AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಹುಟ್ಟುಹಬ್ಬಕ್ಕೆ ಇತಿಹಾಸ ನಿರ್ಮಾಣ; ಉಜ್ಜಯಿನಿಯಲ್ಲಿ ಬೆಳಗಿದ 33 ಲಕ್ಷ ದೀಪ, ಮಧ್ಯಪ್ರದೇಶದಲ್ಲಿ 3.55 ಕೋಟಿ ದೀಪ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನ ಹಾಗೂ ಅವರ ಸಾರ್ವಜನಿಕ ಸೇವೆಯ 25ನೇ ವರ್ಷದ ನೆನಪಿಗಾಗಿ ಬಿಜೆಪಿ ಹಮ್ಮಿಕೊಂಡಿರುವ 'ಸೇವಾ ಸಂಕಲ್ಪ ಅಭಿಯಾನ'ದ ಭಾಗವಾಗಿ, ಮಧ್ಯಪ್ರದೇಶದ ಪವಿತ್ರ ಧಾರ್ಮಿಕ ನಗರ ಉಜ್ಜಯಿನಿಯ ಶಿಪ್ರಾ ನದಿ ದಂಡೆಯಲ್ಲಿ ಇಂದು ಸಂಜೆ 'ಆಶೀರ್ವಾದ ಕಾ ದಿಯಾ' ಭವ್ಯ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ 33.23 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಲಾಯಿತು. ಉಜ್ಜಯಿನಿಯ ಪ್ರಸಿದ್ಧ ರಾಮ್ ಘಾಟ್ ಸೇರಿದಂತೆ ಶಿಪ್ರಾ ನದಿಯ ವಿವಿಧ ಘಾಟ್‌ಗಳು ಮತ್ತು ಶ್ರೀ ಮಹಾಕಾಲ್ ಲೋಕ ಪ್ರದೇಶದಲ್ಲಿ ಏಕಕಾಲಕ್ಕೆ 33 ಲಕ್ಷಕ್ಕೂ ಹೆಚ್ಚು ದೀಪಗಳಿಂದ ಬೆಳಗಿದವು.

ಮೋದಿ ಹುಟ್ಟುಹಬ್ಬಕ್ಕೆ ಇತಿಹಾಸ ನಿರ್ಮಾಣ; ಉಜ್ಜಯಿನಿಯಲ್ಲಿ ಬೆಳಗಿದ 33 ಲಕ್ಷ ದೀಪ, ಮಧ್ಯಪ್ರದೇಶದಲ್ಲಿ 3.55 ಕೋಟಿ ದೀಪ!
ಉಜ್ಜಯಿನಿಯಲ್ಲಿ ಬೆಳಗಿದ 33 ಲಕ್ಷ ದೀಪImage Credit source: TV9
ಸುಷ್ಮಾ ಚಕ್ರೆ
|

Updated on: Sep 17, 2026 | 10:43 PM

Share

ಉಜ್ಜಯಿನಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಉಜ್ಜಯಿನಿಯಲ್ಲಿ 33.23 ಲಕ್ಷ ದೀಪಗಳ ದೀಪೋತ್ಸವ ನೆರವೇರಿಸುವ ಮೂಲಕ ‘ವಿಶ್ವ ದಾಖಲೆ’ ನಿರ್ಮಿಸಲಾಗಿದೆ. ಮಧ್ಯಪ್ರದೇಶದಾದ್ಯಂತ 3.55 ಕೋಟಿ ದೀಪಗಳನ್ನು ಬೆಳಗಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೭೬ ನೇ ಜನ್ಮದಿನದ ಸವಿನೆನಪಿಗಾಗಿ ಮಧ್ಯಪ್ರದೇಶದ ಪವಿತ್ರ ನಗರ ಉಜ್ಜಯಿನಿಯ ಶಿಪ್ರಾ ನದಿಯ ವಿವಿಧ ಘಾಟ್‌ಗಳಲ್ಲಿ ಏಕಕಾಲಕ್ಕೆ ಬರೋಬ್ಬರಿ 33.23 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಭವ್ಯ ವಿಶ್ವ ದಾಖಲೆಯನ್ನು ನಿರ್ಮಿಸಲಾಗಿದೆ.

ಉಜ್ಜಯಿನಿಯ ಐತಿಹಾಸಿಕ ರಾಮ್ ಘಾಟ್, ದತ್ ಅಖಾಡ ಘಾಟ್ ಮತ್ತು ಸಿದ್ಧವಟ ಪ್ರದೇಶಗಳಲ್ಲಿ ‘ಆಶೀರ್ವಾದ ಕಾ ದಿಯಾ’ ಶೀರ್ಷಿಕೆಯಡಿ ಏಕಕಾಲದಲ್ಲಿ 33.23 ಲಕ್ಷ ದೀಪಗಳನ್ನು ಬೆಳಗಿಸಲಾಯಿತು. ಗಿನ್ನೆಸ್ ಬುಕ್ ಮತ್ತು ವಿಶ್ವ ದಾಖಲೆಗಳ ಪ್ರತಿನಿಧಿಗಳು ಸ್ಥಳದಲ್ಲಿದ್ದು ಪರಿಶೀಲಿಸಿ ಹೊಸ ದಾಖಲೆಯನ್ನು ದೃಢಪಡಿಸಿದ್ದಾರೆ.

ರಾಜ್ಯಾದ್ಯಂತ 3.55 ಕೋಟಿ ದೀಪೋತ್ಸವ:

ಉಜ್ಜಯಿನಿ ನಗರ ಮಾತ್ರವಲ್ಲದೆ ಭೋಪಾಲ್, ಇಂದೋರ್, ಜಬಲ್ಪುರ್, ಗ್ವಾಲಿಯರ್ ಸೇರಿದಂತೆ ಮಧ್ಯಪ್ರದೇಶದ ಪ್ರತಿಯೊಂದು ಗ್ರಾಮ, ಪಂಚಾಯಿತಿ, ನಗರ ಪ್ರಾಧಿಕಾರ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಒಟ್ಟು 3.55 ಕೋಟಿ ದೀಪಗಳನ್ನು ಹಚ್ಚಿ ದೀಪಾವಳಿಯಂತಹ ವಾತಾವರಣವನ್ನು ನಿರ್ಮಿಸಲಾಯಿತು. ಮಧ್ಯಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ರಾಮ್ ಘಾಟ್‌ನಲ್ಲಿ ಶಿಪ್ರಾ ನದಿ ಆರತಿ ನೆರವೇರಿಸಿ, ಪವಿತ್ರ ಜಲಕ್ಕೆ ದೀಪ ಬಿಡುವ ಮೂಲಕ ಈ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಜನ್ಮದಿನ:ಕಾಶಿಯಿಂದ ವಡ್ನಗರದವರೆಗೆ ‘ಸೇವಾ ಸಂಕಲ್ಪ’ ಮೆಗಾ ಬೈಕ್ ಯಾತ್ರೆ, 25 ವರ್ಷಗಳ ಸಾರ್ವಜನಿಕ ಸೇವೆಗೆ ವಿಶೇಷ ಗೌರವ

35 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರ ಶ್ರಮ:

ಈ ಬೃಹತ್ ಕಾರ್ಯಕ್ರಮಕ್ಕಾಗಿ ಸುಮಾರು 35,000ಕ್ಕೂ ಹೆಚ್ಚು ಸ್ವಯಂಸೇವಕರು, ಎನ್‌ಸಿಸಿ ಕೆಡೆಟ್‌ಗಳು ಮತ್ತು ಸ್ಥಳೀಯ ನಾಗರಿಕರು ಕೈಜೋಡಿಸಿದ್ದರು. ಕೇವಲ 15 ನಿಮಿಷಗಳಲ್ಲಿ ಎಲ್ಲಾ ದೀಪಗಳನ್ನು ಬೆಳಗಿಸಿ ನದಿ ದಂಡೆಯನ್ನು ಪೂರ್ಣವಾಗಿ ಪ್ರಜ್ವಲಿಸುವಂತೆ ಮಾಡಲಾಯಿತು. ಮಧ್ಯಪ್ರದೇಶ ಸರ್ಕಾರ ಮತ್ತು ಬಿಜೆಪಿ ಹಮ್ಮಿಕೊಂಡಿರುವ ತಿಂಗಳ ಅವಧಿಯ ‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ ಈ ಐತಿಹಾಸಿಕ ದೀಪೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?