AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಳ್ಮೆ, ಧೈರ್ಯ, ಸಹೃದಯತೆಗೆ ಒಲಿದ ಬಿಗ್​​ಬಾಸ್ ಮನೆಯ ಮೊದಲ ಕ್ಯಾಪ್ಟನ್ಸಿ ಪಟ್ಟ

ಬಿಗ್​ಬಾಸ್ ಮನೆಯ ಕ್ಯಾಪ್ಟನ್ ಆಗಲು ಮನೆಯ ಎಲ್ಲ ಮಂದಿ ಪ್ರಯತ್ನಿಸಿದರು. ಕೆಲವರು ಅಡ್ಡ ಹಾದಿ ಹಿಡಿದರು. ವಸ್ತುಗಳನ್ನು ಸಂಗ್ರಹಿಸುವ ಟಾಸ್ಕ್​ ಬಂದಾಗ ಕೆಲವರು ಕಳ್ಳತನ ಮಾಡಿದರೆ, ಕೆಲವರು ದೌರ್ಜನ್ಯ ಮಾಡಿದರು. ಕೆಲವರು ಬಿಗ್​​ಬಾಸ್​ ನಿಯಮವನ್ನೇ ಮುರಿದು, ತಮಗೆ ತೋಚಿದಂತೆ ಆಡಿದರು. ಆದರೆ ಸಂಗೀತಾ ಎಲ್ಲೂ ಸಹ ನಿಯಮ ಮುರಿಯದೆ, ಅಡ್ಡದಾರಿ ಹಿಡಿಯದೆ ಮುಖ್ಯವಾಗಿ ತಾಳ್ಮೆ ಕಳೆದುಕೊಳ್ಳದೆ, ನ್ಯಾಯಯುತವಾಗಿ ಆಟ ಆಡಿ ಫೈನಲ್ ಪ್ರವೇಶ ಮಾಡಿದರು.

ತಾಳ್ಮೆ, ಧೈರ್ಯ, ಸಹೃದಯತೆಗೆ ಒಲಿದ ಬಿಗ್​​ಬಾಸ್ ಮನೆಯ ಮೊದಲ ಕ್ಯಾಪ್ಟನ್ಸಿ ಪಟ್ಟ
Sangeetha Bhatt
ಮಂಜುನಾಥ ಸಿ.
|

Updated on: Sep 18, 2026 | 11:25 PM

Share

ಬಿಗ್​​ಬಾಸ್ ಮನೆಯಲ್ಲಿ ಕ್ಯಾಪ್ಟನ್​​ ಆಗುವುದು ಸಾಧನೆಯೆಂದೇ ಪರಿಗಣಿಸಲಾಗುತ್ತದೆ. ಕ್ಯಾಪ್ಟನ್ ಆಗಲು ಹಲವಾರು ಟಾಸ್ಕುಗಳನ್ನು ಗೆದ್ದು ಬರಬೇಕಾಗುತ್ತದೆ. ಅದರ ಜೊತೆಗೆ ಮನೆಯವರ ವಿಶ್ವಾಸ ಗಳಿಸಬೇಕು, ಕೆಲವರ ಸ್ನೇಹ ಗಳಿಸಿಕೊಂಡರೆ ಕೆಲವರ ವಿರೋಧ ಕಟ್ಟಿಕೊಳ್ಳಬೇಕು. ಅವುಗಳ ಜೊತೆಗೆ ಬಿಗ್​​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಬಿಗ್​​ಬಾಸ್​​ಗೆ ಅಥವಾ ಸುದೀಪ್​​ಗೆ ಉಪನಾಯಕ ಆದಂತೆ. ಬಿಗ್​​ಬಾಸ್ ಮನೆಯ ಕ್ಯಾಪ್ಟನ್​​ಗೆ ವಿಶೇಷ ಗೌರವ ಇರುತ್ತದೆ. ಸಂಗೀತಾ ಭಟ್ ಅವರು ಈ ಸೀಸನ್ನಿನ ಮೊದಲ ಕ್ಯಾಪ್ಟನ್ ಆಗಿದ್ದಾರೆ. ಅವರು ಕ್ಯಾಪ್ಟನ್ ಆಗಿದ್ದಕ್ಕಿಂತಲೂ ಕ್ಯಾಪ್ಟನ್ ಆದ ರೀತಿ ಬಹಳ ವಿಶೇಷವಾದುದು.

ಬಿಗ್​ಬಾಸ್ ಮನೆಯ ಕ್ಯಾಪ್ಟನ್ ಆಗಲು ಮನೆಯ ಎಲ್ಲ ಮಂದಿ ಪ್ರಯತ್ನಿಸಿದರು. ಕೆಲವರು ಅಡ್ಡ ಹಾದಿ ಹಿಡಿದರು. ವಸ್ತುಗಳನ್ನು ಸಂಗ್ರಹಿಸುವ ಟಾಸ್ಕ್​ ಬಂದಾಗ ಕೆಲವರು ಕಳ್ಳತನ ಮಾಡಿದರೆ, ಕೆಲವರು ದೌರ್ಜನ್ಯ ಮಾಡಿದರು. ಕೆಲವರು ಬಿಗ್​​ಬಾಸ್​ ನಿಯಮವನ್ನೇ ಮುರಿದು, ತಮಗೆ ತೋಚಿದಂತೆ ಆಡಿದರು. ಆದರೆ ಸಂಗೀತಾ ಎಲ್ಲೂ ಸಹ ನಿಯಮ ಮುರಿಯದೆ, ಅಡ್ಡದಾರಿ ಹಿಡಿಯದೆ ಮುಖ್ಯವಾಗಿ ತಾಳ್ಮೆ ಕಳೆದುಕೊಳ್ಳದೆ, ನ್ಯಾಯಯುತವಾಗಿ ಆಟ ಆಡಿ ಫೈನಲ್ ಪ್ರವೇಶ ಮಾಡಿದರು.

ಸಂಗೀತಾ ಅವರು ಬಹಳ ಮೃದು, ಸೂಕ್ಷ್ಮ ಎಂದೆಲ್ಲ ಮನೆಯ ಮಂದಿ ಅಂದುಕೊಂಡಿದ್ದರು. ಅದು ನಿಜವೂ ಆಗಿತ್ತು. ಸಂಗೀತಾ ಸಹ ಖುದ್ದು ಈ ಬಗ್ಗೆ ಹೇಳಿಕೊಂಡಿದ್ದರು. ಈ ರೀತಿಯ ಫಿಸಿಕಲ್ ಆಟಗಳು ತಮಗಲ್ಲ ಎಂಬ ಅಭಿಪ್ರಾಯ ಅವರಿಗೂ ಇತ್ತು. ಆದರೆ ಸಂಗೀತಾ ಖುದ್ದು ತಮ್ಮ ಅಧೈರ್ಯಗಳನ್ನು ದಾಟಿದರು. ಫೈನಲ್​​ನಲ್ಲಿ ಭಯವಾದರೂ ಸಹ ಧೈರ್ಯ ಮಾಡಿ ಏಣಿಯನ್ನು ಹತ್ತಿದರು. ಗೆಲುವಿನ ಗುರಿ ತಲುಪಿದರು. ತಮ್ಮ ಬಲ ಹೀನತೆಗಳನ್ನು ಮೀರಿ ಹೊರಬಂದು ಸಂಗೀತಾ ಗೆದ್ದರು. ಆ ಮೂಲಕ ಈ ಸೀಸನ್ನಿನ ಮೊಟ್ಟ ಮೊದಲ ಕ್ಯಾಪ್ಟನ್ ಎನಿಸಿಕೊಂಡರು.

ಇದನ್ನೂ ಓದಿ:Thandav Ram Profile: ಧಾರಾವಾಹಿ, ಸಿನಿಮಾ, ವಿವಾದ ಈಗ ಬಿಗ್​ಬಾಸ್: ತಾಂಡವ್ ರಾಮ್ ಹಿನ್ನೆಲೆಯೇನು?

ಫೈನಲ್​ನಲ್ಲಿ ಸಂಗೀತಾ ಎದುರಿಗೆ ಆಸಿಯಾ ಪ್ರತಿಸ್ಪರ್ಧಿ ಆಗಿದ್ದರು. ಅವರೂ ಸಹ ತಮ್ಮ ಶಕ್ತಿಮೀರಿ ಪ್ರಯತ್ನ ಮಾಡಿದರು. ಆದರೆ ಅವರಿಗೆ ತಮ್ಮ ಬೆಂಬಲಿಗರಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಆದರೆ ಸಂಗೀತಾ ಅವರು ಆಯ್ಕೆ ಮಾಡಿಕೊಂಡಿದ್ದ ಅವಿನಾಶ್ ಹಾಗೂ ಇತರರು ಬಹಳ ಚೆನ್ನಾಗಿ ಆಡಿ ಸಂಗೀತಾ ಅವರನ್ನು ದಡ ತಲುಪಿಸಿದರು. ಸೋತರು ಸಹ ಆಸಿಯಾ ಅವರು ಸಂಗೀತಾ ಅವರ ಗೆಲುವನ್ನು ಸಂಭ್ರಮಿಸಿದರು. ಕ್ರೀಡಾ ಸ್ಪೂರ್ತಿ ಮೆರೆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್