AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anant Nag

Anant Nag

ಅನಂತ್ ನಾಗ್ ಕನ್ನಡ ಚಿತ್ರರಂಗದ ಅತ್ಯಂತ ಪ್ರಭಾವಿ ಹಾಗೂ ಹಿರಿಯ ಅಭಿನೇತೃ. ಮುಂಬೈನ ರಂಗಭೂಮಿಯಿಂದ ತಮ್ಮ ನಟನಾ ಪಯಣವನ್ನು ಆರಂಭಿಸಿದ ಇವರು, 1973ರಲ್ಲಿ ಜಿ. ವಿ. ಅಯ್ಯರ್ ನಿರ್ದೇಶನದ ‘ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ ಮಾತ್ರವಲ್ಲದೆ ಹಿಂದಿ, ಮರಾಠಿ, ತೆಲುಗು ಮತ್ತು ಮಲಯಾಳಂ ಭಾಷೆಗಳ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು ಭಾರತೀಯ ಚಿತ್ರರಂಗದ ದೈತ್ಯ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ‘ಬೆಂಕಿಯ ಬಲೆ’, ‘ಬಯಲು ದಾರಿ’ಯಂತಹ ಪ್ರಸಿದ್ಧ ಕಮರ್ಷಿಯಲ್ ಚಿತ್ರಗಳಲ್ಲಿ ರೋಮ್ಯಾಂಟಿಕ್ ನಾಯಕನಾಗಿ ಮಿಂಚಿದ ಇವರು, ‘ಮಾಲ್ಗುಡಿ ಡೇಸ್’, ‘ಆ್ಯಕ್ಸಿಡೆಂಟ್’ ಹಾಗೂ ಗಣೇಶ ಸರಣಿಯ ಚಿತ್ರಗಳಲ್ಲಿ ಅತ್ಯಂತ ಸರಳ ಮತ್ತು ನೈಜ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇತ್ತೀಚಿನ ‘ಕೆಜಿಎಫ್’ (KGF Chapter 1) ಚಿತ್ರದ ಆನಂದ್ ಇಂಗಳಗಿ ಪಾತ್ರದ ಮೂಲಕ ಇಂದಿನ ಯುವ ಪೀಳಿಗೆಗೂ ತಲುಪಿದ್ದಾರೆ. ನಟನೆಯಷ್ಟೇ ಅಲ್ಲದೆ ಶಾಸಕರಾಗಿ ಮತ್ತು ಕರ್ನಾಟಕ ಸರ್ಕಾರದ ಮಂತ್ರಿಯಾಗಿಯೂ ರಾಜಕೀಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಖ್ಯಾತ ನಟಿ ಗಾಯತ್ರಿ ಅವರನ್ನು ವಿವಾಹವಾಗಿರುವ ಅನಂತ್ ನಾಗ್, ಇಂದು ಚಿತ್ರರಂಗದ ಚಟುವಟಿಕೆಗಳ ನಡುವೆಯೂ ಸೋಷಿಯಲ್ ಮೀಡಿಯಾ ಮತ್ತು ಪ್ರಚಾರದಿಂದ ದೂರವಿದ್ದು ಸರಳ ಜೀವನ ನಡೆಸುತ್ತಿದ್ದಾರೆ.

ಇನ್ನೂ ಹೆಚ್ಚು ಓದಿ

ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ನಿರ್ದಿಷ್ಟ ಪಾತ್ರಗಳ ಕುರಿತು ಯಾವುದೇ ಬೇಸರವಿಲ್ಲ ಎಂದಿದ್ದಾರೆ. ತಮ್ಮ ಕುಟುಂಬದ ಸದಸ್ಯರು ಚಿತ್ರರಂಗಕ್ಕೆ ಬಾರದಿರಲು ಉದ್ಯಮದ ಅಸುರಕ್ಷಿತ ಸ್ವಭಾವವೇ ಕಾರಣ ಎಂದು ವಿವರಿಸಿದ್ದಾರೆ. ಶಂಕರ್ ನಾಗ್ ಅವರ ವೃತ್ತಿಜೀವನ ಮತ್ತು ಕಲಾವಿದರ ಆರ್ಥಿಕ ಸ್ಥಿರತೆಯ ಮಹತ್ವದ ಕುರಿತು ಅನಂತ್ ನಾಗ್ ಬೆಳಕು ಚೆಲ್ಲಿದ್ದಾರೆ.

ತಮ್ಮ ಶಂಕರ್​ ನಾಗ್​​ಗಾಗಿ ಆಯುಧ ಹಿಡಿದು ಜಗಳಕ್ಕೆ ನಿಂತಿದ್ದ ಅನಂತ್​ ನಾಗ್

ಅನಂತ್ ನಾಗ್ ಹಾಗೂ ಶಂಕರ್ ನಾಗ್ ನಡುವೆ ಸುಮಾರು ಆರೇಳು ವರ್ಷಗಳ ವಯಸ್ಸಿನ ಅಂತರ. ಹಾಗಾಗಿ ಶಂಕರ್ ಅವರನ್ನು ತಮ್ಮನಾಗಿ ಎನ್ನುವುದಕ್ಕಿಂತಲೂ ಮಗನಂತೆ ಅನಂತ್ ಕಾಳಜಿ ಮಾಡುತ್ತಿದ್ದರು. ಮುಂಬೈನಲ್ಲಿ ಸಹ ತಮ್ಮ ಜೊತೆಗೇ ಇರಿಸಿಕೊಂಡು ‘ಸಾಕಿದ್ದರು’ ಅನಂತ್ ನಾಗ್. ಒಮ್ಮೆ ಶಂಕರ್ ನಾಗ್ ಅವರ ಕಾರಣಕ್ಕ ಕೈಯಲ್ಲಿ ಆಯುಧ ಹಿಡಿದು ನಿರ್ದೇಶಕನ ಮೇಲೆ ಜಗಳ ಮಾಡಿದ್ದರು ಅನಂತ್ ನಾಗ್.

ಬಾಲಿವುಡ್​​ ಇಂದ ದೂರಾಗಿದ್ದು ಏಕೆ? ಕಾರಣ ಬಿಚ್ಚಿಟ್ಟ ಅನಂತ್ ನಾಗ್

ಹಿಂದಿಯಲ್ಲಿ ಹಲವು ರಾಷ್ಟ್ರಪ್ರಶಸ್ತಿ ವಿಜೇತ ನಟ, ನಿರ್ದೇಶಕರುಗಳೊಟ್ಟಿಗೆ ಅನಂತ್ ನಾಗ್ ಕೆಲಸ ಮಾಡಿದ್ದರು. ಅನಂತ್ ಅವರು ತಮ್ಮ ನಟನಾ ವೃತ್ತಿಯ ಆರಂಭದಲ್ಲಿ ನಟಿಸಿದ್ದ ಹಿಂದಿ ಸಿನಿಮಾಗಳು ಇಂದಿಗೂ ಕಲ್ಟ್ ಎನಿಸಿಕೊಂಡಿವೆ. ಪ್ರಾದೇಶಿಕ ಭಾಷೆಯ ಯಾವುದೇ ನಟರಿಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ಕನಸು, ಆದರೆ ಅನಂತ್ ನಾಗ್ ಅವರಿಗೆ ಆಗಲೇ ಸಾಕಷ್ಟು ಹಿಂದಿ ಸಿನಿಮಾಗಳ ಅವಕಾಶ ಇತ್ತು. ಆದರೆ ಅನಂತ್ ಅವರು ಪ್ರಜ್ಞಾಪೂರ್ವಕವಾಗಿ ಬಾಲಿವುಡ್​​ ಅನ್ನು ತ್ಯಜಿಸಿ ಕನ್ನಡ ಚಿತ್ರರಂಗನ್ನೇ ತಮ್ಮ ಕರ್ಮಭೂಮಿ ಮಾಡಿಕೊಂಡರು, ಅದಕ್ಕೆ ಕಾರಣವನ್ನೂ ಸಹ ಅವರು ನೀಡಿದ್ದಾರೆ.

ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ನೃತ್ಯ ಮಾಡದಕ್ಕೆ ಅನಂತ್ ನಾಗ್ ನೀಡಿದ ಕಾರಣ ಹೀಗಿದೆ

ಅನಂತ್ ನಾಗ್ ಅವರ ಆರಂಭಿಕ ಸಿನಿ ಪಯಣ, ಸಂಕಲ್ಪದಿಂದ ಹಿಡಿದು ಮುಂಬೈನಲ್ಲಿನ ಹಿಂದಿ ನಾಟಕಗಳ ಮೂಲಕ ಅಂಕುರ್ ಚಿತ್ರಕ್ಕೆ ಕಾಲಿಟ್ಟ ಕಥೆ ರೋಚಕವಾಗಿದೆ. ನಂತರ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ತಮ್ಮ ವಿಭಿನ್ನ ನೃತ್ಯ ನಿಲುವು ಮತ್ತು ನಾಟಕ ಹಿನ್ನೆಲೆಯಿಂದಾಗಿ ಕೇವಲ ನಟನೆಯ ಮೂಲಕವೇ ಪ್ರೇಕ್ಷಕರ ಮನ ಗೆದ್ದವರು.

ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ದಿನಗಳ ನೆನಪಿಸಿಕೊಂಡ ಅನಂತ್

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಅನಂತ್ ನಾಗ್ ಅವರು ಕೇವಲ ಚಿತ್ರನಟನಾಗಿರದೇ ರಾಜಕೀಯ ಪಯಣದಲ್ಲಿಯೂ ಅಗಾಧ ಸೇವೆಯನ್ನ ಸಲ್ಲಿಸಿದ್ದಾರೆ. ಹೌದು...ಈ ಹಿಂದೆ ಜೆಹೆಚ್​ ಪಟೇಲ್ ಸರ್ಕಾರದಲ್ಲಿ ಬೆಂಗಳೂರಿನ ನಗರಾಭಿವೃದ್ಧಿ ಸಚಿವರಾಗಿ ದರ್ಬಾರ್ ಮಾಡಿದ್ದಾರೆ. ನಟ ಅನಂತ್ ನಾಗ್ ಅವರ ಸಿನಿಮಾಗೆ ಮಾತ್ರವಲ್ಲದೆ, ಅವರ ಸಕ್ರಿಯ ರಾಜಕೀಯ ಜೀವನ ಹಾಗೂ ಬೆಂಗಳೂರನ್ನು ಮಂತ್ರಿಯಾಗಿ ಆಳಿದ್ದ ಸುವರ್ಣ ಕಾಲದ ಬಗ್ಗೆಯೂ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನಂತ್ ನಾಗ್ ಅವರು ಈ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕಾರ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಇದೀಗ ಅನಂತ್ ನಾಗ್ ಅವರು ಟಿವಿ9 ಜೊತೆಗೆ ಆ ಬಗ್ಗೆ ಮಾತನಾಡಿದ್ದು, ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಘೋಷಣೆಯಾದ ದಿನ ನಡೆದಿದ್ದೇನು ಎಂದು ವಿವರಿಸಿದ್ದಾರೆ. ‘ದಾದಾ ಸಾಹೇಬ್ ಫಾಲ್ಕೆ’ ಪಡೆದ ದಿನ ಆ ಪ್ರಶಸ್ತಿಯ ಮಹತ್ವ ಏನೆಂದು ಗೂಗಲ್ ಕೇಳಿ ತಿಳಿದುಕೊಂಡರಂತೆ ನಟ ಅನಂತ್ ನಾಗ್. ವಿಡಿಯೋ ನೋಡಿ...

ನಿದ್ದೆ ಎಂದರೆ ಸಾವು, ಬೆಳಗ್ಗೆ ಎದ್ದರೆ ಪುನರ್ಜನ್ಮ: ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್

ನಟ ಅನಂತ್ ನಾಗ್ ಅವರು ತಮ್ಮ ಜೀವನ ಪಯಣವನ್ನು ಹಂಚಿಕೊಂಡಿದ್ದಾರೆ. ಹಿಂಜರಿಕೆ, ವೈಫಲ್ಯದ ಭಯ ಮೀರಿ ರಂಗಭೂಮಿ ತಮ್ಮಲ್ಲಿನ ಕಲಾವಿದನನ್ನು ರೂಪಿಸಿತು ಎಂದಿದ್ದಾರೆ. ಮುಂಬೈ ರಂಗಭೂಮಿಯ ಅನುಭವ, ಗುರುಗಳ ಪಾತ್ರ ಹಾಗೂ ನಿದ್ದೆ ಸಾವು, ಬೆಳಗ್ಗೆ ಎದ್ದರೆ ಪುನರ್ಜನ್ಮ ಎಂಬ ಅವರ ಜೀವನದ ದೃಷ್ಟಿಕೋನವನ್ನು ಈ ಸಂದರ್ಶನದಲ್ಲಿ ಅನಾವರಣಗೊಳಿಸಿದ್ದಾರೆ. ಆಶಾವಾದ ಮತ್ತು ದೃಢ ಸಂಕಲ್ಪದ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಹಿರಿಯ ನಟ ಅನಂತ್ ನಾಗ್ ನೇರ ಮಾತು

ಐದು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಕಲಾ ಪಯಣ, ರಂಗಭೂಮಿ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿನ ಅನುಭವ ಹಾಗೂ ಚಿತ್ರರಂಗದ ಸಹಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದ ಅನಂತ್ ನಾಗ್, ಈ ಪ್ರಶಸ್ತಿಯನ್ನು ತಮ್ಮೊಬ್ಬರ ಸಾಧನೆಗಿಂತಲೂ ತಮ್ಮೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಸಮರ್ಪಿಸಿದ್ದಾರೆ. ಇನ್ನು ಪ್ರಶಸ್ತಿ ಸ್ವೀಕರಿಸದ ಸಂದರ್ಭವನ್ನು ಅನಂತ್ ನಾಗ್ ಟಿವಿ9 ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಬಾಲ್ಯದಿಂದ ಹಿಡಿದು ತಮ್ಮ ಜೀವನದ ಯಶೋಗಾಥೆ ಬಗ್ಗೆಯೂ ಎಳೆ ಎಳೆಯಾಗಿ ಹೇಳಿಕೊಂಡಿದ್ದು, ಇದೇ ವೇಳೆ ಪ್ರಸ್ತುತ ರಾಜಕೀಯ ವ್ಯವಸ್ಥೆ ಬಗ್ಗೆಯೂ ತಮ್ಮ ಅಭಿಪ್​ರಾಯವನ್ನು ಹಂಚಿಕೊಂಡಿದ್ದಾರೆ.

‘ಮಹಾನ್ ಕಲಾವಿದ ಅನಂತ್​ ನಾಗ್’: ಅಭಿನಂದನೆ ಸಲ್ಲಿಸಿದ ಅನುಪಮ್ ಖೇರ್

ಭಾರತೀಯ ಚಿತ್ರರಂಗದ ಸಲ್ಲಿಸಲಾದ ಸೇವೆಗೆ ಕೊಡಲಾಗುವ ಅತ್ಯುತ್ತಮ ಪ್ರಶಸ್ತಿ ಎನ್ನಲಾಗುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅನಂತ್ ನಾಗ್ ಅವರಿಗೆ ನೀಡಲಾಗಿದೆ. ಅನಂತ್ ನಾಗ್ ಅವರಿಗೆ ದೇಶದ ಹಲವು ಗಣ್ಯರು, ಸಿನಿಮಾ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಬಾಲಿವುಡ್​​ನ ಖ್ಯಾತ ನಟ ಅನುಪಮ್ ಖೇರ್ ಅವರು ಇದೀಗ ಅನಂತ್ ನಾಗ್ ಅವರಿಗೆ ಅಭಿನಂದನೆ ಸಲ್ಲಸಿದ್ದು, ಅನಂತ್ ಅವರನ್ನು ‘ಮಹಾನ್ ನಟ’ ಎಂದಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಸ್ವೀಕರಿಸಿ ಜನ್ಮಭೂಮಿ, ಕರ್ಮಭೂಮಿಗೆ ನಮಿಸಿದ ಅನಂತ್ ನಾಗ್

ಗುಜರಾತ್​​ನ ಏಕತಾ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಅನಂತ್ ನಾಗ್​ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತ್ ನಾಗ್, ‘ಜನ್ಮ ಭೂಮಿ, ಕರ್ಮ ಭೂಮಿ, ಧರ್ಮ ಭೂಮಿ’ಗೆ ನಮಿಸಿದರು.

ಹೆಮ್ಮೆಯ ಕ್ಷಣ: ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಜೀವಮಾನ ಸಾಧನೆಯನ್ನು ಗುರುತಿಸಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಗುಜರಾತ್​​ನ ಏಕತಾ ನಗರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಭಾರತದ ಹಲವಾರು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಅನಂತ್ ನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಶಂಕರ್ ನಾಗ್ ನಿರ್ದೇಶನದಲ್ಲಿ ಒಟ್ಟಿಗೆ ನಟಿಸಬೇಕಿತ್ತು ಅನಂತ್ ನಾಗ್-ವಿಷ್ಣುವರ್ಧನ್ ಆದರೆ ಆಗಲಿಲ್ಲ

ತಾವು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸಹ ಹೇಳಿಬಿಟ್ಟಿದ್ದಾರೆ. ಇದು ಅನಂತ್ ಅವರ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಅದಕ್ಕಿಂತಲೂ ಬೇಸರ ಮೂಡಿಸುವ ವಿಷಯವೆಂದರೆ ಅನಂತ್ ನಾಗ್ ಅವರಿಗೆ ಒಂದು ಸಿನಿಮಾನಲ್ಲಿ ನಟಿಸಬೇಕೆಂಬ ಆಸೆ ಬಹಳ ಇತ್ತಂತೆ ಆ ಬಗ್ಗೆ ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ಅವರ ಬಳಿ ಮಾತನಾಡಿದ್ದರಂತೆ ಆದರೆ ಅದು ಸಾಧ್ಯವಾಗಲಿಲ್ಲ. ಅದುವೇ ಬಸವಣ್ಣನವರ ಕುರಿತಾದ ಸಿನಿಮಾ.