AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪುರಿ ಕಡಲ ತೀರದಲ್ಲಿ ಸುದರ್ಶನ್ ಪಟ್ನಾಯಕ್ ಕೈಯಲ್ಲಿ ಅರಳಿದ ಮೋದಿ ಮರಳು ಕಲಾಕೃತಿ

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪುರಿ ಕಡಲ ತೀರದಲ್ಲಿ ಸುದರ್ಶನ್ ಪಟ್ನಾಯಕ್ ಕೈಯಲ್ಲಿ ಅರಳಿದ ಮೋದಿ ಮರಳು ಕಲಾಕೃತಿ

ನಯನಾ ರಾಜೀವ್
|

Updated on: Sep 17, 2026 | 8:00 AM

Share

ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಕಡಲತೀರದಲ್ಲಿ ಬರೋಬ್ಬರಿ 25 ಅಡಿ ಎತ್ತರದ ಭವ್ಯ ಮರಳು ಕಲಾಕೃತಿಯನ್ನು ರಚಿಸಿದ್ದಾರೆ. ಈ ಆಕರ್ಷಕ ಶಿಲ್ಪವನ್ನು ಸುಮಾರು 2,500 ಮಣ್ಣಿನ ಹಣತೆಗಳಿಂದ ಅದ್ಭುತವಾಗಿ ಅಲಂಕರಿಸಿ, ‘ಆಶೀರ್ವಾದದ ದೀಪ’ ಎಂಬ ಸಂದೇಶವನ್ನು ಸಾರಿದ್ದಾರೆ.

ಪುರಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಕಡಲತೀರದಲ್ಲಿ ಬರೋಬ್ಬರಿ 25 ಅಡಿ ಎತ್ತರದ ಭವ್ಯ ಮರಳು ಕಲಾಕೃತಿಯನ್ನು ರಚಿಸಿದ್ದಾರೆ. ಈ ಆಕರ್ಷಕ ಶಿಲ್ಪವನ್ನು ಸುಮಾರು 2,500 ಮಣ್ಣಿನ ಹಣತೆಗಳಿಂದ ಅದ್ಭುತವಾಗಿ ಅಲಂಕರಿಸಿ, ‘ಆಶೀರ್ವಾದದ ದೀಪ’ ಎಂಬ ಸಂದೇಶವನ್ನು ಸಾರಿದ್ದಾರೆ.

ದೇಶದ ಮೂಲೆ ಮೂಲೆಯಲ್ಲೂ ಜನರು ಭಗವಂತನ ಮುಂದೆ ದೀಪ ಬೆಳಗಿಸಿ ಪ್ರಧಾನಿಯವರ ಆಯುರಾರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದು, ನಾವು ಕೂಡ ಜಗನ್ನಾಥ ಸ್ವಾಮಿಯ ಆಶೀರ್ವಾದ ಸದಾ ಮೋದಿಯವರ ಮೇಲಿರಲಿ ಎಂದು ಈ ಕಲಾಕೃತಿಯ ಮೂಲಕ ಪ್ರಾರ್ಥಿಸಿದ್ದೇವೆ ಎಂದು ಪಟ್ನಾಯಕ್ ತಿಳಿಸಿದ್ದಾರೆ.

ಪದ್ಮಶ್ರೀ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ಪರಿಸರ, ದೇಶಭಕ್ತಿ ಮತ್ತು ಪ್ರಮುಖ ದಿನಗಳ ಸಂದರ್ಭದಲ್ಲಿ ಪುರಿ ಬೀಚ್‌ನಲ್ಲಿ ಜಾಗೃತಿ ಮೂಡಿಸುವ ಮರಳು ಶಿಲ್ಪಗಳನ್ನು ನಿರ್ಮಿಸುವುದರಲ್ಲಿ ವಿಶ್ವಪ್ರಸಿದ್ಧರಾಗಿದ್ದಾರೆ. ಪ್ರಧಾನಿಯವರ ಜನ್ಮದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ಸೇವಾ ಪಾಕ್ಷಿಕ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದರೆ, ಪುರಿ ಕಡಲತೀರದಲ್ಲಿ ಹಣತೆಗಳಿಂದ ಕಂಗೊಳಿಸುತ್ತಿರುವ ಈ ಕಲಾಕೃತಿಯು ಪ್ರವಾಸಿಗರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us