AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಓವರ್‌ ಆಕ್ಟಿಂಗ್, ಕ್ರಿಂಜ್’: ಟ್ರೋಲ್ ಮಾಡಿದವರ ಬಗ್ಗೆ ರಶ್ಮಿಕಾ ಮಾತು

ರಶ್ಮಿಕಾ ಮಂದಣ್ಣ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಪತಿ ವಿಜಯ್ ದೇವರಕೊಂಡ ಜೊತೆಗೆ ನಟಿಸಿರುವ ‘ರಣಬಾಲಿ’ ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಲಿದೆ. ಇದರ ನಡುವೆ ರಶ್ಮಿಕಾ ಬಗ್ಗೆ ಮತ್ತೆ ಟ್ರೋಲ್ ದಾಳಿ ಆರಂಭವಾಗಿದೆ. ರಶ್ಮಿಕಾ ಅನ್ನು ‘ಓವರ್ ಆಕ್ಟಿಂಗ್’, ‘ಕ್ರಿಂಜ್’ ಎಂದು ಕರೆಯಲಾಗುತ್ತಿದೆ. ಈ ಬಗ್ಗೆ ಖುದ್ದು ರಶ್ಮಿಕಾ ಮಾತನಾಡಿದ್ದಾರೆ.

‘ಓವರ್‌ ಆಕ್ಟಿಂಗ್, ಕ್ರಿಂಜ್’: ಟ್ರೋಲ್ ಮಾಡಿದವರ ಬಗ್ಗೆ ರಶ್ಮಿಕಾ ಮಾತು
Rashmika Mandanna
ಮಂಜುನಾಥ ಸಿ.
|

Updated on: Oct 07, 2026 | 1:30 PM

Share

ಮುಖ್ಯಾಂಶಗಳು

  • ರಶ್ಮಿಕಾ ನಟನೆಯ ‘ರಣಬಾಲಿ’ ರಿಲೀಸ್ ಆಗುತ್ತಿದೆ
  • ಇದರ ನಡುವೆ ರಶ್ಮಿಕಾ ಬಗ್ಗೆ ಟ್ರೋಲಿಂಗ್ ಆರಂಭವಾಗಿದೆ
  • ಟ್ರೋಲ್ ಮಾಡುವವರ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ

ರಶ್ಮಿಕಾ ಮಂದಣ್ಣ, ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಬ್ಯುಸಿ ಪ್ಯಾನ್ ಇಂಡಿಯಾ ನಟಿ. ಇದೇ ವರ್ಷ ಮುವೆ ಆಗಿರುವ ರಶ್ಮಿಕಾ ಪ್ರಸ್ತುತ ಸಾಲು ಸಾಲು ಸಿನಿಮಾಗಳೊಂದಿಗೆ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ನಟನಾ ವೃತ್ತಿಯನ್ನು ಆರಂಭಿಸಿದಾಗಿನಿಂದಲೂ ಟ್ರೋಲಿಂಗ್ ಭೂತ ಅವರ ಬೆನ್ನಿಗೆ ಬಿದ್ದಿದೆ. ನಾನಾ ಕಾರಣಗಳಿಗೆ ಅವರು ವರ್ಷಗಳಿಂದಲೂ ಟ್ರೋಲ್ ಆಗುತ್ತಲೇ ಬಂದಿದ್ದಾರೆ. ಚಿತ್ರರಂಗಕ್ಕೆ ಬಂದ ಇಷ್ಟು ವರ್ಷಗಳಲ್ಲಿ ಈ ಟ್ರೋಲ್​​, ಟೀಕೆ, ನಿಂದನೆಗಳನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದನ್ನು ಕಲಿತಂತಿರುವ ನಟಿ ರಶ್ಮಿಕಾ, ಇದೀಗ ಅದೇ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಪತಿ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸಿರುವ ಬಹುನಿರೀಕ್ಷಿತ ಪೀರಿಯಾಡಿಕ್ ಆಕ್ಷನ್ ಡ್ರಾಮಾ ಚಿತ್ರ ‘ರಣಬಾಲಿ’ ಬಿಡುಗಡೆಗೆ ಸಜ್ಜಾಗಿದೆ. ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 16ರಂದು ಈ ಸಿನಿಮಾ ತೆರೆಕಾಣಲಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳನ್ನು ತೀವ್ರಗೊಳಿಸಿದೆ. ಆದರೆ ಸಿನಿಮಾದ ಕಥೆ ಮತ್ತು ನಿರೀಕ್ಷೆಗಳಿಗಿಂತ ಹೆಚ್ಚಾಗಿ, ವಿಜಯ್ ಹಾಗೂ ರಶ್ಮಿಕಾ ನಡುವಿನ ವೈಯಕ್ತಿಕ ಒಡನಾಟ ಹಾಗೂ ಪ್ರಮೋಷನಲ್ ಇವೆಂಟ್‌ಗಳಲ್ಲಿ ರಶ್ಮಿಕಾ ಅವರ ಅತಿ ಹೆಚ್ಚು ಉತ್ಸಾಹ ಮತ್ತು ನಗು ಇಂಟರ್‌ನೆಟ್‌ನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.

ಪ್ರಚಾರದ ಸಂದರ್ಭಗಳಲ್ಲಿ ರಶ್ಮಿಕಾ ಮಂದಣ್ಣ ಅತ್ಯಂತ ಸರಳವಾಗಿ, ಉತ್ಸಾಹಭರಿತವಾಗಿ ಮತ್ತು ನಗುನಗುತ್ತಾ ಕಾಣಿಸಿಕೊಳ್ಳುವುದನ್ನು ಕೆಲವರು ಮೆಚ್ಚಿದರೆ, ಇನ್ನು ಕೆಲವರು ಇದನ್ನು ಟೀಕಿಸಿ, ‘ಓವರ್ ಆಕ್ಟಿಂಗ್, ಕ್ರಿಂಜ್, ನಕಲಿ ನಗು’ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ. ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾಗೆ ನೇರ ಪ್ರಶ್ನೆ ಎದುರಾದಾಗ, ‘ನಾನು ಎಲ್ಲೇ ಇದ್ದರೂ ಆ ವಾತಾವರಣವನ್ನು ಸದಾ ಸಮಾಧಾನ ಹಾಗೂ ಸಂತೋಷದಿಂದ ಕೂಡಿರುವಂತೆ ನೋಡಿಕೊಳ್ಳಲು ಇಷ್ಟಪಡುತ್ತೇನೆ, ಹಾಗಾಗಿಯೇ ನಾನು ಖುಷಿಯಿಂದ, ನಗು-ನಗುತ್ತಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:‘ಮೈಸಾ’ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದು ಹೇಗೆ?

‘ನನ್ನ ಜೊತೆ ಇರುವವರೊಂದಿಗೆ ನಗುತ್ತಾ, ಪ್ರೀತಿಯಿಂದ ಮಾತನಾಡುವುದು ತನ್ನ ಹುಟ್ಟುಗುಣ ಮತ್ತು ಸ್ವಾಭಾವಿಕ ಸ್ವಭಾವ’ ಎಂದು ರಶ್ಮಿಕಾ ಸ್ಪಷ್ಟಪಡಿಸಿದ್ದಾರೆ. ‘ನನ್ನ ಈ ವರ್ತನೆಯನ್ನು ಕೆಲವರು ‘ಓವರ್‌ ಆಕ್ಟಿಂಗ್’ ಅಥವಾ ‘ಕ್ರಿಂಜ್’ ಎಂದು ಟೀಕಿಸಿದರೂ, ಆ ಟೀಕೆಗಳನ್ನು ನಾನು ಎಂದಿಗೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಜಗತ್ತಿನಲ್ಲಿ ಎಲ್ಲರ ಮೆಚ್ಚುಗೆಯನ್ನು ಗಳಿಸುವುದು ಅಸಾಧ್ಯ, ನನಗೆ ಸರಿ ಎನಿಸಿದಂತೆ ಸಹಜವಾಗಿ ಬದುಕುವುದೇ ಮುಖ್ಯ. ಇತರರ ಟೀಕೆಗಳು ಮತ್ತು ಅಭಿಪ್ರಾಯಗಳಿಗಾಗಿ ತನ್ನ ಮೂಲ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ. ನನ್ನ ಕುಟುಂಬದವರು ಹಾಗೂ ಹತ್ತಿರದ ಸ್ನೇಹಿತರು ತಮ್ಮ ಈ ಧನಾತ್ಮಕ ಶಕ್ತಿ ಹಾಗೂ ಉತ್ಸಾಹವನ್ನು ಮೆಚ್ಚಿಕೊಳ್ಳುವುದರಿಂದ, ಸಮಾಜದ ಟೀಕೆಗಳಿಗೆ ಭಯಪಟ್ಟು ತಮ್ಮ ಸ್ವಭಾವವನ್ನು ಬದಲಿಸಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಅವರು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಟಿಸಿರುವ ‘ರಣಬಾಲಿ’ ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಲಿದೆ. ಅದರ ಜೊತೆಗೆ ‘ಮೈಸಾ’ ಸಿನಿಮಾನಲ್ಲಿ ನಟಿಸಿದ್ದು ಅದೂ ಸಹ ಇದೇ ವರ್ಷ ತೆರೆಗೆ ಬರಲಿದೆ. ಇವುಗಳ ಜೊತೆಗೆ ‘ರಾಕಾ’ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಬಳಿಕ ಕೆಲ ಹಿಂದಿ ಸಿನಿಮಾ ಮತ್ತು ತಮಿಳು ಸಿನಿಮಾಗಳಲ್ಲಿ ಸಹ ರಶ್ಮಿಕಾ ನಟನೆ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ