AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನ್-ಸೌಂದರ್ಯಾ ಮಧ್ಯೆ ಲವ್ ಟ್ರ್ಯಾಕ್? ಫುಲ್ ಟೆನ್ಶ್​​ಗೆ ಒಳಗಾದ ಶೆಟ್ಟಿ ಡಾನ್

ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯಾ ಹಾಗೂ ಗಗನ್ ನಡುವೆ ಪ್ರೇಮ ಕಥೆ ಹಬ್ಬಿದೆ ಎಂಬ ವದಂತಿ ಗಾಸಿಪ್‌ಗೆ ಕಾರಣವಾಗಿದೆ. ಆದರೆ ಈ ವಿಚಾರವಾಗಿ ಸೌಂದರ್ಯಾ ಸ್ಪಷ್ಟನೆ ನೀಡಿದ್ದು, ತಮ್ಮಿಬ್ಬರ ನಡುವೆ ಇರುವುದು ಕೇವಲ ಗೆಳೆತನ ಮಾತ್ರ ಎಂದಿದ್ದಾರೆ. ಯಶಸ್ ಹಾಗೂ ಆಸಿಯಾ ಈ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗಗನ್-ಸೌಂದರ್ಯಾ ಮಧ್ಯೆ ಲವ್ ಟ್ರ್ಯಾಕ್? ಫುಲ್ ಟೆನ್ಶ್​​ಗೆ ಒಳಗಾದ ಶೆಟ್ಟಿ ಡಾನ್
ಸೌಂದರ್ಯಾ-ಗಗನ್
ರಾಜೇಶ್ ದುಗ್ಗುಮನೆ
|

Updated on: Oct 05, 2026 | 7:39 AM

Share

ಮುಖ್ಯಾಂಶಗಳು

  • ದೊಡ್ಮನೆಯಲ್ಲಿ ಹೊಸ ಲವ್ ಟ್ರ್ಯಾಕ್ ಗಾಸಿಪ್
  • ಗಗನ್ ಜೊತೆ ಹೆಸರು ಕೇಳಿಬರುತ್ತಿದ್ದಂತೆ ಸೌಂದರ್ಯಾ ಟೆನ್ಶನ್
  • ಯಶಸ್ ಗೌಡ ಬಳಿಕ ಗಗನ್ ಹೆಸರು ಮುಂಚೂಣಿಗೆ

‘ಬಿಗ್ ಬಾಸ್’ ಮನೆಯಲ್ಲಿ ಲವ್ ಟ್ರ್ಯಾಕ್​ಗಳು ಹುಟ್ಟಿಕೊಂಡರೆ ಯಾರಿಗೂ ಅಚ್ಚರಿ ಆಗೋದಿಲ್ಲ. ಕೆಲವು ಲವ್​ ಸ್ಟೋರಿಗಳು ನಿಜಕ್ಕೂ ಸೃಷ್ಟಿಯಾದರೆ, ಇನ್ನೂ ಕೆಲವು ಆಟಕ್ಕೆ ಮೈಲೇಜ್ ಪಡೆಯಲು ಮಾತ್ರ ಆಗಿರುತ್ತದೆ. ಇನ್ನೂ ಕೆಲವು ವದಂತಿ ರೂಪದಲ್ಲಿ ಸೃಷ್ಟಿ ಆಗುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಗಗನ್ ಹಾಗೂ ಸೌಂದರ್ಯಾ ಮಧ್ಯೆ ಏನೋ ಇದೆ ಎಂಬ ವದಂತಿ ಜೋರಾಗಿದೆ. ಇದಕ್ಕೆ ಸೌಂದರ್ಯಾ ಟೆನ್ಶನ್ ಅಲ್ಲೇ ಸ್ಪಷ್ಟನೆ ನೀಡಿದ್ದಾರೆ.

ಸೌಂದರ್ಯಾ ಈ ಮೊದಲು ಕೆಲವು ರಿಯಾಲಿಟಿ ಶೋ ಮಾಡಿ ಬಂದಿದ್ದಾರೆ. ಅಲ್ಲಿ ಅವರು ಸಖತ್ ಅಗ್ರೆಸ್ಸಿವ್ ಆಗಿ ನಡೆದುಕೊಂಡಿದ್ದರು. ಆದರೆ, ಬಿಗ್ ಬಾಸ್ ಮನೆಯಲ್ಲಿ ಅವರು ವೆಕೇಶನ್ ಮೂಡ್​ನಲ್ಲಿ ಇದ್ದಾರೆ. ಇಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಇದರ ಜೊತೆ ಕೆಲವು ಲವ್​ ಟ್ರ್ಯಾಕ್​ಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.

ಸೌಂದರ್ಯಾ ಅವರು ಯಶಸ್​ ಗೌಡ ಜೊತೆ ತುಂಬಾನೇ ಕ್ಲೋಸ್ ಆಗಿ ಮೂವ್ ಮಾಡುತ್ತಿದ್ದಾರೆ. ಅವರು ಲವ್ ಟಾಕ್ ಕೂಡ ಮಾಡಿದ್ದಾರೆ. ಮದುವೆ ಹಾಗೂ ಮಕ್ಕಳ ವಿಷಯ ಚರ್ಚೆಗೆ ಬಂದಿದೆ. ಇತ್ತೀಚೆಗೆ ಯಶಸ್ ಶೆಟ್ಟಿ ಎಂದು ಸೌಂದರ್ಯಾ ಕರೆದರೆ, ಸೌಂದರ್ಯಾ ಗೌಡ ಎಂದು ಯಶಸ್ ಕರೆದಿದ್ದಾರೆ. ಈಗ ಗ್ಯಾಪ್​​ನಲ್ಲಿ ಗಗನ್ ಹೆಸರು ಕೂಡ ಮುಂಚೂಣಿಗೆ ಬಂದಿದೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ

ಸೌಂದರ್ಯಾ ಶೆಟ್ಟಿ ಹಾಗೂ ಗಗನ್ ಮಧ್ಯೆ ಏನೋ ನಡೆಯುತ್ತಿದೆ ಎಂಬ ಗಾಸಿಪ್ ಹಬ್ಬಿದೆ. ಇದಕ್ಕೆ ಕಾರಣ ಆಸಿಯಾ-ಯಶಸ್ ಎಂಬುದು ಸೌಂದರ್ಯಾ ಆರೋಪ. ‘ನಿಮ್ಮ ಹಾಗೂ ಗಗನ್ ಮಧ್ಯೆ ಏನು ನಡೆಯುತ್ತಿದೆ ಎಂದು ಯಶಸ್ ಪದೇ ಪದೇ ಬಂದು ಕೇಳುತ್ತಿದ್ದರು’ ಎಂದು ಸೌಂದರ್ಯಾ ಶೆಟ್ಟಿ ಬೇಸರ ಮಾಡಿಕೊಂಡಿದ್ದಾರೆ. ಅವರಿಗೆ ಈ ರೀತಿಯ ವದಂತಿ ಹಬ್ಬಿದ್ದು ಕೊಂಚವೂ ಇಷ್ಟ ಇಲ್ಲ. ನಮ್ಮಿಬ್ಬರ ಮಧ್ಯೆ ಇರೋದು ಗೆಳೆತನ ಮಾತ್ರ ಎಂದು ಸ್ಪಷ್ಟನೆ ನೀಡಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್