AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಸಮಂತಾ ಸೀಮಂತ ಶಾಸ್ತ್ರ; ಇಲ್ಲಿವೆ ಸುಂದರ ಫೋಟೋಸ್

ನಟಿ ಸಮಂತಾ ಅವರ ಸೀಮಂತ ಶಾಸ್ತ್ರವು ಸಂಪ್ರದಾಯಿಕ ಶೈಲಿಯಲ್ಲಿ ವಿಜೃಂಭಣೆಯಿಂದ ನೆರವೇರಿದೆ. ಹಳದಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಸಮಂತಾ, ಪೂಜಾ ವಿಧಿವಿಧಾನಗಳ ನಡುವೆ ಆಪ್ತರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಂಡಿದ್ದಾರೆ. ಈ ಸುಂದರ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ .

ರಾಜೇಶ್ ದುಗ್ಗುಮನೆ
|

Updated on: Sep 14, 2026 | 9:38 PM

Share
ಕುಟುಂಬದವರು ಸಮಂತಾಗೆ ಸೀಮಂತ ಶಾಸ್ತ್ರ ಮಾಡಿದ್ದಾರೆ. ಹಳದಿ-ಕಂದು ಬಣ್ಣದ  ಉಡುಪು ಧರಿಸಿರುವ ಸಮಂತಾ ಮಿಂಚಿದ್ದಾರೆ. ಅವರ ಕತ್ತಿನಲ್ಲಿ ಮಲ್ಲಿಗೆ ಹೂವಿನ ಹಾರ ಹಾಗೂ ಹಣೆಯಲ್ಲಿ ಅರಿಶಿನ-ಕುಂಕುಮ ಶೋಭಿಸುತ್ತಿದೆ.

1 / 6
ಹಳದಿ ಸೀರೆಯುಟ್ಟ ಆತ್ಮೀಯ ಗೆಳತಿಯ ಜೊತೆ ಸಮಂತಾ ನಗುಮೊಗದಿಂದ ಮಿಂಚಿದ್ದಾರೆ. ಮತ್ತೊಂದೆಡೆ, ಬಣ್ಣ ಬಣ್ಣದ ರಂಗೋಲಿ ಮಂಟಪದ ಮಧ್ಯಭಾಗದಲ್ಲಿ ಕುಳಿತು ಧಾರ್ಮಿಕ ಕಾರ್ಯ ನಡೆಸಿಕೊಟ್ಟಿದ್ದಾರೆ.

2 / 6
ಗರ್ಭಿಣಿ ಸಮಂತಾಗೆ ಮುತ್ತೈದೆಯರು ಸಾಂಪ್ರದಾಯಿಕವಾಗಿ ಅರಿಶಿನ ಹಚ್ಚಿ, ಗಾಜಿನ ಬಳೆಗಳನ್ನು ತೊಡಿಸಿ ಹಾರೈಸಿದ್ದಾರೆ. ಮಂಗಲಕರ ವಾತಾವರಣದಲ್ಲಿ ಶಾಂತವಾಗಿ ಕಣ್ಣು ಮುಚ್ಚಿ ಕುಳಿತಿರುವ ಸಮಂತಾ ಅವರ ಸೌಂದರ್ಯ ನೆರೆದವರ ಗಮನ ಸೆಳೆದಿದೆ.

3 / 6
ಸಮಂತಾ ಪತಿ ರಾಜ್ ನಿದಿಮೋರು ಪತ್ನಿ ಜೊತೆ ಪೋಸ್ ಕೊಟ್ಟಿದ್ದಾರೆ. ಮತ್ತೊಂದೆಡೆ ದೀಪ ಬೆಳಗಿ ಮುತ್ತೈದೆಯರು ಆಶೀರ್ವಾದದ ಹೂವುಗಳನ್ನು ಸುರಿಸುತ್ತಾ ಸಮಂತಾಗೆ ಮಂಗಳಾರತಿ ಎತ್ತುತ್ತಿದ್ದಾರೆ. ಹಳದಿ ಕಾಂಚೀವರಂ ರೇಷ್ಮೆ ಸೀರೆಯಲ್ಲಿ ಸಮಂತಾ ಕಂಗೊಳಿಸುತ್ತಿದ್ದಾರೆ.

4 / 6
ಸಮಂತಾ ಅವರಿಗೆ ಜಲಪ್ರೋಕ್ಷಣೆ ಮಾಡಿ ಆಶೀರ್ವದಿಸುವ ಶಾಸ್ತ್ರ ನಡೆಯುತ್ತಿದೆ. ಚೊಂಬಿನಿಂದ ಪವಿತ್ರ ನೀರನ್ನು ಧಾರೆ ಎರೆಯುವಾಗ ಸಮಂತಾ ಭಕ್ತಿಯಿಂದ ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದಾರೆ. ಮತ್ತೊಂದೆಡೆ ಸೀಮಂತದ ಪೂಜಾ ಮಂಟಪದಲ್ಲಿ ಬೆಳಗುತ್ತಿರುವ ಹಣತೆಗಳು, ಶ್ರೀಚಕ್ರ ಹಾಗೂ ಅರಿಶಿನ-ಕುಂಕುಮದಿಂದ ಅಲಂಕೃತಗೊಂಡ ಮಂಟಪದ ದೃಶ್ಯ ಆಧ್ಯಾತ್ಮಿಕ ಕಳೆಯನ್ನು ಹೆಚ್ಚಿಸಿದೆ.

5 / 6
ಸಮಂತಾ ಅವರು ಶೀಘ್ರವೇ ಮಗುವಿಗೆ ಜನ್ಮನೀಡುವ ಸಾಧ್ಯತೆ ಇದೆ. ಅವರಿಗೆ ಈ ಮೊದಲು ಮಗು ಹೊಂದುವ ಆಲೋಚನೆ ಇರಲಿಲ್ಲ.

6 / 6
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Follow Us
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR

ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು

ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ

ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ

ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ

ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ

ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!

ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ

ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು

ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು