AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತೀಶ್‌ ಜಾರಕಿಹೊಳಿ ಕೇಸ್: ಅಧಿಕಾರಿಗಳಿಗೆ ಇಡಿ ನಿರ್ದೇಶಕ ಖಡಕ್ ಸೂಚನೆ

ಸತೀಶ್‌ ಜಾರಕಿಹೊಳಿ ಕೇಸ್: ಅಧಿಕಾರಿಗಳಿಗೆ ಇಡಿ ನಿರ್ದೇಶಕ ಖಡಕ್ ಸೂಚನೆ

ಕಿರಣ ಹೆಚ್​. ವಿ.
| Edited By: |

Updated on:Sep 15, 2026 | 4:23 PM

Share

ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ನಡೆದ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದೆ. 3 ಕೋಟಿ ರೂಪಾಯಿಗೂ ಹೆಚ್ಚು ನಗದು, ವಿದೇಶಿ ಕರೆನ್ಸಿ, ವಿದೇಶಿ ಹೂಡಿಕೆ ಹಾಗೂ ಲೋಕೋಪಯೋಗಿ ಟೆಂಡರ್‌ಗಳಲ್ಲಿನ ಕಿಕ್‌ಬ್ಯಾಕ್ ಆರೋಪಗಳ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ.ಇನ್ನು ಈ ಪ್ರಕರಣದ ದಾಖಲೆಗಳನ್ನು ಎಲ್ಲೂ ಸೋರಿಕೆ ಮಾಡದಂತೆ ಇಡಿ ನಿರ್ದೇಶಕ ರಾಹುಲ್ ನವೀನ್ ಖ ತಮ್ಮ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಈವರೆಗೆ ಎಷ್ಟು ಗುತ್ತಿಗೆ ಕೊಟ್ಟಿದ್ದಾರೆ? ಗುತ್ತಿಗೆ ಪಡೆದವರು ಹಾಗೂ ಸತೀಶ್​ ಜಾರಕಿಹೊಳಿಗೆ ಏನು ಸಂಬಂಧ? ಯಾರ್ಯಾರಿಗೆ ಗುತ್ತಿಗೆ ಕೊಟ್ಟಿದ್ದಾರೆ ಎಂಬ ಮಾಹಿತಿ ಕಲೆ ಹಾಕಿ. ಹಾಗೇ ರಾಜಕೀಯ ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಷ್ಪಕ್ಷಪಾತವಾಗಿ ಸಿಕ್ಕಿರುವ ಮಾಹಿತಿ ಆಧರಿಸಿ ಮುಂದಿನ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್ 15): ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ನಡೆದ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದೆ. 3 ಕೋಟಿ ರೂಪಾಯಿಗೂ ಹೆಚ್ಚು ನಗದು, ವಿದೇಶಿ ಕರೆನ್ಸಿ, ವಿದೇಶಿ ಹೂಡಿಕೆ ಹಾಗೂ ಲೋಕೋಪಯೋಗಿ ಟೆಂಡರ್‌ಗಳಲ್ಲಿನ ಕಿಕ್‌ಬ್ಯಾಕ್ ಆರೋಪಗಳ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ.ಇನ್ನು ಈ ಪ್ರಕರಣದ ದಾಖಲೆಗಳನ್ನು ಎಲ್ಲೂ ಸೋರಿಕೆ ಮಾಡದಂತೆ ಇಡಿ ನಿರ್ದೇಶಕ ರಾಹುಲ್ ನವೀನ್ ಖ ತಮ್ಮ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಈವರೆಗೆ ಎಷ್ಟು ಗುತ್ತಿಗೆ ಕೊಟ್ಟಿದ್ದಾರೆ? ಗುತ್ತಿಗೆ ಪಡೆದವರು ಹಾಗೂ ಸತೀಶ್​ ಜಾರಕಿಹೊಳಿಗೆ ಏನು ಸಂಬಂಧ? ಯಾರ್ಯಾರಿಗೆ ಗುತ್ತಿಗೆ ಕೊಟ್ಟಿದ್ದಾರೆ ಎಂಬ ಮಾಹಿತಿ ಕಲೆ ಹಾಕಿ. ಹಾಗೇ ರಾಜಕೀಯ ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಷ್ಪಕ್ಷಪಾತವಾಗಿ ಸಿಕ್ಕಿರುವ ಮಾಹಿತಿ ಆಧರಿಸಿ ಮುಂದಿನ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 15, 2026 04:22 PM

Follow Us