AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಹಾನ್ ಕಲಾವಿದ ಅನಂತ್​ ನಾಗ್’: ಅಭಿನಂದನೆ ಸಲ್ಲಿಸಿದ ಅನುಪಮ್ ಖೇರ್

ಭಾರತೀಯ ಚಿತ್ರರಂಗದ ಸಲ್ಲಿಸಲಾದ ಸೇವೆಗೆ ಕೊಡಲಾಗುವ ಅತ್ಯುತ್ತಮ ಪ್ರಶಸ್ತಿ ಎನ್ನಲಾಗುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅನಂತ್ ನಾಗ್ ಅವರಿಗೆ ನೀಡಲಾಗಿದೆ. ಅನಂತ್ ನಾಗ್ ಅವರಿಗೆ ದೇಶದ ಹಲವು ಗಣ್ಯರು, ಸಿನಿಮಾ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಬಾಲಿವುಡ್​​ನ ಖ್ಯಾತ ನಟ ಅನುಪಮ್ ಖೇರ್ ಅವರು ಇದೀಗ ಅನಂತ್ ನಾಗ್ ಅವರಿಗೆ ಅಭಿನಂದನೆ ಸಲ್ಲಸಿದ್ದು, ಅನಂತ್ ಅವರನ್ನು ‘ಮಹಾನ್ ನಟ’ ಎಂದಿದ್ದಾರೆ.

‘ಮಹಾನ್ ಕಲಾವಿದ ಅನಂತ್​ ನಾಗ್’: ಅಭಿನಂದನೆ ಸಲ್ಲಿಸಿದ ಅನುಪಮ್ ಖೇರ್
Anant Nag Anupam Kher
ಮಂಜುನಾಥ ಸಿ.
|

Updated on:Sep 23, 2026 | 1:21 PM

Share

ಮುಖ್ಯಾಂಶಗಳು

  • ಅನಂತ್ ನಾಗ್ ಅವರನ್ನು ‘ಮಹಾನ್ ನಟ’ ಎಂದ ಅನುಪಮ್ ಖೇರ್
  • ಅನಂತ್ ನಾಗ್ ಅವರಿಗೆ ಅಭಿನಂದನೆ ಸಲ್ಲಿಸಿದ ಖೇರ್
  • ಅನುಪಮ್ ಖೇರ್ ಹೇಳಿದ್ದೇನು?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ನಿನ್ನೆಯಷ್ಟೆ (ಸೆಪ್ಟೆಂಬರ್ 22) ಗುಜರಾತಿನ ಏಕತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಅನಂತ್ ನಾಗ್ ಅವರು 5 ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಲಾಯ್ತು. ಪ್ರಶಸ್ತಿ ವಿತರಣೆ ವೇಳೆ ದೇಶದ ಹಲವು ಚಿತ್ರರಂಗಗಳಿಂದ ಬಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಹಲವಾರು ಕಲಾವಿದರು ಎದ್ದು ನಿಂತು ಚಪ್ಪಾಳೆ ತಟ್ಟಿ ಅನಂತ್ ನಾಗ್ ಅವರಿಗೆ ಗೌರವ ಸಲ್ಲಿಸಿದರು. ಆ ಬಳಿಕವೂ ಹಲವು ಸಿನಿಮಾ ಸೆಲೆಬ್ರಿಟಿಗಳು ರಾಜಕಾರಣಿಗಳು ಅನಂತ್ ನಾಗ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಬಾಲಿವುಡ್​ ನಟ ಅನುಪಮ್ ಖೇರ್ ಅವರು ಇದೀಗ ಅನಂತ್ ನಾಗ್ ಅವರನ್ನು ‘ಮಹಾನ್ ಕಲಾವಿದ’ ಎಂದು ಕರೆದು ಅಭಿನಂದಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ನಟ ಅನುಪಮ್ ಖೇರ್, ‘ಈ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಭಾರತೀಯ ಚಿತ್ರರಂಗದ ಎಲ್ಲ ಕಲಾವಿದರು, ತಂತ್ರಜ್ಞರು, ಲೇಖಕರಿಗೆ ನನ್ನ ಅಭಿನಂದನೆ. ನನ್ನ ವಿಶೇಷ ಮತ್ತು ಹೃತ್ಪೂರ್ವಕ ಅಭಿನಂದನೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ‘ಮಹಾನ್ ನಟ’ ಅನಂತ್ ನಾಗ್ ಅವರಿಗೆ ಸಲ್ಲಿಸುತ್ತೇನೆ’ ಎಂದಿದ್ದಾರೆ ಖೇರ್.

‘ನಾನು ಅವರ ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ಅವರ ಸಹಜ, ಪ್ರಭಾವಶಾಲಿ ಮತ್ತು ನೈಜವಾದ ನಟನೆಯನ್ನು ಪ್ರಶಂಸಿಸುತ್ತಲೇ ಬಂದಿದ್ದೇನೆ. ಅವರಿಗೆ ನೀಡಲಾಗಿರುವ ಈ ಪ್ರಶಸ್ತಿ, ಅವರ ಅದ್ಭುತ ಪಯಣ, ಅವರು ಚಿತ್ರರಂಗಕ್ಕೆ ನೀಡಿರುವ ಅದ್ಭುತ ಸೇವೆಗೆ ಸಲ್ಲುತ್ತದೆ. ಸಿನಿಮಾ ಒಂದು ‘ಸಾಮೂಹಿಕ ಕಲೆ’. ತೆರೆಯ ಮುಂದೆ ಹಾಗೂ ತೆರೆಯ ಹಿಂದೆ ಅನೇಕ ಪ್ರತಿಭಾಶಾಲಿಗಳಿಂದ ನಾನು ಸದಾ ಪ್ರೇರಣೆಗೊಳ್ಳುತ್ತಲೇ ಇರುತ್ತೇನೆ. ಈ ಬಾರಿ ಪ್ರಶಸ್ತಿಗೆ ಭಾಜರಾದ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು’ ಎಂದಿದ್ದಾರೆ ಅನುಪಮ್ ಖೇರ್.

ಅನುಪಮ್ ಖೇರ್ ವಿಡಿಯೋ

ಅನಂತ್ ನಾಗ್ ಅವರು ಕನ್ನಡ ಮಾತ್ರವಲ್ಲದೆ ಹಿಂದಿಯ ಕೆಲವಾರು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಶ್ಯಾಮ್ ಬೆನಗಲ್, ಸತ್ಯು ಸೇರಿದಂತೆ ಹಲವು ಲಿಜೆಂಡರಿ ನಿರ್ದೇಶಕರುಗಳು, ಸಾಹಿತಿಗಳೊಟ್ಟಿಗೆ ಅನಂತ್ ನಾಗ್ ಕೆಲಸ ಮಾಡಿದ್ದರು. ಇಂದಿಗೂ ಪಾತ್ ಬ್ರೇಕಿಂಗ್ ಎನಿಸಿಕೊಂಡಿರುವ ‘ಅಂಕುರ್’ ಸೇರಿದಂತೆ ಹಲವು ಹೊಸ ಅಲೆಯ ಹಿಂದಿ ಸಿನಿಮಾಗಳಲ್ಲಿ ಆಗಲೇ ಅನಂತ್ ನಾಗ್ ನಟಿಸಿದ್ದರು. ಹಾಗಾಗಿ ಬಾಲಿವುಡ್ಡಿಗರಿಗೂ ಸಹ ಅನಂತ್ ನಾಗ್ ಅವರ ಪರಿಚಯ ಬಹಳ ಚೆನ್ನಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:19 pm, Wed, 23 September 26

Follow Us