AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಗಣೆ ಕಾಟದಿಂದ ರೋಸಿ ಹೋದ ಹಾಸ್ಟೆಲ್ ವಿದ್ಯಾರ್ಥಿಗಳು: ಕೊಪ್ಪಳಕ್ಕೆ ಬಂದು ಮದ್ದು ನೀಡಿದ ಚೆನ್ನೈ ತಜ್ಞರು

ತಿಗಣೆ ಕಾಟದಿಂದ ರೋಸಿ ಹೋದ ಹಾಸ್ಟೆಲ್ ವಿದ್ಯಾರ್ಥಿಗಳು: ಕೊಪ್ಪಳಕ್ಕೆ ಬಂದು ಮದ್ದು ನೀಡಿದ ಚೆನ್ನೈ ತಜ್ಞರು

ಶಿವಕುಮಾರ್ ಪತ್ತಾರ್
| Edited By: |

Updated on:Sep 15, 2026 | 6:10 PM

Share

ಕೊಪ್ಪಳದ ಪರಿಶಿಷ್ಠ ಪಂಗಡ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳು ತಿಗಣೆ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ತಿಗಣಿಗಳ ಕಾಟಕ್ಕೆ ರಾತ್ರಿ ಓದಲು, ಮಲಗಲು ಆಗುತ್ತಿಲ್ಲ. ಇದರಿಂದ ಕೊನೆಗೆ ಅಧಿಕಾರಿಗಳು ತಿಗಣೆಗೆ ಸ್ಪ್ರೇ ಮಾಡಿಸಲು ಹಾಸ್ಟೆಲ್ ಗೆ ರಜೆ ನೀಡಿದ್ದಾರೆ. ಹೌದು...ಶನಿವಾರ, ಭಾನುವಾರ ಹಾಗೂ ಸೋಮವಾರ ಗಣೇಶ ಹಬ್ಬದ ಇರುವುದರಿಂದ ಹಾಸ್ಟೆಲ್​​ಗೆ ರಜೆ ನೀಡಿ ವಿದ್ಯಾರ್ಥಿಗಳನ್ನು ಅವರ ಊರಿಗೆ ಕಳುಹಿಸಿದ್ದು, ಇತ್ತ ಚೆನ್ನೈನಿಂದ ಸ್ಪ್ರೇ ಮಾಡಲು ತಜ್ಞರನ್ನು ಕರೆತಂದಿದ್ದು, ಇಡೀ ಹಾಸ್ಟೆಲ್​​​ಗೆ ತಿಗಣಿ ಔಷಧಿಯನ್ನು ಸಿಂಪಡಿಸಿದ್ದಾರೆ

ಕೊಪ್ಪಳ, (ಸೆಪ್ಟೆಂಬರ್ 15): ಕೊಪ್ಪಳದ ಪರಿಶಿಷ್ಠ ಪಂಗಡ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳು ತಿಗಣೆ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ತಿಗಣಿಗಳ ಕಾಟಕ್ಕೆ ರಾತ್ರಿ ಓದಲು, ಮಲಗಲು ಆಗುತ್ತಿಲ್ಲ. ಇದರಿಂದ ಕೊನೆಗೆ ಅಧಿಕಾರಿಗಳು ತಿಗಣೆಗೆ ಸ್ಪ್ರೇ ಮಾಡಿಸಲು ಹಾಸ್ಟೆಲ್ ಗೆ ರಜೆ ನೀಡಿದ್ದಾರೆ. ಹೌದು…ಶನಿವಾರ, ಭಾನುವಾರ ಹಾಗೂ ಸೋಮವಾರ ಗಣೇಶ ಹಬ್ಬದ ಇರುವುದರಿಂದ ಹಾಸ್ಟೆಲ್​​ಗೆ ರಜೆ ನೀಡಿ ವಿದ್ಯಾರ್ಥಿಗಳನ್ನು ಅವರ ಊರಿಗೆ ಕಳುಹಿಸಿದ್ದು, ಇತ್ತ ಚೆನ್ನೈನಿಂದ ಸ್ಪ್ರೇ ಮಾಡಲು ತಜ್ಞರನ್ನು ಕರೆತಂದಿದ್ದು, ಇಡೀ ಹಾಸ್ಟೆಲ್​​​ಗೆ ತಿಗಣಿ ಔಷಧಿಯನ್ನು ಸಿಂಪಡಿಸಿದ್ದಾರೆ. ಸುಮಾರು 200 ರಿಂದ 300 ವಿದ್ಯಾರ್ಥಿಗಳು ಇರೋ ವಸತಿ ನಿಲಯ ಇದಾಗಿದ್ದು, ಹಬ್ಬದ ಹಿನ್ನಲೆ ವಿದ್ಯಾರ್ಥಿಗಳಿಗೆ 12 ರಿಂದ 15 ರವರೆಗೂ ರಜೆ ನೀಡಿ ತಿಗಣೆಗೆ ಸ್ಪ್ರೇ ಮಾಡಿಸಿದ್ದಾರೆ. ಸೂಚನೆಯಂತೆ ಇಂದು (ಸೆ.16) ಹಾಸ್ಟೆಲ್ ಪ್ರಾರಂಭವಾಗಬೇಕಿತ್ತು. ಆದ್ರೆ, ಇನ್ನೂ ಸ್ವಚ್ಛೆತೆ ಕಾರ್ಯ ಮುಗಿದಿಲ್ಲ. ವಸತಿ ನಿಲಯದಲ್ಲಿದ್ದ ಹಳೆ ಬೆಡ್ ಗಳನ್ನೆಲ್ಲ ಸುಟ್ಟು ಹಾಕಿ ಹೊಸ ಬೆಡ್ ವ್ಯವಸ್ಥೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 15, 2026 06:10 PM

Follow Us