣಿ ಪ್ರಿಯರಲ್ಲಿ ಭಾರಿ ಸಂತಸ ಮೂಡಿಸಿದೆ. ಹಾಸನ ಜಿಲ್ಲೆಯಲ್ಲಿ ಭಾರೀ ತೊಂದರೆ ನಿಡುತ್ತಿದ್ದ ‘ಅಡ್ಕಬಡ್ಕ’ ಎಂಬ ಕಾಡಾನೆಯನ್ನು ಸೆರೆಹಿಡಿದು, ಸಕ್ರೇಬೈಲು ಬಿಡಾರಕ್ಕೆ ತಂದು ‘ದ್ರೋಣ’ ಎಂದು ಮರುನಾಮಕರಣ ಮಾಡಲಾಗಿತ್ತು. ಬಿಡಾರದ ಕ್ರಾಲ್‌ನಲ್ಲಿದ್ದಾಗ ಬಿದ್ದು ದ್ರೋಣನ ಎಡಗಾಲಿನ ಮೂಳೆ ಮುರಿದಿತ್ತು. ಸಾಮಾನ್ಯವಾಗಿ ಮೂಳೆ ಮುರಿದಾಗ ಬಳಸುವ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ ಬದಲು, ಅತ್ಯಂತ ಹಗುರವಾದ ಹಾಗೂ ಶಕ್ತಿಶಾಲಿ ತಂತ್ರಜ್ಞಾನವಾದ ‘ಫೈಬರ್ ಗ್ಲಾಸ್ ಕ್ಯಾಸ್ಟಿಂಗ್’ ಅನ್ನು ವೈದ್ಯರು ಪ್ರಯೋಗಿಸಿದರು. 30 ದಿನಗಳ ಕಾಲ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ಜೊತೆಗೆ ದಿನನಿತ್ಯ ಹೈಡ್ರೋ ಥೆರಪಿ ನೀಡುವುದರಿಂದ ಕಾಲು ಬೇಗ ಗುಣಮುಖವಾಗಲು ನೆರವಾಯಿತು. ತತ 4 ತಿಂಗಳ ಕಾಲ ಕ್ರಾಲ್‌ನಲ್ಲಿಟ್ಟು ತೀವ್ರ ಆರೈಕೆ ಮತ್ತು ಚಿಕಿತ್ಸೆ ನೀಡಿದ ಪರಿಣಾಮವಾಗಿ ದ್ರೋಣ ಆನೆಯು ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಪ್ರಸಿದ್ಧ ಪಶುವೈದ್ಯರಾದ ಡಾ. ಮುರಳಿ ಮನೋಹರ್ ಹಾಗೂ ಡಾ. ಮಹೇಶ್ ಅವರ ನೇತೃತ್ವದ ವೈದ್ಯಕೀಯ ತಂಡವು ಈ ಕ್ಲಿಷ್ಟಕರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಒಟ್ಟು ₹80,000 ವೆಚ್ಚದಲ್ಲಿ ಜರುಗಿದ ಈ ಅಪರೂಪದ ಚಿಕಿತ್ಸೆಯು ರಾಜ್ಯದ ವನ್ಯಜೀವಿ ಚಿಕಿತ್ಸಾ ರಂಗದಲ್ಲೇ ಹೊಸ ದಾಖಲೆ ಬರೆದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Yaraganavi
Basavaraj Yaraganavi