AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿ ಸಿಂಹ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

ರವಿ ಸಿಂಹ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

ಗಣಪತಿ ಶರ್ಮಾ
|

Updated on: Sep 16, 2026 | 6:16 AM

Share

ಟಿವಿ9 ಡಿಜಿಟಲ್ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ಅವರು 16-09-2026, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನದ ಪಂಚಾಂಗ, ಗ್ರಹಗತಿಗಳು, ಶುಭ ಅಶುಭ ಕಾಲಗಳನ್ನು ತಿಳಿಸುತ್ತಾ, ಪ್ರತಿ ರಾಶಿಗಳಿಗೂ ಆರ್ಥಿಕ, ವೈವಾಹಿಕ, ವೃತ್ತಿ ಮತ್ತು ಆರೋಗ್ಯದ ಕುರಿತು ವಿವರವಾದ ಭವಿಷ್ಯ, ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರ ಜಪದ ಕುರಿತು ಮಾಹಿತಿ ನೀಡಿದ್ದಾರೆ.

ಇಂದು 16 ಸೆಪ್ಟೆಂಬರ್ 2026, ಬುಧವಾರ, ಪರಾಭವ ನಾಮ ಸಂವತ್ಸರದ, ಭಾದ್ರಪದ ಮಾಸದ, ಶುಕ್ಲಪಕ್ಷದ ಪಂಚಮಿ ತಿಥಿ, ವಿಶಾಖಾ ನಕ್ಷತ್ರ, ವೈಧೃತಿ ಯೋಗ ಮತ್ತು ಬಾಲವ ಕರಣ ಇದ್ದು, ರಾಹುಕಾಲ 12:14 ರಿಂದ 1:45ರ ತನಕ ಇರುತ್ತದೆ. ಸರ್ವ ಸಿದ್ಧಿ ಮತ್ತು ಸಂಕಲ್ಪ ಕಾಲ 10:43 ರಿಂದ 12:14ರ ತನಕವಿರುತ್ತದೆ. ಈ ದಿನ ಬುಧವಾರ ಸಾಕ್ಷಾತ್ ವಿಷ್ಣು, ಕಾಲಭೈರವ ಮತ್ತು ವಿನಾಯಕನ ಲಹರಿಗಳು ಪ್ರಬಲವಾಗಿವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದು, ಮೇಷಾದಿ 12 ರಾಶಿಗಳ ದಿನದ ಫಲಾಫಲಗಳನ್ನು ವಿವರಿಸಿದ್ದಾರೆ.

Follow Us