ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಗರಂ
ಮಂಗಳೂರಿನಲ್ಲಿ ನಡೆದ ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಗೈರುಹಾಜರಾದ ಕಾರಣ, ಸಚಿವ ಯು.ಟಿ. ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಉನ್ನತ ಅಧಿಕಾರಿ ಸಭೆಯಿಂದ ಗೈರುಹಾಜರಾಗುವ ಮುನ್ನ ಲಿಖಿತ ಮಾಹಿತಿ ನೀಡಬೇಕೆಂದು ಖಾದರ್ ಸೂಚಿಸಿದ್ದು, ಇದು ನಿಯಮ ಉಲ್ಲಂಘನೆ ಎಂದು ಆಕ್ಷೇಪಿಸಿದ್ದಾರೆ. ಸಭೆಯಲ್ಲಿ ನಿಯಮ ಪಾಲನೆ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಮಂಗಳೂರು, ಸೆಪ್ಟೆಂಬರ್ 15: ಮಂಗಳೂರಿನಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಗೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಗೈರುಹಾಜರಾಗಿರುವ ಸಂಬಂಧ ಸಚಿವ ಯು.ಟಿ. ಖಾದರ್ ಅವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬದಲಿಗೆ ಡಿಸಿಪಿ ಶ್ಯಾಮ್ ವರ್ಗೀಸ್ ಕಳುಹಿಸಿದ್ದ ಕಮಿಷನರ್ ನಡೆ ಪ್ರಶ್ನಿಸಿದ ಸಚಿವರು, ಪೊಲೀಸ್ ಕಮಿಷನರ್ ಸಭೆಗೆ ಗೈರಾಗಿದ್ದಕ್ಕೆ ಅನುಮತಿ ಪಡೆದಿದ್ದಾರಾ? ಕಾನೂನು ಪಾಠ ಮಾಡ್ತಾರೆ, ಅವರಿಗೆ ಕಾನೂನು ಅನ್ವಯ ಆಗಲ್ವಾ? ಎಂದು ಗರಂ ಆದ ಪ್ರಸಂಗ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

