ಮಂಜು ಮಾಡಿದ ತಪ್ಪಿಗೆ ಇಡೀ ಮನೆಗೆ ಶಿಕ್ಷೆ; ನಗುತ್ತಾ ಎಲ್ಲರನ್ನೂ ಹಂಗಿಸಿದ ಮಾಡರ್ನ್ ಮಹಾಕವಿ
ಬಿಗ್ ಬಾಸ್ ಮನೆಯ 'ನಿಶ್ಶಬ್ದ' ಟಾಸ್ಕ್‌ನಲ್ಲಿ ಕಾವ್ಯ ಮತ್ತು ಮಂಜುನಾಥ್ ನಿಯಮ ಉಲ್ಲಂಘಿಸಿ ಆಟದಿಂದ ಅನರ್ಹಗೊಂಡಿದ್ದಾರೆ. ಈ ತಪ್ಪಿಗಾಗಿ ಬಿಗ್ ಬಾಸ್ ಇಡೀ ಮನೆಯ ವಾರದ ರೇಷನ್‌ನಲ್ಲಿ 50% ಕಟ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಮನೆಯವರ ಮಾತುಗಳಿಂದ ಮಂಜುನಾಥ್ ಕಣ್ಣೀರಿಟ್ಟಂತೆ ನಾಟಕ ಮಾಡಿದ್ದಾರೆ.

ಮುಖ್ಯಾಂಶಗಳು
- 'ನಿಶ್ಶಬ್ದ' ಟಾಸ್ಕ್‌ನಲ್ಲಿ ಎಡವಟ್ಟು
- ಆಟದಿಂದ ಕಾವ್ಯ-ಮಂಜು ಡಿಸ್ಕ್ವಾಲಿಫೈ
- ದೊಡ್ಮನೆಗೆ ಬಿಗ್ ಬಾಸ್ ಕಠಿಣ ಶಿಕ್ಷೆ
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಗ್ರೋಸರಿ ಪಡೆಯಲು ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಆಟದಲ್ಲಿ, ನೀಡಲಾದ ದಾರಿಯಲ್ಲಿ ಯಾವುದೇ ಶಬ್ದವಾಗದಂತೆ ಸಾಗಬೇಕು. ಸಾಗುವ ದಾರಿಯಲ್ಲಿ ಸಾಲು ಸಾಲಾಗಿ ಇಡಲಾದ ವಸ್ತುಗಳು ಮತ್ತು ಗಂಟೆಗಳಿಗೆ ತಾಗದಂತೆ ಎಚ್ಚರಿಕೆಯಿಂದ ವಹಿಸಬೇಕು. ನಂತರ ಅಂತಿಮ ಸ್ಥಾನಕ್ಕೆ ತಲುಪಿ ಬಜರ್ ಒತ್ತಬೇಕಾಗಿತ್ತು. ಪ್ರತಿಯೊಂದು ಸಣ್ಣ ತಪ್ಪು ಹಾಗೂ ಶಬ್ದಕ್ಕೂ ಕಪ್ಪುಹಲಗೆಯ ಮೇಲೆ ಮಾರ್ಕ್ ಹಾಕಿ ನಿಯಮ ಪಾಲನೆಯನ್ನು ಕಟ್ಟುನಿಟ್ಟಾಗಿ ವೀಕ್ಷಿಸಲಾಗುತ್ತಿತ್ತು.
ಆದರೆ ಈ ಟಾಸ್ಕ್‌ನಲ್ಲಿ ಭಾಗವಹಿಸಿದ ಕಾವ್ಯ ಹಾಗೂ ಮಂಜುನಾಥ್ ಅವರು ಸಾಲಿನಿಂದ ಹೊರಗೆ ಕಾಲಿಟ್ಟು, ಶಬ್ದ ಮಾಡಿ ನಿಯಮಗಳನ್ನು ಉಲ್ಲಂಘಿಸಿದರು. ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಗ್ ಬಾಸ್, ಕಾವ್ಯ ಮತ್ತು ಮಂಜುನಾಥ್ ಅವರ ಆಟವನ್ನು ಅನರ್ಹಗೊಳಿಸಿ ಆದೇಶಿಸಿದರು. ಈ ನಿರ್ಧಾರದಿಂದ ಇಡೀ ದೊಡ್ಮನೆ ಸದಸ್ಯರಿಗೆ ದೊಡ್ದ ಆಘಾತ ಕಾದಿತ್ತು.
ಸ್ಪರ್ಧಿಗಳ ಈ ತಪ್ಪಿನಿಂದಾಗಿ ಬಿಗ್ ಬಾಸ್ ಇಡೀ ಮನೆಗೆ ಕಠಿಣ ಶಿಕ್ಷೆಯನ್ನು ವಿಧಿಸಿದರು. ಈ ವಾರದ ದಿನಸಿ ಸಾಮಗ್ರಿಗಳಲ್ಲಿ ಶೇಕಡಾ 50% ರಷ್ಟು ಸಾಮಗ್ರಿಗಳನ್ನು ಬಿಗ್ ಬಾಸ್ ಕಟ್ ಮಾಡಿ ಮುಟ್ಟುಗೋಲು ಹಾಕಿಕೊಂಡರು. ಇದರಿಂದ ಮನೆಯ ವಾರದ ರೇಷನ್ ಶೇಕಡ ಅರ್ಧದಷ್ಟು ಕಡಿಮೆಯಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕುವಂತಾಯಿತು.
View this post on Instagram
ಈ ಕಠಿಣ ಶಿಕ್ಷೆಯ ನಂತರ ಮನೆಯಲ್ಲಿ ತೀವ್ರ ಆಕ್ರೋಶ ಮತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು. ಆದರೆ, ಮಂಜು ಮಾತ್ರ ನಗುತ್ತಾ ಇದ್ದರು. ‘ನಿನ್ನ ಕಡೆಯಿಂದ ನಮಗೆ ಸಿಗಬೇಕಿದ್ದ ಎಲ್ಲಾ ಊಟ ಹೊರಟುಹೋಯಿತು, ಆ ಅಪರಾಧಪ್ರಜ್ಞೆ ನಿನ್ನಲ್ಲಿ ಇರಲಿ’ ಎಂದು ಸಹ-ಸ್ಪರ್ಧಿಗಳು ಮಂಜುನಾಥ್ ವಿರುದ್ಧ ಕಿಡಿಕಾರಿದರು. ಇದರಿಂದ ಮಂಜುನಾಥ್ ಕಣ್ಣೀರು ಇಡುವಂತೆ ನಾಟಕ ಮಾಡಿದರು. ಅವರು ಮತ್ತೆ ಹಳೆಯ ಫಾರ್ಮ್ಗೆ ಮರಳಿರೋ ಸಾಧ್ಯತೆ ಇದೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಸೋತು ಖತ್ರೋನ್ ಕೆ ಖಿಲಾಡಿ ಟ್ರೋಫಿ ಗೆದ್ದ ಅವಿನಾಶ್ ಮಿಶ್ರಾ; ಸಿಕ್ಕ ಹಣ ಎಷ್ಟು?
ಒಟ್ಟಿನಲ್ಲಿ ಒಂದು ಸಣ್ಣ ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆ ಆಹಾರದ ಅಭಾವ ಎದುರಿಸುವಂತಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಮನೆಯಲ್ಲಿ ಎಷ್ಟರ ಮಟ್ಟಿಗೆ ಕಿಚ್ಚು ಹೊತ್ತಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:38 am, Mon, 5 October 26




