‘ಮೈಸಾ’ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದು ಹೇಗೆ?
ರಶ್ಮಿಕಾ ನಟಿಸಿದ್ದ ‘ಕಾಕ್ಟೇಲ್ 2’ ಸಿನಿಮಾ ಜೂನ್ ತಿಂಗಳಲ್ಲಿ ರಿಲೀಸ್ ಆಗಿತ್ತು. ಕೆಲವೇ ದಿನಗಳಲ್ಲಿ ಅವರು ಹಾಗೂ ಪತಿ ವಿಜಯ್ ದೇವರಕೊಂಡ ನಟಿಸಿರುವ ‘ರಣಬಾಲಿ’ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಅದಾದ ಬಳಿಕ ರಶ್ಮಿಕಾ ನಟಿಸಿರುವ ಮೊಟ್ಟ ಮೊದಲ ಆಕ್ಷನ್ ಸಿನಿಮಾ ‘ಮೈಸಾ’ ರಿಲೀಸ್ ಆಗಲಿದೆ. ಅಂದಹಾಗೆ ‘ಮೈಸಾ’ ಸಿನಿಮಾಕ್ಕೆ ರಶ್ಮಿಕಾ ಆಯ್ಕೆ ಆಗಿದ್ದು ಹೇಗೆ ಎಂಬುದನ್ನು ನಿರ್ದೇಶಕ ಹೇಳಿದ್ದಾರೆ.

ಮುಖ್ಯಾಂಶಗಳು
- ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾ ‘ಮೈಸಾ’
- ಆಕ್ಷನ್ ಸಿನಿಮಾ ‘ಮೈಸಾ’ನಲ್ಲಿ ರಶ್ಮಿಕಾ ನಾಯಕಿ
- ‘ಮೈಸಾ’ ಸಿನಿಮಾಕ್ಕೆ ರಶ್ಮಿಕಾ ಆಯ್ಕೆ ಆಗಿದ್ದು ಹೇಗೆ?
ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾಗಳು ಒಂದರ ಹಿಂದೊಂದು ರಿಲೀಸ್ ಆಗುತ್ತಿವೆ. ಶಾಹಿದ್, ಕೃತಿ ಒಟ್ಟಿಗೆ ರಶ್ಮಿಕಾ ನಟಿಸಿದ್ದ ‘ಕಾಕ್ಟೇಲ್ 2’ ಸಿನಿಮಾ ಜೂನ್ ತಿಂಗಳಲ್ಲಿ ರಿಲೀಸ್ ಆಗಿತ್ತು. ಕೆಲವೇ ದಿನಗಳಲ್ಲಿ ಅವರು ಹಾಗೂ ಪತಿ ವಿಜಯ್ ದೇವರಕೊಂಡ ನಟಿಸಿರುವ ‘ರಣಬಾಲಿ’ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಅದಾದ ಬಳಿಕ ರಶ್ಮಿಕಾ ನಟಿಸಿರುವ ಮೊಟ್ಟ ಮೊದಲ ಆಕ್ಷನ್ ಸಿನಿಮಾ ‘ಮೈಸಾ’ ರಿಲೀಸ್ ಆಗಲಿದೆ. ಅಂದಹಾಗೆ ‘ಮೈಸಾ’ ಸಿನಿಮಾಕ್ಕೆ ರಶ್ಮಿಕಾ ಆಯ್ಕೆ ಆಗಿದ್ದು ಹೇಗೆ ಎಂಬುದನ್ನು ನಿರ್ದೇಶಕ ಹೇಳಿದ್ದಾರೆ.
‘ಮೈಸಾ’ ಸಿನಿಮಾವನ್ನು ರವೀಂದ್ರ ಪುಲ್ಲೆ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಿನ ಸಂದರ್ಶನ ಒಂದರಲ್ಲಿ ಮಾತನಾಡಿರುವ ರವೀಂದ್ರ ಪುಲ್ಲೆ, ‘ಸೀತಾ ರಾಮಂ’ ಸಿನಿಮಾದಿಂದಾಗಿ ‘ಮೈಸಾ’ ಸಿನಿಮಾಕ್ಕೆ ರಶ್ಮಿಕಾರನ್ನು ಆಯ್ಕೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಬ್ಲಾಕ್ ಬಸ್ಟರ್ ಸಿನಿಮಾ ‘ಸೀತಾ ರಾಮಂ’ನಲ್ಲಿ ರಶ್ಮಿಕಾ ಸಹ ನಟಿಸಿದ್ದರು. ಆ ಸಿನಿಮಾನಲ್ಲಿ ರವೀಂದ್ರ ಪುಲ್ಲೆ ಸಹಾಯಕ ನಿರ್ದೇಶಕರಾಗಿದ್ದರು. ಜೊತೆಗೆ ಸಿನಿಮಾಕ್ಕೆ ಸಹಾಯಕ ಸಂಭಾಷಣೆಕಾರನಾಗಿ, ಸೆಕೆಂಡ್ ಯೂನಿಟ್ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದರಂತೆ.
‘ಸೀತಾ ರಾಮಂ’ ಸಿನಿಮಾ ವೇಳೆ ರಶ್ಮಿಕಾ ನಟಿಸಿದ ಕೆಲವು ದೃಶ್ಯಗಳ ಚಿತ್ರೀಕರಣವನ್ನು ರವೀಂದ್ರ ಪುಲ್ಲೆ ಮಾಡಿದ್ದರಂತೆ. ಆಗ ರಶ್ಮಿಕಾ ಹಾಗೂ ರವೀಂದ್ರ ಬಲು ಆಪ್ತರಾಗಿದ್ದರಂತೆ. ತಮಗೆ ರಶ್ಮಿಕಾ ಅವರ ಕಣ್ಣು ಬಲು ಇಷ್ಟ ಎಂದಿರುವ ರವೀಂದ್ರ, ‘ಸೀತಾ ರಾಮಂ’ ಚಿತ್ರೀಕರಣದ ಸಂದರ್ಭದಲ್ಲಿಯೇ ‘ನನ್ನ ಮೊದಲ ಸಿನಿಮಾಕ್ಕೆ ನೀವೇ ನಾಯಕಿ’ ಎಂದು ರಶ್ಮಿಕಾ ಬಳಿ ರವೀಂದ್ರ ಹೇಳಿದ್ದರಂತೆ. ಅದರಂತೆ ಅವರ ಮೊದಲ ಸಿನಿಮಾ ‘ಮೈಸಾ’ಕ್ಕೆ ರಶ್ಮಿಕಾ ಅವರನ್ನು ನಾಯಕಿಯನ್ನಾಗಿ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯ ‘ಮೈಸಾ’ ಟೀಸರ್ ರಿಲೀಸ್; ನಟಿಯ ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ
‘ಮೈಸಾ’ ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೆ ರಿಲೀಸ್ ಆಗಿದ್ದು, ರಶ್ಮಿಕಾ, ಬಲು ವಯಲೆಂಟ್ ಆದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕತ್ತಿ ಹಿಡಿದು, ಚುಚ್ಚುವುದು, ಕತ್ತರಿಸುವುದು ಮಾಡುತ್ತಿದ್ದಾರೆ. ರಶ್ಮಿಕಾರನ್ನು ಸಾಮಾನ್ಯವಾಗಿ ಕ್ಯೂಟ್ ಬ್ಯೂಟಿಯಾಗಿ ನೋಡಿರುವ ಅಭಿಮಾನಿಗಳಿಗೆ ‘ಮೈಸಾ’ ಸಿನಿಮಾದ ಅವರ ಅವತಾರ ಶಾಕ್ ನೀಡಿದೆ.
ರಶ್ಮಿಕಾ ಮಂದಣ್ಣ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ‘ರಣಬಾಲಿ’ ಅಕ್ಟೋಬರ್ನಲ್ಲಿ ರಿಲೀಸ್ ಆಗಲಿದೆ. ಅದಾದ ಬಳಿಕ ‘ಮೈಸಾ’ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್ ಜೊತೆಗೆ ‘ರಾಕಾ’ ಸಿನಿಮಾನಲ್ಲಿ ವಿಲನ್ ಆಗಿ ರಶ್ಮಿಕಾ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಹೊಸದಾಗಿ ಎರಡು ಸಿನಿಮಾ ಒಪ್ಪಿಕೊಂಡಿದ್ದಾರೆ. ಎಂಎಸ್ ಸುಬ್ಬಲಕ್ಷ್ಮಿ ಜೀವನ ಆಧರಿಸಿದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಅಜಿತ್ ನಟನೆಯ ಹೊಸ ಸಿನಿಮಾನಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




