AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾದಾತ್ಮಕ ಶೋನಲ್ಲಿ ಅತಿಥಿಗಳಾಗಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜಂಟಿಯಾಗಿ ಹಿಂದಿಯ ವಿವಾದಾತ್ಮಕ ಶೋ ‘ಕಾಫಿ ವಿತ್ ಕರಣ್’ನಲ್ಲಿ ಭಾಗಿ ಆಗಲಿದ್ದಾರೆ. ಈ ಹಿಂದೆಲ್ಲ ಸಾಕಷ್ಟು ವಿವಾದಗಳಿಗೆ ಈ ಶೋ ಕಾರಣವಾಗಿತ್ತು. ಅಕ್ಟೋಬರ್ 14ರಂದು ಈ ಶೋನ ಕೊನೆಯ ಸೀಸನ್ ಪ್ರಸಾರ ಆಗಲಿದ್ದು, ಸೀಸನ್ನಿನ ಮೊದಲ ಅತಿಥಿಗಳಾಗಿ ವಿಜಯ್ ದೇವಕರೊಂಡ ಮತ್ತು ರಶ್ಮಿಕಾ ಭಾಗವಹಿಸಲಿದ್ದಾರೆ.

ವಿವಾದಾತ್ಮಕ ಶೋನಲ್ಲಿ ಅತಿಥಿಗಳಾಗಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ
Rashmika Vijay
ಮಂಜುನಾಥ ಸಿ.
|

Updated on:Oct 06, 2026 | 1:23 PM

Share

ಮುಖ್ಯಾಂಶಗಳು

  • ವಿವಾದಾತ್ಮಕ ಶೋನಲ್ಲಿ ರಶ್ಮಿಕಾ-ವಿಜಯ್ ಭಾಗಿ
  • ‘ಕಾಫಿ ವಿತ್ ಕರಣ್’ಶೋನಲ್ಲಿ ಭಾಗವಹಿಸಲಿರುವ ರಶ್ಮಿಕಾ-ವಿಜಯ್
  • ರಶ್ಮಿಕಾ-ವಿಜಯ್ ನಟನೆಯ ‘ರಣಬಾಲಿ’ ಸಿನಿಮಾ ರಿಲೀಸ್ ಆಗಲಿದೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಟಾಲಿವುಡ್​​ನ ನವ ಜೋಡಿಗಳು. ಇಬ್ಬರೂ ಸಹ ಇದೇ ವರ್ಷ ಫೆಬ್ರವರಿಯಲ್ಲಿ ವಿವಾಹವಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದ ಜೋಡಿ ಈಗ ದಂಪತಿಗಳು. ಇಬ್ಬರೂ ಒಟ್ಟಿಗೆ ‘ರಣಬಾಲಿ’ ಸಿನಿಮಾನಲ್ಲಿ ನಟನೆ ಮಾಡಿದ್ದು, ಸಿನಿಮಾ ಇದೇ ತಿಂಗಳು 16ಕ್ಕೆ ರಿಲೀಸ್ ಆಗಲಿದೆ. ‘ರಣಬಾಲಿ’ ಮೂಲಕ ವಿಜಯ್ ದೇವರಕೊಂಡಗೆ ಹಿಟ್ ಸಿಗುವ ನಿರೀಕ್ಷೆ ಇದೆ. ಅಂದಹಾಗೆ ಇದೀಗ ಈ ಜೋಡಿ ಒಟ್ಟಿಗೆ ವಿವಾದಾತ್ಮಕ ಶೋ ಒಂದರಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಅದುವೇ ‘ಕಾಫಿ ವಿತ್ ಕರಣ್’.

ಬಾಲಿವುಡ್​​ನ ಜನಪ್ರಿಯ ನಿರ್ಮಾಪಕ, ನಿರ್ದೇಶಕ ಕರಣ್ ಜೊಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಹಲವು ಬಾರಿ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಇದೀಗ ಈ ಶೋನ ಕೊನೆಯ ಸೀಸನ್ ಪ್ರಸಾರ ಆಗಲಿದ್ದು, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಈ ಶೋನಲ್ಲಿ ಅತಿಥಿಗಳಾಗಿ ಭಾಗಿ ಆಗಿದ್ದಾರೆ. ಇಬ್ಬರು ಒಟ್ಟಿಗೆ ಭಾಗಿ ಆಗಿರುವ ಎಪಿಸೋಡಿನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಕೆಲವೇ ದಿನಗಳಲ್ಲಿ ಎಪಿಸೋಡ್ ಪ್ರಸಾರ ಸಹ ಆಗಲಿದೆ.

ಅಕ್ಟೋಬರ್ 14 ರಿಂದ ‘ಕಾಫಿ ವಿತ್ ಕರಣ್​’ ಹೊಸ ಸೀಸನ್ ಪ್ರಸಾರ ಆಗಲಿದ್ದು, ಮೊದಲ ಎಪಿಸೋಡಿನಲ್ಲೇ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರುಗಳು ಅತಿಥಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಲವ್ ಲೈಫ್, ದಾಂಪತ್ಯ, ಸಿನಿಮಾಗಳು, ವಿವಾದಗಳು ಹೀಗೆ ಹಲವು ವಿಷಯಗಳ ಬಗ್ಗೆ ಈ ಜೋಡಿ ಮಾತನಾಡಲಿದೆ. ಶೋನಲ್ಲಿ ಕರಣ್ ಜೋಹರ್ ವಿವಾದಾತ್ಮಕ ಪ್ರಶ್ನೆಗಳು, ಖಾಸಗಿ ಪ್ರಶ್ನೆಗಳನ್ನು ಕೇಳುವುದು ಹೆಚ್ಚು, ಆ ಪ್ರಶ್ನೆಗಳಿಗೆ ವಿಜಯ್ ಮತ್ತು ರಶ್ಮಿಕಾ ಹೇಗೆ ಉತ್ತರಿಸಲಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲ.

ಇದನ್ನೂ ಓದಿ:ಮಿಲಾನ್ ಫ್ಯಾಷನ್ ವೀಕ್​​​ನಲ್ಲಿ ಸಖತ್ತಾಗಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ

ವಿಜಯ್ ದೇವರಕೊಂಡ ಈ ಹಿಂದೆಯೇ ‘ಕಾಫಿ ವಿತ್ ಕರಣ್’ಶೋನಲ್ಲಿ ಭಾಗವಹಿಸಿದ್ದರು. ಏಳನೇ ಸೀಸನ್ನಿನ ನಾಲ್ಕನೇ ಎಪಿಸೋಡಿನಲ್ಲಿ ಅವರು ನಟಿ ಅನನ್ಯಾ ಪಾಂಡೆ ಜೊತೆಗೆ ಶೋನಲ್ಲಿ ಭಾಗಿ ಆಗಿದ್ದರು. ಆ ಸಮಯದಲ್ಲಿ ಅವರ ನಟನೆಯ ‘ಲೈಗರ್’ ಸಿನಿಮಾ ರಿಲೀಸ್​​ ಆಗಲಿತ್ತು. ಆ ಸಿನಿಮಾದ ಪ್ರಚಾರಕ್ಕಾಗಿ ಅವರು ‘ಕಾಫಿ ವಿತ್ ಕರಣ್’ನಲ್ಲಿ ಭಾಗಿ ಆಗಿದ್ದರು. ಆದರೆ ರಶ್ಮಿಕಾ ಮಂದಣ್ಣ ಈ ವರೆಗೂ ‘ಕಾಫಿ ವಿತ್ ಕರಣ್’ನಲ್ಲಿ ಭಾಗವಹಿಸಲಿಲ್ಲ. ಇದೇ ಮೊದಲ ಬಾರಿಗೆ ಅವರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜಂಟಿಯಾಗಿ ‘ರಣಬಾಲಿ’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಇದೊಂದು ಐತಿಹಾಸಿಕ ಕತೆಯುಳ್ಳ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ‘ದಿ ಮಮ್ಮಿ’, ‘ಏಜೆಂಟ್ ಕೋಡಿ ಬ್ಯಾಂಕ್ಸ್’ ಸೇರಿದಂತೆ ಹಲವು ಐಕಾನಿಕ ಹಾಲಿವುಡ್​ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿರುವ ಅರ್ನಾಲ್ಡ್ ವೋಸ್ಲೊ ನಟನೆ ಮಾಡಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಒಟ್ಟಿಗೆ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Tue, 6 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು