AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿ ಸೋತು ಖತ್ರೋನ್ ಕೆ ಖಿಲಾಡಿ ಟ್ರೋಫಿ ಗೆದ್ದ ಅವಿನಾಶ್ ಮಿಶ್ರಾ; ಸಿಕ್ಕ ಹಣ ಎಷ್ಟು?

ಸಾಹಸಮಯ ರಿಯಾಲಿಟಿ ಶೋ 'ಖತರೋನ್ ಕೆ ಖಿಲಾಡಿ 15' ಟ್ರೋಫಿಯನ್ನು ಟಿವಿ ನಟ ಅವಿನಾಶ್ ಮಿಶ್ರಾ ಗೆದ್ದುಕೊಂಡಿದ್ದಾರೆ. ಫೈನಲ್‌ನಲ್ಲಿ ರಿತ್ವಿಕ್ ಧಂಜಾನಿ ಹಾಗೂ ಓರಿಯವರನ್ನು ಸೋಲಿಸಿದ ಅವರಿಗೆ 20 ಲಕ್ಷ ರೂಪಾಯಿ ನಗದು, ಯುರೋಪ್ ಪ್ರವಾಸ ಮತ್ತು ಹೊಸ ಕಾರು ಸಿಕ್ಕಿದೆ. ಶೋನಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಬಿಗ್ ಬಾಸ್​ನಲ್ಲಿ ಸೋತು ಖತ್ರೋನ್ ಕೆ ಖಿಲಾಡಿ ಟ್ರೋಫಿ ಗೆದ್ದ ಅವಿನಾಶ್ ಮಿಶ್ರಾ; ಸಿಕ್ಕ ಹಣ ಎಷ್ಟು?
ಅವಿನಾಶ್ ಮಿಶ್ರ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 05, 2026 | 7:55 AM

Share

ರೋಹಿತ್ ಶೆಟ್ಟಿ ನಿರೂಪಣೆಯ ಖತ್ರೋನ್ ಕೆ ಖಿಲಾಡಿ ಸೀಸನ್ 15 ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಬಾರಿಯ ಕಠಿಣ ಸಾಹಸಮಯ ಆಟದಲ್ಲಿ ಕಿರುತೆರೆ ನಟ ಅವಿನಾಶ್ ಮಿಶ್ರಾ ವಿಜೇತರಾಗಿ ಹೊರಹೊಮ್ಮಿದ್ದಾರೆ. ತಮ್ಮ ಅದ್ಭುತ ಸಾಹಸಗಳ ಮೂಲಕ ಅವರು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವೀಕ್ಷಕರ ಮನ ಗೆದ್ದ ಅವರಿಗೆ ಈಗ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಫೈನಲ್ ಹಂತದಲ್ಲಿ ಅವಿನಾಶ್ ಮಿಶ್ರಾ ಅವರು ರಿತ್ವಿಕ್ ಧಂಜಾನಿ ಮತ್ತು ಓರಿಯವರನ್ನು ಸೋಲಿಸಿದರು. ವಿಜೇತರಾದ ಅವರಿಗೆ 20 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ಇದರ ಜೊತೆಗೆ ಯುರೋಪ್ ಪ್ರವಾಸಕ್ಕೆ ಸ್ಪಾನ್ಸರ್ ಮತ್ತು ಹೊಸ ಕಾರು ಲಭಿಸಿದೆ. ರನ್ನರ್ ಅಪ್‌ಗಳಿಗೂ ಬೈಕ್ ಬಹುಮಾನವಾಗಿ ದೊರೆತಿದೆ.

ಗೆಲುವಿನ ನಂತರ ಮಾತನಾಡಿದ ಅವಿನಾಶ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ‘ಈ ಶೋ ನನಗೆ ನನ್ನನ್ನೇ ಸಾಬೀತುಪಡಿಸಲು ದೊಡ್ಡ ವೇದಿಕೆಯಾಯಿತು. ಕೇವಲ ಶಾರೀರಿಕ ಬಲವಲ್ಲದೆ ಮಾನಸಿಕ ಧೈರ್ಯ ಇಲ್ಲಿ ಮುಖ್ಯವಾಗಿತ್ತು. ನನ್ನ ಮೇಲಿದ್ದ ಭಯವನ್ನು ಗೆದ್ದು ನಾನು ಈ ಮಟ್ಟಕ್ಕೆ ಬಂದಿದ್ದೇನೆ’ ಎಂದು ಅವರು ಹೇಳಿದರು.

ಅವಿನಾಶ್ ಶೋನಲ್ಲಿ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರು. ಅವರು ಯಾವುದೇ ಟಾಸ್ಕ್ ಅನ್ನು ಅರ್ಧಕ್ಕೆ ಕೈಬಿಡಲಿಲ್ಲ. ‘ಸ್ವಿಫ್ಟ್ ಇಮ್ಯುನಿಟಿ ಜಾಕೆಟ್’ ಪಡೆದು ತಮ್ಮ ಶಕ್ತಿಯನ್ನು ಸಾಬೀತುಪಡಿಸಿದ್ದರು. ಕರಣ್ ವಾಹಿ ಹಾಗೂ ಫರ್ಹಾನಾ ಅವರಿಂದ ಅವರಿಗೆ ಪ್ರಬಲ ಸ್ಪರ್ಧೆ ಎದುರಾಗಿತ್ತು.

ಇದನ್ನೂ ಓದಿ: ಗಗನ್-ಸೌಂದರ್ಯಾ ಮಧ್ಯೆ ಲವ್ ಟ್ರ್ಯಾಕ್? ಫುಲ್ ಟೆನ್ಶ್​​ಗೆ ಒಳಗಾದ ಶೆಟ್ಟಿ ಡಾನ್

ಕಿರುತೆರೆಯಲ್ಲಿ ಒಂದು ದಶಕದಿಂದ ಸಕ್ರಿಯರಾಗಿರುವ ಅವಿನಾಶ್ ಈ ಹಿಂದೆ ಡಿಜೆ ಆಗಿದ್ದರು. ‘ಸೇಠ್‌ಜಿ’ ಹಾಗೂ ‘ಇಷ್ಕ್‌ಬಾಜ್’ ಧಾರಾವಾಹಿಗಳ ಮೂಲಕ ಅವರು ಹೆಸರು ಮಾಡಿದ್ದರು. ನಂತರ ‘ಬಿಗ್ ಬಾಸ್ 18’ ರಿಯಾಲಿಟಿ ಶೋನಲ್ಲೂ ಭಾಗವಹಿಸಿ ನಾಲ್ಕನೇ ಸ್ಥಾನ ಪಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್